ಗುಲ್ಬರ್ಗಾ

ಹೈನುಗಾರಿಕೆಯಿಂದ ಜಿಲ್ಲೆ ಸಮೃದ್ಧಗೊಳ್ಳಲಿ

Published On :

ಯಾದಗಿರಿ: ಯುವಕರು ಮತ್ತು ಮಹಿಳೆಯರು ಹೈನುಗಾರಿಕೆಯಲ್ಲಿ ಹೆಚ್ಚೆಚ್ಚು ತೊಡಗಿಸಿಕೋಳ್ಳುವ ಮೂಲಕ ಹೈನುಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡಬೇಕೆಂದು ಗುಲ್ಬರ್ಗ ಹಾಲು ಒಕ್ಕೂಟದ ಜನರಲ್ ಮ್ಯಾನೇಜರ್ ಲಕ್ಷ್ಮೀ ನರಸಪ್ಪ ಹೇಳಿದರು. ನಾಯ್ಕಲ್ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯುವಕರು ಮತ್ತು ಮಹಿಳೆಯರು ಹೈನುಗಾರಿಕೆ ಹೆಚ್ಚಿನ ಆಸಕ್ತಿ ವಹಿಸಬೇಕು. ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಭೀಮಾ ನದಿಗಳಿದ್ದು, ಅಧಿಕ ನೀರಾವರಿ ಪ್ರದೇಶವಿದೆ. ಹೀಗಾಗಿ ರೈತರು ಹೈನುಗಾರಿಕೆಗೆ ಹೆಚ್ಚಿನ ಒಲುವು ತೋರಬೇಕು ಎಂದರು. ಶಹಾಪುರ, ಸುರಪುರ, ಯಾದಗಿರಿ ಭಾಗಗಳಲ್ಲಿ ನೀರಾವರಿ ಪ್ರದೇಶಗಳಿರುವುದರಿಂದ ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ರೈತರು, ಯುವಕರು, ಮಹಿಳೆಯರು ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ತೋರುವುದರಿಂದ ಜಿಲ್ಲೆ ಹೈನುಗಾರಿಕೆಯಿಂದ ಸಮೃದ್ಧಿ ಹೊಂದಬಹುದೆಂದರು.
ತರಬೇತಿ: ಮಹಿಳೆಯರು ಮತ್ತು ಯುವಕರಿಗೆ ಗುಲ್ಬರ್ಗ ಒಕ್ಕೂಟದಲ್ಲಿ ಹೈನುಗಾರಿಕೆ ಕುರಿತು ತರಬೇತಿ ಏರ್ಪಡಿಸಲಾಗುವುದು. ತರಬೇತಿಯಲ್ಲಿ ಭಾಗವಹಿಸಿ ಹೈನುಗಾರಿಕೆ ಬೆಳೆಸಬೇಕು ಎಂದರು. ಪ್ರತಿ ಕುಟುಂಬ ಮತ್ತು ರೈತರು ಸರಿಸುಮಾರು 20ಕ್ಕೂ ಹೆಚ್ಚು ಹಸು ಮತ್ತು ಎಮ್ಮೆಗಳನ್ನು ಸಾಕುವುದರಿಂದ ಕುಟುಂಬದ ಆರ್ಥಿಕ ಸುಧಾರಣೆಗೊಳ್ಳಬಹುದು. ಯುವಕರು ನಿರುದ್ಯೋಗ ಸಮಸ್ಯೆ ತೊಲಗಿಸಬಹುದು. ವಾರ್ಷಿಕ ಲಕ್ಷಾಂತರ ಹಣ ಗಳಿಸಬಹುದು ಎಂದು ಯುವಕರಿಗೆ ಹುರಿದುಂಬಿಸಿದರು. ಜಿಲ್ಲೆಯಲ್ಲಿ ಜಾನುವಾರುಗಳಿಗೆ ನೀರು ಮತ್ತು ಮೇವಿನ ಕೊರತೆ ಅಷ್ಟೊಂದು ಎದುರಾಗದು. ಹೈನುಗಾರಿಕೆಗೆ ಸರ್ಕಾರ ಸಾಕಷ್ಟು ಯತ್ನಿಸುತ್ತಿದೆ. ಬ್ಯಾಂಕ್ಗಳಲ್ಲಿ ಕೂಡ ಸಾಲ ಸೌಲಭ್ಯ ವ್ಯವಸ್ಥೆ ಇರುತ್ತದೆ. ಇದರ ಸದ್ಬಳಕೆ ಮಾಡಿಕೊಂಡು ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.