ಗುಲ್ಬರ್ಗಾ

ಸಮಾಜದ ಅಭಿವೃದ್ಧಿಗೆ ಸಹಕಾರ ಅಗತ್ಯ

Published On :

ಗುರುಮಠಕಲ್: ಯಾವುದೇ ಒಂದು ಸಮಾಜದ ಪ್ರಗತಿ ಹಾಗೂ ಅಭಿವೃದ್ಧಿಯಾಗಬೇಕಾದರೆ ಅದಕ್ಕೆ ಸಮಾಜದ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಬ್ರಹ್ಮ ನಾರಾಯಣ ಗುರು ಮಠ ಸೋಲೂರು ಪೀಠಾಧಿಪತಿ ರೇಣುಕಾನಂದ ಶ್ರೀಗಳು ಅಭಿಪ್ರಾಯಪಟ್ಟರು. ಗುರುಮಠಕಲ್ ಪಟ್ಟಣದ ಆರ್ಯ ಈಡಿಗ ಸಮಾಜದ ಯುವಕ ಸಮಿತಿ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಎಲ್ಲ ಸಮಾಜಗಳು ಸಂಘಟನೆಯಿಂದ ಸದೃಢವಾಗಿವೆ ಎಂದರು. ಇದೇ ಸಂದರ್ಭದಲ್ಲಿ ಪಟ್ಟಣದಲ್ಲಿ ಆರ್ಯ ಈಡಿಗ ಸಮಾಜದ ಸಂಘಟನೆಯನ್ನು ಬಲಪಡಿಸಲು ಸಂಘ ರಚನೆ ಮಾಡುವ ಬಗ್ಗೆ ಸೂಚಿಸಲಾಯಿತು. ಪ್ರಮುಖರಾದ ರಾಜೇಂದ್ರ ಕಲಾಲ್, ರಾಜ ರಮೇಶ ಗೌಡ, ವಿಜಯ ಕುಮಾರ ಕಲಾಲ್, ಮಹೇಶ ಕಲಾಲ್(ಎಸ್‌ಪಿ), ಜಗದೀಶ ಕಲಾಲ್ ಚಂಡರಕಿ, ಕಾರ್ತಿಕ ಕಲಾಲ್, ನಾಗರಾಜ ಕಲಾಲ್ ಎಂ.ಟಿ ಪಲ್ಲಿ, ಸುದರ್ಶನ, ಸಂಜು ಸೇರಿದಂತೆ ಆರ್ಯ ಈಡಿಗ ಸಮಾಜದ ಪ್ರಮುಖರು ಇದ್ದರು.
ಸಂಚಾರಿ ಸಹಾಯಕರ ಸಂಘಕ್ಕೆ ನೇಮಕ
ಯಾದಗಿರಿ: ಸಂಸ್ಥೆಯ ಸಂಚಾರಿ ಸಹಾಯಕ ಸಂಘದ ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು. ಸಂಸ್ಥೆಯ ಮಾರುತಿ ಶಾಖಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಚಾರಿ ಸಹಾಯಕರ ಸಂಘದ ರಾಯಚೂರು ವಿಭಾಗದ ಅಧ್ಯಕ್ಷರಾಗಿ ಮಹಾಂಕಾಳಪ್ಪ ಅವರು ನೇಮಕಗೊಂಡರು. ಅದೇ ರೀತಿ ಗೌರವಾಧ್ಯಕ್ಷರಾಗಿ ಮಲ್ಲರೆಡ್ಡಿ, ಉಪಾಧ್ಯಕ್ಷರಾಗಿ ನಾಗಪ್ಪ ಟಿ.ಸಿ., ಈರಣ್ಣ ಎಟಿಐ, ಪ್ರಧಾನ ಕಾರ್ಯದರ್ಶಿಯಾಗಿ ಸುಭಾಷ್ ಅಲ್ಯಾಳ್, ಜಂಟಿ ಕಾರ್ಯದರ್ಶಿಯಾಗಿ ಆದೆಪ್ಪ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆಂದು ಸಂಘದ ಪ್ರಕಟಣೆ ತಿಳಿಸಿದೆ.
ಗುಲ್ಬರ್ಗದಲ್ಲಿ ಇಂದು
ಕಾಡಿದ ಕವಿತೆ: ನಗರದ ಕನ್ನಡ ಭವನದಲ್ಲಿ ಸಾಯಂಕಾಲ 5.15ಕ್ಕೆ ಕಾಡಿದ ಕವಿತೆ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದೆ. ಹಂಪಿ ಕನ್ನಡ ವಿ.ವಿ ಪ್ರಾಧ್ಯಾಪಕ ಡಾ. ಶಿವಾನಂದ ಬಂಟನೂರ ಕಾರ್ಯಕ್ರಮ ಉದ್ಘಾಟಿಸುವರು. ಸೇಡಂ ಸಾಹಿತಿ ಡಾ. ಬಿದರಿ ಚಂದ್ರಕಲಾ, ಸಾಹಿತಿ ಪ್ರೊ. ವೆಂಕಣ್ಣ ಡೊಣ್ಣೆಗೌಡರು ಕವನ ವಾಚಿಸುವರು. ಕಸಾಪ ಜಿಲ್ಲಾದ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು ಉಪಸ್ಥಿತರಿರುವರು.
