ಶಾಸಕರ ಬೆಂಬಲಿಗರ ದಬ್ಬಾಳಿಕೆ: ಆರೋಪ
ಹುಣಸಗಿ: ಅಮ್ಮಾಪುರ ಗ್ರಾಮದಲ್ಲಿ ಒಂದು ಕೋಮು ಹೊರತುಪಡಿಸಿ ಉಳಿದವರು ಬದುಕು ಮಾಡಲಾಗದಂತಹ ಪರಿಸ್ಥಿತಿಯನ್ನು ಸದ್ಯದ ಶಾಸಕರ ಬೆಂಬಲಿಗರು ಉಂಟು ಮಾಡಿದ್ದಾರೆ ಎಂದು ಮಾಜಿ ಸಚಿವ ರಾಜೂಗೌಡ ಆರೋಪಿಸಿದ್ದಾರೆ. ಮಂಗಳವಾರ ಹುಣಸಗಿ ಪಟ್ಟಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ನಂತರದಿಂದ ಗ್ರಾಮದಲ್ಲಿ ಸಣ್ಣ-ಪುಟ್ಟ ಘರ್ಷಣೆಗಳೊಂದಿಗೆ ಜಗಳ ಆರಂಭವಾಗಿ ಇಂದು ಪೊಲೀಸ್ ವ್ಯಾನ್ ಕಾಯಂ ಗ್ರಾಮದಲ್ಲಿ ಟಿಕಾಣೆ ಹೂಡುವಂತಾಗಿದೆ. ಇದಕ್ಕೆ ಕಾಂಗ್ರೆಸ್ ಮುಖಂಡ ವಿಠ್ಠಲ್ ಯಾದವ್ ಅವರೇ ನೇರ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಲಿಂಗಾಯತ ಸಮಾಜ ನೆಮ್ಮದಿಯಿಂದ ಬದುಕು ಮಾಡದಂತೆ ಪ್ರತಿನಿತ್ಯ ಕುಡುಕರಿಂದ ಅವಾಚ್ಯ ಶಬ್ದಗಳು, ಹೋಲಕ್ಕೆ ಹೋಗುತ್ತಿರುವವರ ಮೇಲೆ ಹಲ್ಲೆ ನಡೆಯುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ತಾಲೂಕು ಪೊಲೀಸ್ ಇಲಾಖೆ ಇದ್ದೂ ಇಲ್ಲದಂತಾಗಿದೆ. ಕೇವಲ ಒಂದು ಕೋಮಿನ ಜನರ ವಿರುದ್ದ ಪ್ರಕರಣ ದಾಖಲಿಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಸರ್ಕಾರ ವಿಫಲ: ಸರ್ಕಾರ ಹಿಂದುಳಿದ ವರ್ಗಗಳ ಪರ ಎಂದು ಹೇಳಿಕೊಳ್ಳುವ ರಾಜ್ಯದ ಮುಖ್ಯಮಂತ್ರಿ ಅಮ್ಮಾಪುರ ಘಟನೆ ವಿಷಯದಲ್ಲಿ ಜಿಲ್ಲಾಡಳಿತ ನಿರ್ದೇಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಪ್ರಗತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕುಟುಕಿದರು.
ತಕ್ಷಣ ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಮಂತ್ರಿಗಳು, ಆಯುಕ್ತರು, ಮಾನವ ಹಕ್ಕುಗಳ ಆಯೋಗ, ಮಧ್ಯ ಪ್ರವೇಶಿಸಿ ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು. ಇದರಲ್ಲಿ ಯಾರೊಬ್ಬರು ರಾಜಕೀಯ ಬೆರಸಬಾರದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ನಾಗಣ್ಣ ಸಾಹು ದಂಡಿನ್, ಜಿ.ಪಂ. ವಿಪಕ್ಷದ ನಾಯಕ ಪಾಟೀಲ್, ಪ್ರಗತಿ ಪರ ರೈತ ಬಸವರಾಜಸ್ವಾಮಿ ಸ್ಥಾವರಮಠ, ಮುಖಂಡರಾದ ವೀರೇಶ ಚಿಂಚೋಳಿ, ಚನ್ನಯ್ಯಸ್ವಾಮಿ ಹಿರೇಮಠ, ಬಿ.ಎಂ. ಅಳ್ಳಿಕೋಟಿ, ಬಸಣ್ಣ ದೇಸಾಯಿ, ಸಿ.ಎನ್. ದಂಡಿನ್, ಸಿದ್ದನಗೌಡ ಕರಿಭಾವಿ, ಎಮ್.ಎಸ್. ಚಂದಾ, ಅಪ್ಪು ದೇಸಾಯಿ, ಮೌನೇಶ ಚಿಂಚೋಳಿ, ಬಸಣ್ಣ ಬಾಲಗೌಡ್ರ ಸೇರಿ ಅನೇಕರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

