ಸರ್ದಾರ್ ಪಟೇಲ್ ಪುತ್ಥಳಿ ನಿರ್ಮಾಣ ಜಗತ್ತಿನೆಲ್ಲೆಡೆ ಹುಮ್ಮಸ್ಸು ತುಂಬಿದೆ
ಹುಣಸಗಿ: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪುತ್ಥಳಿ ನಿರ್ಮಾಣ ಭಾರತ ಮಾತ್ರವಲ್ಲದೆ ಇಡೀ ಜಗತ್ತಿನ ಭಾರತೀಯರ ಮನಸ್ಸಿನಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ ಎಂದು ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ ಹೇಳಿದರು.
ಪಟ್ಟಣದ ಒಳ ಅಗಸಿಯ ಗಜಾನನ ಕಟ್ಟೆಯಲ್ಲಿ ಶನಿವಾರ ನಡೆದ ಲೋಹ ಸಂಗ್ರಹ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತ, ಗುಜರಾತಿನಲ್ಲಿ ಸ್ಥಾಪಿಸಲಾಗುವ ಪಟೇಲ್ ಅವರ 182 ಅಡಿ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಪ್ರತಿಯೊಬ್ಬರ ಆಶಯವಾಗಿದೆ. ಇಂದು ದೇಶದ ಗಡಿಯಲ್ಲಿ, ಆರ್ಥಿಕ ಮತ್ತು ಕೃಷಿ ಕ್ಷೇತ್ರ, ಶಿಕ್ಷಣ ರಂಗ ಸೇರಿದಂತೆ ಎಲ್ಲ ಕಡೆ ತೀವ್ರ ತೊಂದರೆ, ಅಭದ್ರತೆಯನ್ನು ಕಾಣುತ್ತಿದ್ದೇವೆ.
ಇಂತಹ ಹೊತ್ತಿನಲ್ಲಿ ಪಟೇಲರಂತಹ ವ್ಯಕ್ತಿ ಇರಬೇಕಿತ್ತು ಎಂಬ ಮಾತು ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ ಎಂದು ಗುತ್ತೆದಾರ ಹೇಳಿದರು.
ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ನಾಗಣ್ಣ ಸಾಹು ದಂಡಿನ್, ಹಿರಿಯರಾದ ಬಸಣ್ಣ ದೊರಿ ಮಾತನಾಡಿ, ಲೋಹ ಪುರುಷನಿಗಾಗಿ ಲೋಹ ಸಂಗ್ರಹ ಸ್ಮರಣಿಯ ಕಾರ್ಯ ಎಂದರು.
ಗುಳಬಾಳ ಆನಂದಾಶ್ರಮದ ಮರಿಹುಚ್ಚೇಶ್ವರ ಸ್ವಾಮಿಗಳು ಆಶೀರ್ವರ್ವಚನ ನೀಡಿದರು. ಬಸವರಾಜ ಮೇಲಿನಮನಿ, ಸಂಗನಗೌಡ ಧನರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಡಾ.ಜಿ.ಎಸ್.ಹಿರೇಮಠ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

