ಗುಡಿಸಲುಗಳಿಗೆ ಮುಕ್ತಿ ಎಂದು?
ಕನ್ನಡಪ್ರಭ ವಾರ್ತೆ ಮುದಗಲ್ ಮೆ 9
ರಾಜ್ಯ ಸರ್ಕಾರ ರಾಜ್ಯದ ಗ್ರಾಮೀಣ ಪ್ರದೇಶ, ಪಟ್ಟಣ ಪ್ರದೇಶಗಳನ್ನು ಗುಡಿಸಲುಮುಕ್ತ ರಾಜ್ಯವನ್ನಾಗಿ ಮಾಡುವುದಾಗಿ ಹಿಂದಿನ ಬಿಜೆಪಿ ಸರ್ಕಾರ ದೊಡ್ಡ ಪ್ರಚಾರ ಪಡೆಯಿತು. ಆದರೆ ಇನ್ನೂ ಗುಡಿಸಲುಗಳಿಗೆ ಮುಕ್ತಿನೆ ದೊರೆತಿಲ್ಲ.
ರಾಜ್ಯ ಸರ್ಕಾರ ಗುಡಿಸಲು ಮುಕ್ತಗೊಳಿಸುವುದಕ್ಕಾಗಿ ಇಂದಿರಾ, ಬಸವ ಮನೆಗಳ ಯೋಜನೆಗಳನ್ನು ಜಾರಿಗೆ ತಂದಿತು. ಆಯಾ ಗ್ರಾ.ಪಂ.ಗಳಲ್ಲಿರುವ ಗುಡಿಸಲು ವಾಸಿಗಳ ಸರ್ವೇ ಕೂಡ ಮಾಡಿದೆ. ಆದರೆ ಮನೆಗಳ ಫಲಾನುಭವಿಗಳ್ನನ್ನು ಅವೈಜ್ಞಾನಿಕವಾಗಿ ಆಯ್ಕೆ ಮಾಡಿದ್ದರಿಂದ ಗುಡಿಸಲು ವಾಸಿಗಳಿಗೆ ಮನೆಗಳಲ್ಲಿ ವಾಸ ಮಾಡುವ ಭಾಗ್ಯ ಇನ್ನು ಸಿಕ್ಕಿಲ್ಲ.
ಪಟ್ಟಿ ಸಿದ್ಧ: ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಗುಡಿಸಲು ರಹಿತ ಗ್ರಾಮ ಯೋಜನೆಯಲ್ಲಿ ಸುಮಾರು ರು. 75 ಸಾವಿರ ವೆಚ್ಚದಲ್ಲಿ ಪ್ರತಿ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಸಾವಿರ ಮನೆಗಳ ನಿರ್ಮಾಣ ಮಾಡಲು ಬಸವ, ಇಂದಿರಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಅದರಂತೆ ಫತಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಆದರೆ ಮೊದಲ ಹಂತದಲ್ಲಿನ ಫಲಾನುಭವಿಗಳನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಕಳುಹಿಸಿದೆ.
ಸರ್ಕಾರಕ್ಕೆ ವರದಿ: ಗುಡಿಸಲು ವಾಸಿಗಳನ್ನು ಗುರ್ತಿಸುವಲ್ಲಿ ಸರ್ವೇ ಮಾಡಬೇಕಿದ್ದ ಗ್ರಾಪಂಗಳಲ್ಲಿ ರಾಜಕೀಯ ಒತ್ತಡದಿಂದ ಅರ್ಹ ಫಲಾನುಭವಿಗಳನ್ನು ಗುರುತಿಸದೆ, ಕೆಲವೇ ರಾಜಕೀಯ ವ್ಯಕ್ತಿಗಳ ಹಿಂಬಾಲಕರ ಹೆಸರನ್ನು ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಿದರು.
ಗ್ರಾ.ಪಂ. ಮೊದಲು ಗುಡಿಸಲು ಪಟ್ಟಿಯನ್ನು ಸಿದ್ಧಪಡಿಸಿ, ವರದಿಯನ್ನು ಸರ್ಕಾರಕ್ಕೆ ನೀಡಿದೆ. ನಂತರ ಕೆಲವೇ ಮುಖಂಡರ, ಸದಸ್ಯರ ಒತ್ತಡಕ್ಕೆ ಮಣಿದು ತಗಡಿನ ಶೆಡ್ನಲ್ಲಿ ವಾಸಿಸುವವರನ್ನು ಗುಡಿಸಲಿನಲ್ಲಿ ವಾಸಿಸುವರು ಎಂದು ಫಲಾನುಭವಿಗಳ ಹೆಸರು ನೀಡಲಾಯಿತು.
ಜೋಪಡಿ ವಾಸ: ನಾಗಲಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ತೊಡಕಿ ಗ್ರಾಮದಲ್ಲೂ ಸಮಸ್ಯೆಗಳು ಕಾಣಸಿಗುತ್ತಿವೆ. ಸುಮಾರು 30 ಕ್ಕೂ ಹೆಚ್ಚು ಬಡ ಕುಟುಂಬಗಳು ಜೋಪಡಿಯಲ್ಲಿಯೇ ವಾಸವಾಗಿವೆ. ನಾಗಲಾಪುರ ಗ್ರಾಪಂಗೆ 2010-11ರಲ್ಲಿ 95 ಇಂದಿರಾ ಅವಾಜ್ ಮನೆಗಳು ಮಂಜೂರಾಗದೇ ವಸತಿ ನಿಗಮದಿಂದ ರದ್ದಾಗಿವೆ. ಮತ್ತೆ 88 ಹೆಚ್ಚುವರಿ ಮನೆಗಳು ಸಮಯಕ್ಕೆ ಸರಿಯಾಗಿ ಗ್ರಾ.ಪಂ. ಆಡಳಿತ ಕ್ರಿಯಾ ಯೋಜನೆ ತಯಾರಿ ಸದ ಕಾರಣ ಆ ಮನೆಗಳು ಸಹ ಮಂಜೂರಾಗಿಲ್ಲ.
ಬಸವ ವಸತಿ ಯೋಜನೆಯಡಿ ಮನೆಗಳು ಗ್ರಾಮಕ್ಕೆ ಮಂಜೂರು ಮಾಡಲಾಗಿದೆ ಎಂದು ಹೇಳಿಕೊಳ್ಳುವ ಗ್ರಾಪಂ ಆಡಳಿತ ಯೋಜನೆ ಅನುಷ್ಠಾನಕ್ಕೆ ತರುವಲ್ಲಿ ಮೀನಾಮೇಷ ಏಣಿಸುತ್ತಿದೆ. ಪ್ರತಿವರ್ಷ ಸರ್ಕಾರದಿಂದ ಬಂದ ಮನೆಗಳನ್ನು ಸರಿಯಾದ ರೀತಿಯಲ್ಲಿ ಹಂಚಿಕೆ ಮಾಡಿದರೆ ಗ್ರಾಮದಲ್ಲಿ ಗುಡಿಸಲುಗಳೇ ಕಾಣುತ್ತಿರಲಿಲ್ಲ. ಈ ಬಗ್ಗೆ ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ದೂರು ನೀಡಿದರೂ, ಗಮನ ಹರಿಸಿಲ್ಲ ಎಂದು ನೊಂದ ಫಲಾನುಭವಿಗಳು ಗ್ರಾಮಕ್ಕೆ ಭೇಟಿ ನೀಡಿದ ಪತ್ರಿಕೆ ಮುಂದೆ ನೋವನ್ನು ತೊಡಿಕೊಂಡರು.
-ಪಂಪಯ್ಯ ಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

