ಎಪಿಎಂಸಿ ವಹಿವಾಟು ಅನಿರ್ದಿಷ್ಟಾವಧಿ ಸ್ಥಗಿತ
ಗುಲ್ಬರ್ಗ: ಸರ್ಕಾರ ಅನುಷ್ಠಾನಕ್ಕೆ ತರಲು ಮುಂದಾಗಿರುವ ಮಾರುಕಟ್ಟೆ ನೂತನ ನೀತಿಗೆ ಇದೀಗ ಭಾರಿ ವಿರೋಧ ವ್ಯಕ್ತವಾಗಿದೆ. ಹೊಸ ಕೃಷಿ ಮಾರಾಟ ನೀತಿ-2014 ಈಗಿರುವ ಎಪಿಎಂಸಿ ವ್ಯವಸ್ಥೆಗೆ ಕೊಡಲು ಪೆಟ್ಟು ನೀಡುತ್ತದೆ ಎಂದು ರೈತರು ಹಾಗೂ ವರ್ತಕರು ಸೇರಿಕೊಂಡು ಸದರಿ ನೀತಿ ವಿರೋಧಿಸಿ ಅನಿರ್ದಿಷ್ಟಾವಧಿ ಮಾರುಕಟ್ಟೆ ಬಂದ್ ಹೋರಾಟ ಆರಂಭಿಸಿದ್ದಾರೆ.
ಗುಲ್ಬರ್ಗದಲ್ಲಿ ಆಹಾರ ಧಾನ್ಯ ಮತ್ತು ಬೀಜ ವರ್ತಕರು ಸಂಘಟನೆ ಹೋರಾಟದ ಮುಂಚೂಣಿಯಲ್ಲಿದ್ದು, ಪ್ರಾಂತ ರೈತ ಸಂಘ, ಹಮಾಲರ ಸಂಘಟನೆ, ಸ್ವದೇಶಿ ಜಾಗರಣ ಮಂಚ್, ಎಚ್ಕೆಸಿಸಿಸಿಐ ಸೇರಿದಂತೆ ಹಲವು ಸಂಘಗಳು ಹೋರಾಟಕ್ಕೆ ಬೆಂಬಲಿಸಿವೆ. ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ಆರಂಭವಾಗಿದ್ದು ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುತ್ತದೆ ಎಂದು ಆಹಾರ ಧಾನ್ಯ ಹಾಗೂ ಬೀಜ ವರ್ತಕರ ಸಂಘ ಘೋಷಿಸಿದೆ. ಆಹಾರ ಧಾನ್ಯ ವರ್ತಕರ ಸಂಘದ ಪರವಾಗಿ ಮೋಹನ ಪಂಡಿತ, ಶ್ರೀಮಂತ ಉದನೂರ್, ಎಚ್ಕೆಸಿಸಿಐನ ಅಮರನಾಥ, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

