ಗುಲ್ಬರ್ಗಾ

ಮರಳು ಸಾಗಣೆ ಪರವಾನಗಿ ನೀಡುವಂತೆ ನಾಗರಿಕರ ಮನವಿ

Published On :

ಚಿತ್ತಾಪುರ: ತಾಲೂಕಿನಲ್ಲಿ ಮರಳು ಸಾಗಣೆಗಾಗಿ ಪರವಾನಗಿ ನೀಡಬೇಕೆಂಬ ಮನವಿ ಪತ್ರವನ್ನು ನಾಗರಿಕರು ಕಂದಾಯ ಇಲಾಖೆಯ ಶಿರಸ್ತೇದಾರ ಸಿದ್ರಾಮಪ್ಪ ನಾಚವಾರವರಿಗೆ ಸಲ್ಲಿಸಿದರು.
ಮುಖಂಡರಾದ ನಾಗರೆಡ್ಡಿ ಪಾಟೀಲ್ ಕರದಾಳ, ಮುಕ್ತಾರ ಪಟೇಲ್, ಮಲ್ಲಿಕಾರ್ಜುನ ಬೆಣ್ಣೂರಕರ್, ಪುರಸಭೆ ಸದಸ್ಯರಾದ ನಾಗರಾಜ ಭಂಕಲಗಿ, ವಿನೋದ ಗುತ್ತೇದಾರ, ಉದಯಕುಮಾರ ಸಾಗರ, ಬೆಂಜಿ ಮೋಹನ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ಕಾಮಗಾರಿ ಸ್ಥಗಿತ: ಮರಳು ಸಾಗಾಣಿಕೆ ಸ್ಥಗಿತಗೊಳಿಸಿರುವುದರಿಂದ ಸರ್ಕಾರದ ಯೋಜನೆಗಳಾದ ಉದ್ಯೋಗ ಖಾತ್ರಿ, ಸುವರ್ಣಗ್ರಾಮ ಕಾಮಗಾರಿಗಳಾದ ಸಿಮೆಂಟ್ ರಸ್ತೆ, ಒಳಚರಂಡಿ, ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡಿವೆ. ಅನೇಕ ಸಾಮಾನ್ಯ ಜನರ ಮನೆ ಅಂಗಡಿಗಳನ್ನು ಕಟ್ಟಡ ಕಟ್ಟಿಕೊಳ್ಳಲು ಮರಳು ಅತಿ ಅವಶ್ಯವಾಗಿದೆ. ಮರಳು ನಿಷೇಧದಿಂದಾಗಿ ಕಟ್ಟಡಗಳು ನಿರ್ಮಿಸದೇ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಅನುಮತಿ ನೀಡಿ: ಚಿತ್ತಾಪುರ ತಾಲೂಕಿನಲ್ಲಿ ಮರಳು ನಿಷೇಧ ಇರುವುದರಿಂದ ಬೇರೆ ಜಿಲ್ಲೆಗಳಿಂದ ರಾತ್ರೋರಾತ್ರಿ ಮರಳು ಸಾಗಾಣಿಕೆ ನಡೆಯುತ್ತಿದೆ. ಇದರಿಂದ ಕಟ್ಟಡ ಕಾರ್ಮಿಕರು ಹಾಗೂ ಟ್ರ್ಯಾಕ್ಟರ್ ಚಾಲಕರು ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ. ಇದರಿಂದಾಗಿ ಸರ್ಕಾರದ ಯೋಜನೆಗಳು ಅನುಷ್ಠಾನಗೊಳಿಸಲು ಹಾಗೂ ಸಾರ್ವಜನಿಕರು ಸರಳ ರೀತಿಯಲ್ಲಿ ಮನೆ ನಿರ್ಮಿಸಿಕೊಳ್ಳಲು ಮುಕ್ತವಾಗಿ ಮರಳು ಸಾಗಾಣಿಕೆಗೆ ಪರವಾನಗಿ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಮುಖಂಡರಾದ ಅಶೋಕ ರಾಠೋಡ, ಬಾಲಯ್ಯ ಗುತ್ತೇದಾರ, ಕಿಶನ್ ಚವ್ಹಾಣ, ಸಂತೋಷ ಗುತ್ತೇದಾರ, ಶಿವಶರಣಪ್ಪ ಮ್ಯಾಗೇರಿ, ಶಂಕರ ಕಾಶಿ, ಗೋಮು ಚವ್ಹಾಣ, ಬಸವರಾಜ ಪೂಜರಿ, ನಾಸೀರ್ ನಂದಿಹಾಳ್, ಮೋಹನ ರಾಠೋಡ, ಯಲ್ಲಪ್ಪ ಹಳ್ಳಿ, ಭೀಮಯ್ಯ ಗುತ್ತೆದಾರ, ಶ್ರೀನಿವಾಸಗೌಡ ಯರಗಲ್, ರಾಮು ರಾಠೋಡ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.