ಗುಲ್ಬರ್ಗಾ

ವ್ಯಕ್ತಿ ಆತ್ಯಹತ್ಯೆ

Published On :

ಚಿಂಚೋಳಿ: ತಾಲೂಕಿನ ಮಿರಿಯಾಣ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಬೇರೊಬ್ಬರ ಬೈಗುಳ ಸಹಿಸದೆ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಗ್ರಾಮದ ಶರಣಪ್ಪಾ ಶಂಕರೆಪ್ಪಾ ಗೊಲ್ಲ (38) ಎಂಬಾತನೇ ಮೃತ ವ್ಯಕ್ತಿ. ಮೃತನ ಪಕ್ಕದ ಮನೆಯವರಾದ ಅಂಜಲಮ್ಮ ಗಾಳಪ್ಪಾ ಮಧ್ಯೆ ಮನೆಯ ಅಂಗಳ ಜಾಗದ ಸಂಬಂಧಿಸಿದಂತೆ ಬಹುದಿನಗಳಿಂದ ಜಗಳವಾಗುತ್ತಿತ್ತು. ಈ ಕುರಿತು ಚಿಂಚೋಳಿ ಸಿವಿಲ್ ನ್ಯಾಯಾಲಯ ಮೃತನ ಪರ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಅಂಜಲಮ್ಮ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಳು. ಹೀಗಾಗಿ ಮನೆಯ ಅಂಗಳದ ಜಾಗದ ಬಗ್ಗೆ ಆಗಾಗ ಜಗಳ ನಡೆಯುತ್ತಲೆ ಇತ್ತು. ಮಂಗಳವಾರ ಸಂಜೆ ಕಟ್ಟಿಗೆ ಹಾಕಿದ ವಿಷಯಕ್ಕೆ ಮತ್ತೆ ಜಗಳವಾಗಿ ಅಂಜಲಮ್ಮ ಮತ್ತು ಆಕೆಯ ಗಂಡ ಗಾಳಪ್ಪಾ ಮಾತಿನ ಅವಮಾನ ಸಹಿಸದೇ ಮನೆಯಲ್ಲಿದ್ದ ಕೀಟನಾಶಕ ಸೇವಿಸಿ ಮೃತಪಟ್ಟಿದ್ದಾನೆಂದು ಪಿಎಸೈ ರಾಘವೇಂದ್ರ ತಿಳಿಸಿದ್ದಾರೆ. ಮೃತನ ತಾಯಿ ಚಂದ್ರಮ್ಮ ಶಂಕರೆಪ್ಪಾ ಗೊಲ್ಲ ಮಿರಿಯಾಣ ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಅಂಜಲಮ್ಮ ಮತ್ತು ಗಾಳಪ್ಪಾ  ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈ ಕುರಿತು ಮಿರಿಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನಿಗೆ 3 ಗಂಡು ಮಕ್ಕಳು, ಒಬ್ಬಳು ಮಗಳಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.