ದತ್ತಿ ಉಪನ್ಯಾಸ: ಅನುಭವ ಮಂಟಪ ಜಯನಗರದಲ್ಲಿ ಸಂಜೆ 6ಕ್ಕೆ ಲಿಂ.ಶಿವಶಂಕರಪ್ಪ ಭೀಮಳ್ಳಿ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಗುಲ್ಬರ್ಗ ಬಸವ ಸಮಿತಿ ಹಮ್ಮಿಕೊಂಡಿದೆ. ನಿಂಬಾಳ ವಿರಕ್ತಮಠ ಜಡೆಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅಫಜಲ್ಪುರ ಮಾಜಿ ಶಾಸಕ ಎಂ.ವೈ. ಪಾಟೀಲ ಅತಿಥಿಗಳಾಗಿ ಆಗಮಿಸುವರು. ಎಂ.ವೈ. ಸುರಪುರ ಹಾಗೂ ಸಂಗಡಿಗರು ವಚನ ಸಂಗೀತ ನಡೆಸಿಕೊಡುವರು ಎಂದು ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ತಿಳಿಸಿದ್ದಾರೆ.
ವಿತರಣಾ ಸಮಾರಂಭ: ಪಂಡಿತ ರಂಗಮಂದಿರದಲ್ಲಿ ಬೆ.10.30 ಗಂಟೆಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವಿಕಲಚೇತನರಿಗೆ ಸಾಧನ ಸಲಕರಣೆಗಳ ವಿತರಣಾ ಸಮಾರಂಭ ಹಮ್ಮಿಕೊಂಡಿದೆ. ಸಂಸದ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮ ಉದ್ಘಾಟಿಸುವರು. ಸಚಿವ ಖಮರುಲ್ ಇಸ್ಲಾಂ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅಧ್ಯಕ್ಷತೆ ವಹಿಸುವರು.
7ನೇ ವಾರ್ಷಿಕೋತ್ಸವ: ಶೇಖರೋಜಾ ಬಡಾವಣೆಯಲ್ಲಿರುವ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಸಂಜೆ 5.30ಕ್ಕೆ ಸಿದ್ಧಾಂತ ಶಿಖಾಮಣಿ ಪ್ರವಚನ ವೇದಿಕೆಯ 7ನೇ ವರ್ಷದ ವಾರ್ಷಿಕೋತ್ಸವ ನಡೆಯಲಿದೆ. ಕಡಗಂಚಿಶ್ರೀ ಸಾನ್ನಿಧ್ಯ ವಹಿಸುವರು. ಜಿಪಂ ಯಿತ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಜಯಶ್ರೀ ಅಶೋಕ ಸಾವಳೇಶ್ವರ ಕಾರ್ಯಕ್ರಮ ಉದ್ಘಾಟಿಸುವರು. ಹೇರೂರ ಜಿಪಂ ಸದಸ್ಯೆ ಕಮಲಾಬಾಯಿ ಬಸವರಾಜ ಪಾಟೀಲ, ದಿನಗೂಲಿ ನೌಕರರ ಸಂಘ ದುತ್ತರಗಾಂವ ರಾಜ್ಯಾಧ್ಯಕ್ಷ ಚಂದ್ರಶೇಖರ ಸ್ವಾಮಿ ಆಗಮಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.