ಸಮಾಜ ತಿದ್ದುವ ನಿಟ್ಟಿನಲ್ಲಿ ಮಠಗಳ ಸೇವೆ ಸ್ಮರಣೀಯ: ನ್ಯಾ.ಮಳಿಮಠ
ಕ.ಪ್ರ. ವಾರ್ತೆ ಯಾದಗಿರಿ ಮಾ.7
ದೇಶದಲ್ಲಿ ಅನೀತಿ, ಅಸತ್ಯ, ಅಪ್ರಾಮಾಣಿಕತೆಗಳು ತುಂಬಿ ತುಳುಕುತ್ತಿವೆ. ಭ್ರಷ್ಟಚಾರ ಬ್ರಹ್ಮಾಂಡ ಸ್ವರೂಪ ತಾಳಿ ತಾಂಡವವಾಡುತ್ತಿದೆ. ದೇಶ ಅವನತಿಯ ಅಂಚಿಗೆ ಹೋಗುತ್ತಿದೆ. ಆದ್ದರಿಂದ ಸಮಾಜವನ್ನು ಸರಿದಾರಿಗೆ ತರುವ ಕೆಲಸವನ್ನು ಮಠಗಳು ಮಾಡಬೇಕಿದೆ ಎಂದು ಕರ್ನಾಟಕ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ. ವಿ.ಎಸ್. ಮಳಿಮಠ್ ಹೇಳಿದರು.
ತಾಲೂಕಿನ ಅಬ್ಬೆತುಮಕೂರ 59ನೇ ಜಾತ್ರಾಮಹೋತ್ಸವದ ಮಾನವಧರ್ಮ ಸಮಾವೇಶದಲ್ಲಿ ಶ್ರೀ ಮಠದಿಂದ ನೀಡುವ ವಿಶ್ವಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಈ ಭಾಗದಲ್ಲಿ ಸಿದ್ಧಸಂಸ್ಥಾನ ಮಠವು ತ್ರಿವಿಧ ದಾಸೋಹಗಳನ್ನು ನಡೆಸುವ ಮೂಲಕ ಲೋಕ ಕಲ್ಯಾಣ ಕಾರ್ಯಗಳನ್ನು ಸಮರ್ಥವಾಗಿ ಮಾಡಿಇಡೀ ದೇಶದ ಗಮನ ಸೆಳೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉಜ್ಜಯನಿ ಜಗದ್ಗುರುಗಳಾದ ಸಿದ್ದಲಿಂಗರಾಜ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಬೀಜ ಭೂಮಿಯಲ್ಲಿ ಬಿತ್ತಿದಾಗ ಒಂದು ಕಾಳು ನೂರಾರು ಕಾಳುಗಳಾಗಿ ಹೊರಹೊಮ್ಮಿಬರುತ್ತದೆ. ಹಾಗೆಯೇ ಮನುಷ್ಯ ಜನ್ಮ ಶ್ರೇಷ್ಠವಾದುದು. ಮಾನವರಾಗಿ ಜನ್ಮತಾಳಿದ ಮೇಲೆ ನಾಲ್ಕು ಜನರ ಬದುಕಿಗೆ ನೆರವಾಗಬೇಕು. ಅಂತಹ ಜೀವನಕ್ಕೆ ಮೌಲಿಕತೆ ಬರುತ್ತದೆ ಎಂದು ಹೇಳಿದರು.
ನೇತೃತ್ವ ವಹಿಸಿ ಮಾತನಾಡಿದ ಪೀಠಾಧಿಪತಿ ಡಾ. ಗಂಗಾಧರ ಸ್ವಾಮೀಜಿ ಮಾತನಾಡಿ, ಇಡೀ ಮನುಕುಲವನ್ನು ಒಂದೇ ಮುಖವನ್ನಾಗಿ ಕರೆದುಕೊಂಡು ಹೋದವರು, ವಿಶ್ವಾರಾಧ್ಯರು. ಅಂತೆಯೇ ಈ ಮಠದಲ್ಲಿ ಯಾವುದೇ ಜಾತಿ ಬೇಧವಿಲ್ಲ. ಸಕಲ ಜಾತಿಯ ಜನಾಂಗದವರು ಒಂದೇ ಭಾವದಲ್ಲಿ ಈ ಮಠಕ್ಕೆ ಬರುತ್ತಾರೆ. ಅದಕ್ಕಾಗಿಯೇ ವಿಶ್ವಾರಾಧ್ಯ ಅಸಂಖ್ಯಾತ ಭಕ್ತರ ಆರಾಧ್ಯ ದೈವವಾಗಿದ್ದಾನೆ ಎಂದು ಹೇಳಿದರು.
ವೇದಿಕೆ ಮೇಲೆ ಮಾಗಣಗೇರಿ ಡಾ. ವಿಶ್ವಾರಾಧ್ಯ ಶ್ರೀಗಳು, ಕಡಗಂಚಿಯ ವೀರಭದ್ರ ಶಿವಾಚಾರ್ಯರು, ರಾಯಚೂರ ಶಾಂತಮಲ್ಲ ಸ್ವಾಮೀಜಿ, ದೇವದುರ್ಗದ ಕಪಿಲಸಿದ್ದರಾಮ ಸ್ವಾಮೀಜಿ, ಹಲಕರ್ಟಿಯ ಮನೀಂದ್ರ ಶಿವಾಚಾರ್ಯರು, ಶಹಾಪುರದ ಬಸಯ್ಯ ಶರಣರು, ಮಾಜಿ ಸಚಿವ ಸಿದ್ದರಾಮ ಮೇತ್ರೆ, ಶಾಸಕ ಗುರುಪಾಟೀಲ್ ಶಿರವಾಳ ವೇದಿಕೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

