ಗ್ರಾಮೀಣ ಪ್ರತಿಭೆಗೆ ಅವಕಾಶ ಬೇಕು
ಕೆಂಭಾವಿ: ಗ್ರಾಮೀಣ ಭಾಗದಲ್ಲಿ ಇಂದಿಗೂ ಅನೇಕ ಪ್ರತಿಭೆಗಳಿದ್ದು ಸಮರ್ಪಕವಾದ ವೇದಿಕೆ ಮತ್ತು ಪ್ರೋತ್ಸಾಹವಿಲ್ಲದೆ ಆ ಪ್ರತಿಭೆಗಳು ಗ್ರಾಮೀಣ ಮಟ್ಟದಲ್ಲಿಯೇ ಉಳಿದಿವೆ ಎಂದು ಕರಡಕಲ್ನ ಕೋರಿಸಿದ್ದೇಶ್ವರ ಶಾಖಾ ಮಠದ ಶಾಂತರುದ್ರಮುನಿ ಸ್ವಾಮಿಗಳು ನುಡಿದರು. ಸಮೀಪದ ಕನ್ನಳ್ಳಿ ಗ್ರಾಮದ ವಂದೇಮಾತರಂ ನವೋದಯ ತರಬೇತಿ ಕೇಂದ್ರದ ಮೂರನೇ ವರ್ಷದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣದಿಂದ ಮಾತ್ರ ಸರ್ವತೋಮೂಖ ಅಭಿವೃಧ್ಧಿ ಸಾಧ್ಯ. ಶಿಕ್ಷಣ ಪಡೆಯದಿದ್ದರೆ ವ್ಯಕ್ತಿ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಶಿಕ್ಷಕರು ವಿಧ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ನೀಡಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಧಾನಗುರು ಹಣಮಂತರಾವ್ ಹೆಬ್ಬಾಳ್ಕರ್ ಇತರರು ಇದ್ದರು. ಶಾಲೆಯ ಪ್ರಧಾನ ಗುರು ಹಣಮಂತರಾಯ ಅಧ್ಯಕ್ಷತೆ ವಹಿಸಿದ್ದರು.
ಪರಿಸರ ಮಾನವನ ಅಮೂಲ್ಯ ಸಂಪತ್ತು
ಹುಣಸಗಿ: ಪರಿಸರವು ಮಾನವನಿಗೆ ದೊರೆತಿರುವ ಅಮೂಲ್ಯವಾದ ಸಂಪತ್ತಾಗಿದೆ. ಅದನ್ನು ನಾಶ ಮಾಡದೇ ರಕ್ಷಿಸುವಂತಹ ಕೆಲಸವಾಗಬೇಕು ಎಂದು ಉಪನ್ಯಾಸಕ ಮಂಜುನಾಥ ಚಟ್ಟಿ ಹೇಳಿದರು. ಹುಣಸಗಿ ಸಮೀಪದ ಬೆನಕನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಇಕೊ ಕ್ಲಬ್ ವತಿಯಿಂದ ನಡೆದ ಪರಿಸರ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತ, ಇತ್ತೀಚಿನ ದಿನಗಳಲ್ಲಿ ಮನುಷ್ಯ ಕಾಡುಗಳನ್ನು ನಾಶ ಮಾಡುವುದು, ಗಿಡಗಳನ್ನು ನೆಡದೇ ಇರುವುದು, ಇವುಗಳಿಂದ ಮುಂದೆ ಅಪಾರ ನಷ್ಟವನ್ನು ಅನುಭವಿಸಲಿದ್ದಾನೆ. ಆದ್ದರಿಂದ ತಪ್ಪದೇ ಒಬ್ಬರು ಎರಡು ಸಸಿಗಳನ್ನು ನೆಡುವಂತಹ ಕಾರ್ಯವಾಗಬೇಕು ಎಂದರು. ಮುಖ್ಯ ಶಿಕ್ಷಕ ಅಮೀನಸಾ ಮಾತನಾಡಿ, ಪರಿಸರದ ಸಂರಕ್ಷಣೆ ಕುರಿತು ತೆಗೆದುಕೊಳ್ಳಬಹುದಾದ ಕ್ರಮಗಳನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಎಸ್.ಎನ್.ನಾಯ್ಕೋಡಿ, ಗುಂಡಪ್ಪ ಬಡಿಗೇರ ಇತರರು ಇದ್ದರು. ಇಕೊ ಕ್ಲಬ್ ವತಿಯಿಂದ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಸಮಿತಿ ವಿಸರ್ಜನೆ
ಗುಲ್ಬರ್ಗ: ಬಹುಜನ ಜಾಗೃತಿ ವೇದಿಕೆಯ ಜಿಲ್ಲಾ ಸಮಿತಿಯನ್ನು ರಾಜ್ಯಾಧ್ಯಕ್ಷ ಮಹಾಂತೇಶ ಮಂದೇವಾಲ ಅವರ ಆದೇಶದ ಮೇರೆಗೆ ವಿಸರ್ಜಿಸಲಾಗಿದೆ. ಮಾ.15 ರಂದು ಸಭೆ ಸೇರಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗವುದು ಎಂದು ವಿಭಾಗೀಯ ಅಧ್ಯಕ್ಷ ಪ್ರಕಾಶ ಹಾಗರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಸನ್ಮಾನ
ಗುಲ್ಬರ್ಗ: ನಗರದ ಸಂಗಮೇಶ್ವರ ಕಾಲೋನಿಯ ದತ್ತ ಮಂದಿರ ಹತ್ತಿರ ಶಂಕರ ಮಠದಲ್ಲಿ ವೆಂಕಟೇಶ ಪಾಟೀಲ್ ಮಳಖೇಡರ ನೇತೃತ್ವದಲ್ಲಿ ನಗರದ ಸಮಸ್ತ ವಿಪ್ರ ಸಮಾಜದ ವತಿಯಿಂದ ಡಾ. ಕೃಷ್ಣಾಜಿ ಕುಲ್ಕರ್ಣಿಯವರಿಗೆ ಮಾ.15ರಂದು ಸಾಯಂಕಾಲ 5 ಗಂಟೆಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

