ಮುಖ್ಯ ಎಂಜಿನಿಯರಗಳ ಕುರ್ಚಿ ಕಾದಾಟ: ರೈತರಿಗೆ ಸಂಕಟ
ಕ.ಪ್ರ. ವಾರ್ತೆ ಶಹಾಪುರ ಮಾ.7
ಭೀಮರಾಯನಗುಡಿ ಕೆಬಿಜೆಎನ್ಎಲ್ ಕಚೇರಿಯ ಮುಖ್ಯ ಎಂಜಿನಿಯರ್ ಹುದ್ದೆಗೆ ನೇಮಕವಾದ ಇಬ್ಬರು ಇಂಜಿನಿಯರುಗಳು ಅಧಿಕಾರದ ಹಗ್ಗ-ಜಗ್ಗಾಟದಲ್ಲಿ ತೊಡಗಿ ನ್ಯಾಯಾಲಯದ ಮೆಟ್ಟಿಲೇರಿರುವ ಘಟನೆ ವರದಿಯಾಗಿದೆ.
ಸ್ಥಳೀಯ ಕೆಬಿಜೆಎನ್ಎಲ್ ಮುಖ್ಯ ಎಂಜಿನಿಯರ್ ಆಗಿ ಬಿ. ವೈ. ಜುಮನಾಳ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಜಾಗಕ್ಕೆ ಡಿ. 30ರಂದು ಪ್ರಮೋದರಡ್ಡಿ ಪಾಟೀಲ ನೇಮಕವಾದ ಪ್ರಯುಕ್ತ ಮುಖ್ಯ ಎಂಜಿನಿಯರಾಗಿ ಅಧಿಕಾರಿ ವಹಿಸಿಕೊಂಡರು. ತದನಂತರ ಇಬ್ಬರೂ ಅಧಿಕಾರ ಉಳಿಸಿಕೊಳ್ಳಲು ಅಂದಿನಿಂದ ಕಾನೂನು ಹೋರಾಟ ನಡೆಸಿದ್ದರ ಫಲವಾಗಿ ಕಚೇರಿಗೆ ಪೊಲೀಸ್ ಬಂದೋಬಸ್ತ್ ಕಲ್ಪಿಸುವ ಪರಿಸ್ಥಿತಿ ಬಂದೊದಗಿದೆ.
ಎಂಜಿನಿಯರಗಳ ಅಧಿಕಾರದ ಈ ಹಗ್ಗ-ಜಗ್ಗಾಟಕ್ಕೆ ಇಡೀ ನೀರಾವರಿ ಇಲಾಖೆಯ ಸುಗಮ ಕಾರ್ಯಗಳಿಗೆ ತೊಡಕುಂಟಾಗಿ ತಾಲೂಕಿನೆಲ್ಲೆಡೆ ಇದೊಂದು ಚರ್ಚೆಯ ವಿಷಯವಾಗಿದೆ.
ಇದರಿಂದ ರೈತರ ಹಿತಾಸಕ್ತಿ, ನೀರಾವರಿ ಕೆಲಸ ಕಾರ್ಯಗಳಿಗೆ ಸಂಪೂರ್ಣ ಹಿನ್ನಡೆಯಾಗುತ್ತಿದ್ದು, ಭೀಮರಾಯನಗುಡಿ ವಲಯ ಕಚೇರಿ ರಾಜಕೀಯ ತಾಣವಾಗಿ ಮಾರ್ಪಟ್ಟಿದೆ. ಇಬ್ಬರು ಮುಖ್ಯ ಇಂಜಿನೀಯರಗಳು ಹುದ್ದೆಯನ್ನು ಪ್ರತಿಷ್ಠೆಯನ್ನಾಗಿಸಿಕೊಂಡು ತಮ್ಮ ಪ್ರಭಾವ ಬಳಸಿ ರಾಜಕಾರಣಿಗಳ ಹಿಂಬಾಲಕರೊಡಗೂಡಿ ಕುರ್ಚಿಉಳಿಸಿಕೊಳ್ಳುವ ಯತ್ನದಲ್ಲಿ ತೊಡಗಿದ್ದಾರೆ.
ಮೊದಲಿನ ಸ್ಥಾನದಲ್ಲಿ ಮುಂದುವರಿಯಲು ಜುಮನಾಳ ಸಿದ್ದತೆ ನಡೆಸಿದ್ದಾರೆ. ಇಬ್ಬರ ನಡುವಿನ ಮುಸುಕಿನ ಗುದ್ದಾಟವನ್ನು ಗಂಭೀರವಾಗಿ ಪರಿಗಣಿಸಿದ ಪೋಲಿಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಆಡಳಿತ ಕಚೇರಿ ಮುಂದೆ ಕೆಎಸ್ಆರ್ಪಿ ವ್ಯಾನ್, ಡಿಎಆರ್ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದು ಸೂಕ್ತ ರಕ್ಷಣೆಗೆ ಸಜ್ಜಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

