ಗುಲ್ಬರ್ಗಾ

ಕುರುಬ ಸಮಾಜದಿಂದ ಸಿಎಂ ಭೇಟಿ, ಮನವಿ

Published On :

ಜೇವರ್ಗಿ: ತಾಲೂಕು ಕುರುಬ ಸಮಾಜದ ಮುಖಂಡರು ಹಾಗೂ ಪದಾಧಿಕಾರಿಗಳು ಈಚೆಗೆ ಬೆಂಗಳೂರಿನಲ್ಲಿ ಭೇಟಿ ಮಾಡಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.
ಇದೇ ಸಂದರ್ಭದಲ್ಲಿ ಕುರುಬ ಸಮಾಜದ ಹತ್ತಾರು ಬೇಡಿಕೆಗಳ ಮನವಿ ಪತ್ರವನ್ನು ಸಿಎಂಗೆ ಸಲ್ಲಿಸಿದರು.
ಪ್ರಮುಖವಾಗಿ ಜೇವರ್ಗಿ ಪಟ್ಟಣದಲ್ಲಿರುವ ಸರ್ವೆ ನಂಬರ್ 307ರಲ್ಲಿ ಸ್ವಾಧೀನದಲ್ಲಿರುವ 2 ಎಕರೆ, 16 ಕುಂಟೆ ಜಮೀನನ್ನು ಸಮಾಜದ ಹೆಸರಿಗೆ ಶೈಕ್ಷಣಿಕ, ಧಾರ್ಮಿಕ ಚಟುವಟಿಕೆಗಳಿಗೆ ಉಪಯೋಗಿಸಲು ಮಂಜೂರು ಮಾಡುವಂತೆ ಕೋರಲಾಯಿತು.
ಆದಷ್ಟು ಶೀಘ್ರದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಕುರುಬ ಸಮಾಜದ ಮುಖಂಡರ ನಿಯೋಗಕ್ಕೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ನಿಂಗಣ್ಣ ಭಂಡಾರಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಪಾಟೀಲ್ ಹರವಾಳ, ಎಪಿಎಂಸಿ ಅಧ್ಯಕ್ಷ ಬಸವಣ್ಣಪ್ಪ ಗೌನಳ್ಳಿ, ನಾಗಣ್ಣ ಗಡ್ಡದ್, ಬಿ.ಹೆಚ್. ಭಂಡಾರಿ, ಶಿವಶರಣ ಮಂದೇವಾಲ್, ಚಂದ್ರು ನೇರಡಗಿ, ಶರಣಗೌಡ ಸರಡಗಿ, ಲಕ್ಕಪ್ಪ ಪೂಜಾರಿ, ಗುಂಡು ಹಂಗರಗಿ, ಸುರೇಶ ಕಟ್ಟಿಸಂಗಾವಿ, ಬಸವರಾಜ ಹಸನಾಪುರ, ಸಿದ್ದಣ್ಣ ಮಯೂರ, ಸಿದ್ದು ಹಂದನೂರ, ಯಲ್ಲಾಲಿಂಗ ಕಲ್ಲಹಂಗರಗಾ ಸೇರಿದಂತೆ ಕುರುಬ ಸಮಾಜದ ಅನೇಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.