ಬಲಿಷ್ಠ ಭಾರತಕ್ಕಾಗಿ ಮತದಾನ ಮಾಡಿ
ಗುಲ್ಬರ್ಗ: ಭಾರತ ದೇಶದ ಬಲಿಷ್ಠ ಪ್ರಜಾತಂತ್ರ ವ್ಯವಸ್ಥೆಯನ್ನು ಬಲಪಡಿಸಲು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ನಾಗರಿಕರು ಕಡ್ಡಾಯವಾಗಿ ಮತ ಚಲಾಯಿಸಬೇಕೆಂದು ಭಾರತ ಚುನಾವಣಾ ಆಯೋಗದ ಸ್ವೀಪ್ ವೀಕ್ಷಕ ರಾಜೀವ್ ಕೆ. ಜೈನ್ ಹೇಳಿದರು.
ತಾಲೂಕಿನ ಖಣದಾಳ ಗ್ರಾಮದಲ್ಲಿ ಶನಿವಾರ ಸ್ವೀಪ್ ಯೋಜನೆಯಡಿ ಆಯೋಜಿಸಿದ್ದ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಸ್ಯೆಗಳನ್ನು ನಿವಾರಣೆ ಸಾಧ್ಯ:ಉತ್ತಮ ಚುನಾಯಿತ ಪ್ರತಿನಿಧಿಗಳ ಆಯ್ಕೆ ಮತದಾನದಿಂದ ಮಾತ್ರ ಸಾಧ್ಯ. ಮತದಾನ ಮಾಡಿದರೆ ಮಾತ್ರ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಚುನಾವಣೆಯ ಪ್ರಕ್ರಿಯೆಯಲ್ಲಿ ಎಲ್ಲ ಮತದಾರರು ಸಕ್ರಿಯವಾಗಿ ಭಾಗವಹಿಸದೇ ಇರುವುದಕ್ಕೆ ಭಾರತ ಚುನಾವಣಾ ಆಯೋಗ ತೀವ್ರ ಆತಂಕಗೊಂಡಿದೆ. ಈ ನಿಟ್ಟಿನಲ್ಲಿ ಮತದಾರರ ಜಾಗೃತಿಗಾಗಿ ಸ್ವೀಪ್ ಯೋಜನೆಯಡಿ ವ್ಯಾಪಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜವಾಬ್ದಾರಿಯ ಅರಿವಿರಬೇಕು:ಮತದಾನದ ಹಕ್ಕು ಮತ್ತು ಕರ್ತವ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಎಲ್ಲ ಮತದಾರರು ಯಾವುದೇ ಆಸೆ ಆಮಿಷಕ್ಕೆ ಬಲಿಯಾಗದೆ ಇದು ನಮ್ಮ ಚುನಾವಣೆ, ನಮ್ಮ ಪ್ರಜಾಪ್ರಭುತ್ವ ಎಂಬ ಭಾವನೆಯಿಂದ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಲ್ಲದೆ ತಮ್ಮ ಸುತ್ತಮುತ್ತಲಿನವರನ್ನು ಮತದಾನ ಮಾಡುವಂತೆ ಪ್ರೇರೇಪಿಸಬೇಕೆಂದು ಹೇಳಿದರು.
ಸಾಕ್ಷರತಾ ಪ್ರೇರಕ ಶರಣಪ್ಪ, ಅಂಗನವಾಡಿ ಕಾರ್ಯಕರ್ತೆ ಅಶ್ವಿನಿ ಮಾತನಾಡಿ, ಮತದಾನ ಪ್ರಮಾಣ ಹೆಚ್ಚಿಸಲು ಕೈಗೊಂಡ ಜಾಗೃತಿ ಕಾರ್ಯಕ್ರಮಗಳ ಕುರಿತು ವಿವರಿಸಿದರು. ವಾರ್ತಾಧಿಕಾರಿ ಜಿ. ಚಂದ್ರಕಾಂತ, ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ದತ್ತಪ್ಪ ತಳವಾರ್, ತಾಲೂಕು ಸಾಕ್ಷರತಾ ಸಮನ್ವಯಾಧಿಕಾರಿ ಗುರುನಾಥ ರಾಠೋಡ್ ಪಾಲ್ಗೊಂಡಿದ್ದರು.
ಸಂಹಿತೆ: ತಂಡ ರಚನೆ
ಗುಲ್ಬರ್ಗ: ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತಿ ಕಾಪಾಡಲು ವಿಡಿಯೊ ಸರ್ವಿಲೆನ್ಸ್ ತಂಡ ಮತ್ತು ವೀಡಿಯೊ ವೀವಿಂಗ್ ತಂಡ ರಚಿಸಲಾಗಿದೆ. ಗುಲ್ಬರ್ಗ ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಡಿಯೊ ಸರ್ವಿಲೆನ್ಸ್ ತಂಡದಲ್ಲಿ ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಪದ್ಮನಾಭ, ವಿಡಿಯೊಗ್ರಾಫರ್, ಉತ್ತರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಗರ ಯೋಜನೆ ಇಲಾಖೆ ಉಪನಿರ್ದೇಶಕ ಪ್ರಕಾಶ ಹಾರಕೂಡ, ವಿಡಿಯೊಗ್ರಾಫರ್ಗಳ ತಂಡ ರಚಿಸಲಾಗಿದೆ. ವಿಡಿಯೋ ವೀವಿಂಗ್ ತಂಡ ದಕ್ಷಿಣ ಕ್ಷೇತ್ರಕ್ಕೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ನಾರಾಯಣಸ್ವಾಮಿ, ಗುಮಾಸ್ತ (ಉತ್ತರ ಕ್ಷೇತ್ರ) ನಗರ ಯೋಜನಾ ಇಲಾಖೆ ಸಹಾಯಕ ನಿರ್ದೇಶಕ ಸುನಿಲ್ರನ್ನು ನೇಮಿಸಲಾಗಿದೆ.
ನೋಡಲ್ ಅಧಿಕಾರಿ ನೇಮಕ
ಗುಲ್ಬರ್ಗ: ಜಿಲ್ಲೆಯಲ್ಲಿ ಅಂಚೆ ಮತಪತ್ರ, ಸೇವಾ ಮತದಾರರ ಪಟ್ಟಿ ಸಿದ್ಧಪಡಿಸಲು ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರವಿಕಿರಣ ಒಂಟಿ ಅವರನ್ನು ಜಿಲ್ಲಾ ನೊಡಲ್ ಅಧಿಕಾರಿಯಾಗಿ ನೇಮಿಸಿ ಸಹಾಯಕ ಚುನಾವಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ಸಾಕಷ್ಟು ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ. ಕರ್ತವ್ಯನಿರತ ಈ ಸಿಬ್ಬಂದಿಗೆ ಮತದಾನದ ಹಕ್ಕು ಕಾಪಾಡುವ ದೃಷ್ಟಿಯಿಂದ ಅಂಚೆ ಮತಪತ್ರ ಮತ್ತು ಸೇವಾ ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಜಿಲ್ಲಾ ನೊಡಲ್ ಅಧಿಕಾರಿಗೆ ಸಹಾಯಕ ಸಿಬ್ಬಂದಿಗಳಾಗಿ ವಿಶ್ವನಾಥ ಮಲಕೂಡ, ಪದ್ಮಜಾ ಮುಂತಾದವರು ಕಾರ್ಯನಿರ್ವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

