ಜನಸ್ಪಂದನ ಸಭೆ; ಸಮಸ್ಯೆಗಳ ಮಹಾಪೂರ
ಚಿಂಚೋಳಿ: ತಾಲೂಕಿನ ಗಣಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹೋಬಳಿ ಮಟ್ಟದ ಜನಸ್ಪಂದನಾ ಸಭೆ ಶನಿವಾರ ನಡೆಯಿತು.
ತಹಸೀಲ್ದಾರ್ ಮೋಹನ ಜೋಶಿ ಅಧ್ಯಕ್ಷತೆಯಲ್ಲಿ ಜರುಗಿದ ಜನಸ್ಪಂದನಾ ಸಭೆಯಲ್ಲಿ ಗಣಾಪುರ, ಬುರುಗಪಳ್ಳಿ, ಚಿತ್ರಸಾಲಾ, ಇನ್ನಿತರ ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಲಾಯಿತು.
ಬಸ್ನ ಸಮಸ್ಯೆ, ಶಿಕ್ಷಕರ ಕೊರತೆ, ವೃದ್ಧಾಪ್ಯ ವೇತನ, ಅಂಗವಿಕಲ ಮತ್ತು ವಿಧವಾ ವೇತನ, ಸಂಧ್ಯಾ ಸುರಕ್ಷಾ ವೇತನ ಸರಿಯಾಗಿ ಬರುತ್ತಿಲ್ಲ. ಪ್ರತಿ ತಿಂಗಳು ಕೊಡಿಸುವಂತೆ ಅನೇಕ ವೃದ್ಧರು ತಹಸೀಲ್ದಾರ್ರಿಗೆ ಮನವಿ ಮಾಡಿದರು.
ಜನಸ್ಪಂದನಾ ಸಭೆ ಗ್ರಾಮದ ಹಳೆ ಶಾಲೆ ಆವರಣದಲ್ಲಿ ನಡೆಸಿದರೆ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ ಎಂದು ಗಣಾಪುರ ಗ್ರಾಮಸ್ಥರು ತಹಸೀಲ್ದಾರರಿಗೆ ಅಗ್ರಹಿಸಿದರು.
ಜನಸ್ಪಂದನಾ ಸಭೆಯಲ್ಲಿ ತಹಸೀಲ್ದಾರ್ ಜಗನ್ನಾಥ ರೆಡ್ಡಿ ಧರ್ಮರೆಡ್ಡಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್.ಕೆ. ಟಕ್ಕಳಕಿ, ಜಿಪಂ ಎಇಇ ರೇವಣಸಿದ್ದಪ್ಪಾ ಹಾಗರಗಿ, ಶಿಕ್ಷಣ ಸಂಯೋಜಕ ದೇವೇಂದ್ರಪ್ಪಾ ಹೋಳ್ಕರ್, ವಿಜಯಕುಮಾರ ಬೆಡಸುರ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

