ರಿಂಗ್ ರಸ್ತೆ ನಿರ್ಮಾಣಕ್ಕೆ ಒತ್ತಾಯ
ಅಫಜಲ್ಪುರ: ಅಫಜಲ್ಪುರ ಪಟ್ಟಣದ ಸುತ್ತಮುತ್ತಲೂ ಸಾಕಷ್ಟು ಕೈಗಾರಿಕಾ ಪ್ರದೇಶಗಳು ತಲೆ ಎತ್ತಿರುವುದರಿಂದ ಈ ಪಟ್ಟಣಕ್ಕೆ ಭಾರಿ ವಾಹನಗಳು ಮತ್ತು ಸರಕು ಸಾಗಣೆ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಸಣ್ಣ ವಾಹನ ಚಾಲಕರು ಮತ್ತು ಸಾರ್ವಜನಿಕರು ಇದರಿಂದ ತೊಂದರೆ ಅನುಭವಿಸುವಂತಾಗಿದೆ ಎಂದು ಜೈ ಕರವೇ ತಾಲೂಕು ಅಧ್ಯಕ್ಷ ಸುರೇಶ ಅವಟೆ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ಹಮ್ಮಿಕೊಂಡು ಮಾತನಾಡಿ, ಅಫಜಲ್ಪುರ ಪಟ್ಟಣ ಇಂದು ಕೈಗಾರಿಕಾ ವಲಯದ ಗಮನ ಸೆಳೆಯುತ್ತಿದೆ. ಈಗಾಗಲೇ ತಾಲೂಕಿನ ಹಾವಳಗಿಯಲ್ಲಿ ರೇಣುಕಾ ಸಕ್ಕರೆ ಕಾರ್ಖಾನೆ ಇದ್ದು, ಪಕ್ಕದ ಆಳಂದ ತಾಲೂಕಿನ ಭೂಸನೂರು, ಸಿಂಧಗಿ ತಾಲೂಕಿನ ಆಲಮೇಲ ಪಕ್ಕದ ಮಹಾರಾಷ್ಟ್ರದ ದುಧನಿಗಳಲ್ಲಿ ಸಕ್ಕರೆ ಕಾರ್ಖಾನೆಗಳಿವೆ. ಮುಂದಿನ ದಿನಗಳಲ್ಲಿ ಪಟ್ಟಣದ ಸುತ್ತಮುತ್ತ ಇನ್ನೂ ಹಲವಾರು ಕೈಗಾರಿಕಾ ವಲಯ ಸ್ಥಾಪನೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಪಟ್ಟಣಕ್ಕೆ ಉತ್ತಮ ಸರಕು ಸಾಗಣೆ ರಸ್ತೆ ಮತ್ತು ಪಟ್ಟಣದಲ್ಲಿ ವರ್ತುಲ ರಸ್ತೆ ನಿರ್ಮುಸುವುದು ಅಗತ್ಯ ಎಂದರು.
ಪಾದಾಚಾರಿ ರಸ್ತೆ ಇಲ್ಲ: ಪಟ್ಟಣದಲ್ಲಿನ ರಸ್ತೆಗಳು ತುಂಬಾ ಚಿಕ್ಕದ್ದಾಗಿದ್ದು, ಭಾರಿ ವಾಹನಗಳಿಗೆ ಸೂಕ್ತವಾಗಿಲ್ಲ. ಪಾದಾಚಾರಿ ರಸ್ತೆ ಇಲ್ಲದ್ದರಿಂದ ಸಾರ್ವಜನಿಕರೂ ಕೂಡ ಇದೆ ರಸ್ತೆಯ ಮೇಲೆ ತಿರುಗಾಡುತ್ತಿರುತ್ತಾರೆ. ಹೀಗಾಗಿ ಅನೇಕ ಬಾರಿ ಸಮಸ್ಯೆಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ವರ್ತುಲ ರಸ್ತೆಯನ್ನು ನಿರ್ಮಿಸಬೇಕೆಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ನಿರ್ಮಿಸುತ್ತಿರುವ ಸೋಲ್ಲಾಪುರ ಗುಲ್ಬರ್ಗ ರಾಷ್ಟ್ರೀಯ ಹೆದ್ದಾರಿ ಮತ್ತು ಜೇವರ್ಗಿ ಮಹಾರಾಷ್ಟ್ರ ರಾಜ್ಯ ಹೆದ್ದಾರಿಗಳು ಪಟ್ಟಣದ ಮೇಲಿಂದ ಹಾದು ಹೋಗುತ್ತವೆ. ಈ ರಸ್ತೆಗಳ ನಿರ್ಮಾಣದ ಜೊತೆಗೆ ಪಟ್ಟಣಕ್ಕೆ ವರ್ತುಲ ರಸ್ತೆ ಮತ್ತು ಪಾದಾಚಾರಿ ರಸ್ತೆ ನಿರ್ಮಿಸಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜೈ ಕರವೇ ಉಪಾಧ್ಯಕ್ಷ ಮಹಾಂತೇಶ ಗುಣಾರಿ, ರವಿಕಿರಣ ಬೆಟ್ಟಜೇವರ್ಗಿ, ಮಲ್ಲು ಸುತಾರ, ವಿನೋದ ಬಡದಾಳ, ಪರಮೇಶ್ವರ ಶಿರೂರ, ಅಸ್ಪಾಕ್ ಬಂದರವಾಡ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

