ಗುಲ್ಬರ್ಗಾ

ಚಿತ್ತಾಪುರ-ಮಳಖೇಡ ರೈಲು ಹಳಿ ಮೇಲೆ ಸ್ಫೋಟಕ ಪತ್ತೆ ಪ್ರಕರಣ ಠುಸ್!

Published On :

ಗುಲ್ಬರ್ಗ: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ, ಗೃಹ ಇಲಾಖೆ, ಆಂತರಿಕ ಭದ್ರತೆ ವಿಭಾಗ, ರೇಲ್ವೆ ಪೊಲೀಸ್ರನ್ನೆಲ್ಲ ತುದಿಗಾಲಲ್ಲಿ ನಿಲ್ಲಿಸಿದ್ದ ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ ಹಾಗೂ ಮಳಖೇಡ ರೈಲು ಹಳಿಗಳ ಮೇಲಿನ ಸ್ಫೋಟಕ ಪತ್ತೆ ಪ್ರಕರಣ ಠುಸ್ ಆಗಿದೆ!
ಹಳಿಗುಂಟ ಸ್ಫೋಟಕ ಅಳವಡಿಸುವಾಗಲೇ ಖದೀಮರೊಂದಿಗೆ ಸೆಣಸಿದೆ ಎಂಬ ಹೇಳಿಕೆ ಕಟ್ಟು ಕಥೆ ಎಂದು ಖುದ್ದು ಕೀಮ್ಯಾನ್ ಪೊಲೀಸರೆದುರೇ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರಿಂದ ಪ್ರಕರಣ ತಣ್ಣಗಾಗಿದ್ದು ಈ ಸಂಗತಿಯನ್ನು ಉನ್ನತ ಮೂಲಗಳು 'ಕನ್ನಡಪ್ರಭ'ಕ್ಕೆ ಖಚಿತಪಡಿಸಿವೆ.
ಸ್ಫೋಟಕ ಮೊದಲು ಮಳಖೇಡ ಹಳಿ ಮೇಲೆ ಕಂಡಿತ್ತು, ತುಸು ಹೊತ್ತಲ್ಲೇ ಚಿತ್ತಾಪುರ ಬಳಿ ಹಳಿಗಳ ಮೇಲೆ ಸ್ಫೋಟಕ ಅಳವಡಿಸುತ್ತಿದ್ದ ನಾಲ್ವರು ಆಗಂತುಕರೊಂದಿಗೆ ಮಾರಾಮಾರಿ ನಡೆಸಿದ್ದಾಗಿ ರೇಲ್ವೆ ಕೀ ಮ್ಯಾನ್ ಹೇಳಿಕೆ ನೀಡಿದ್ದರಿಂದ ಪ್ರಕರಣ ತುಸು ಗಂಭೀರವಾಗಿತ್ತು. ಆದರೆ ಈಗ ಆತನೇ ಚಿತ್ತಾಪುರ ಪೊಲೀಸರೆದುರು ತಪ್ಪೊಪ್ಪಿಕೊಂಡಿದ್ದಾನೆ. ಸಿಮೆಂಟ್ ಫ್ಯಾಕ್ಟರಿಗಳಿಗೆ ವ್ಯಾಗನ್ನಲ್ಲಿ ಕಲ್ಲಿದ್ದಲು ಸಾಗಿಸುವಾಗ ಈ ಸ್ಫೋಟಕ ಬಿದ್ದಿರಬಹುದು ಎಂದು ನಂಬಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.