ಗೆದ್ದು ಬಂದರೆ ಮೋದಿಗೆ ಬೆಂಬಲ'
ಆಳಂದ: ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬಂದರೆ ನರೇಂದ್ರ ಮೋದಿಗೆ ಬೆಂಬಲಿಸಲಾಗುವುದು ಎಂದು ಭಾರತೀಯ ಪೀಪಲ್ಸ್ ಪಾರ್ಟಿಯ ಬೀದರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಶ್ವಂತ ಹತ್ತರಕಿ ತಿಳಿಸಿದ್ದಾರೆ.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಲವು ದಶಕಗಳಿಂದಲೂ ಹೋರಾಟದ ಮೂಲಕ ಜನರಿಗೆ ನ್ಯಾಯ ಒದಗಿಸಲು ಪ್ರಯತ್ನಿಸಿರುವ ನಾನು ಈ ಬಾರಿ ಸ್ವತಃ ಲೋಕಸಭಾ ಚುನಾವಣೆಯ ಕಣಕ್ಕಿಳಿಯುವ ಮೂಲಕ ಪ್ರದೇಶದ ಅಭಿವೃದ್ಧಿಗೆ ಬದ್ಧನಾಗಿ ನಿಂತಿರುವೆ. ಮತದಾರರು ಹೆಚ್ಚಿನ ಮತಗಳನ್ನು ಹಾಕಿ ಗೆಲ್ಲಿಸಬೇಕೆಂದು ಅವರು ಮನವಿ ಮಾಡಿದರು.
1988ರಲ್ಲಿ ಆಳಂದ ಪುರಸಭೆ ಸದಸ್ಯನಾಗಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜನ ಸೇವೆ ಆರಂಭಿಸಿದ್ದು, ಕಾಂಗ್ರೆಸ್ ನಗರ ಅಧ್ಯಕ್ಷನಾಗಿದ್ದೆ. ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಟಿಕೆಟ್ ನೀಡದ ಕಾರಣ ಪಕ್ಷಬಿಟ್ಟು ಹೊರಬಂದ ಮೇಲೆ ಡಾ. ಸುಬ್ರಹ್ಮಣ್ಯ ಸ್ವಾಮಿ, ವಿಜಯಮಲ್ಯ ನೇತೃತ್ವದಲ್ಲಿ ಎಂಎಲ್ಸಿ ಟಿಕೆಟ್ ಪಡೆದುಕೊಂಡಿದ್ದೆ. ಮಾಜಿ ಸಚಿವ ವೈಜನಾಥ ಪಾಟೀಲ ಜೊತೆಯಲ್ಲಿ 371(ಜೆ) ಕಲಂ ಜಾರಿಗೆ ಹೋರಾಟ ನಡೆಸಿದ್ದೇನೆ. ಗುಲ್ಬರ್ಗ ನಗರದಲ್ಲಿ ಹೆಲ್ಮೆಟ್ ನಿಷೇಧ ವಿರುದ್ಧ ಹೋರಾಟ ಕೈಗೊಳ್ಳಲಾಗಿದೆ. ರಸ್ತೆ ಅಗಲೀಕರಣಕ್ಕಾಗಿ ಅಲ್ಲದೆ, ಮನ್ನಾಖೇಳಿ ನಿರ್ಣಾದಲ್ಲಿ 110 ವಿದ್ಯುತ್ ಘಟಕ ಸ್ಥಾಪನೆ ಸೇರಿದಂತೆ ಹತ್ತು ಹಲವು ರೀತಿಯಲ್ಲಿ ಜನಪರ ಹೋರಾಟ ಮಾಡುತ್ತಾ ಬಂದಿರುವ ನಮಗೆ ಜನರು ಅಧಿಕಾರ ಕೊಡಲು ಈ ಬಾರಿ ಮುಂದಾಗಿದ್ದಾರೆ ಎಂದು ಹತ್ತರಕಿ ಹೇಳಿದರು.
ಬೀದರ್ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿವೆ. ಅಭಿವೃದ್ಧಿ ಕೆಲಸ ಮಾಡಿಲ್ಲ. ಗೆದ್ದು ಬಂದರೆ ರಸ್ತೆ, ನೀರಾವರಿ, ವಿದ್ಯುತ್ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು. ಮತಬಾಂಧವರು ಹೆಂಡ, ಹಣಕ್ಕೆ ಮಾರುಹೋಗದೆ ಕ್ಷೇತ್ರದ ಮತ್ತು ಭವಿಷ್ಯಕ್ಕಾಗಿ ಭಾರತೀಯ ಪಿಪಲ್ಸ್ ಪಕ್ಷಕ್ಕೆ ಮತ ನೀಡಿ ಎಂದರು. ಗೋಷ್ಠಿಯಲ್ಲಿ ಗುರುಲಿಂಗಪ್ಪಾ ತಾಂಬೆ ಕಣಮುಸ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

