ಗುಲ್ಬರ್ಗಾ

ಶಿಲ್ಪಕಲಾ, ಚಿತ್ರಕಲಾ ಪ್ರದರ್ಶನ

Published On :

ಗುಲ್ಬರ್ಗ: ನಗರದ ವಿಶ್ವೇಶ್ವರಯ್ಯ ತಾಂತ್ರಿಕ ಶಿಲ್ಪಕಲಾ ಮಹಾವಿದ್ಯಾಲಯದಲ್ಲಿ ಬಸವ ಜಯಂತಿ ನಿಮಿತ್ತ ಶುಕ್ರವಾರ ಶಿಲ್ಪಕಲಾ ಮತ್ತು ಚಿತ್ರಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಖ್ಯಾತ ಚಿತ್ರಕಲಾವಿದೆ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯೆ ಡಾ. ವಿಶ್ವೇಶ್ವರಿ ತಿವಾರಿ ಪ್ರದರ್ಶನ ಉದ್ಘಾಟಿಸಿದರು. ಚಿತ್ರಕಲಾವಿದ ಲಕ್ಷ್ಮಿಕಾಂತ ಮನೋಕರ್, ಕೆ.ಎಸ್. ಸರೋದೆ, ಶ್ರೀಶೈಲ ಗುಡೆದ, ಜೆ.ಎಸ್. ಖಂಡೆರಾವ, ಸಿ.ಬಿ. ಸೋಮಶೆಟ್ಟಿ, ಎಸ್.ಎಸ್. ಶಿಂಪಿ, ಡಾ. ಸುಬ್ಬಯ್ಯ ನೀಲಾ, ಉದಯಕುಮಾರ ಬಗಲಿ, ಡಾ. ಶಾಹೆದ ಪಾಶರವರ ಕಲಾ ಕೃತಿಗಳನ್ನು ಪ್ರದರ್ಶಿಸಲಾಗಿದೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯೆ ಡಾ. ವಿಶ್ವೇಶ್ವರಿ ತಿವಾರಿಗೆ ಸನ್ಮಾನಿಸಲಾಯಿತು. ಕಲಾವಿದರು ಹಾಗೂ ಇಂಡಿಯನ್ ರಾಯಲ್ ಅಕಾಡೆಮಿ ಅಧ್ಯಕ್ಷ ಡಾ. ರೆಹಮನ ಪಟೇಲ, ವಿದ್ಯಾಲಯದ ಪ್ರಾಚಾರ್ಯ ರಂಗನಾಥ ಕೊಮಾರಿ, ತಾರಾಬಾಯಿ ಹಾಗೂ ಸುದೇವಿ ಆರ್.ಎಂ. ಇತರರು ಇದ್ದರು. ಪ್ರದರ್ಶನ ಮೇ 5ರವರೆಗೂ ಇರಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.