ಎಸ್ಎಸ್ಎಲ್ಸಿ ಫಲಿತಾಂಶ: 11ನೇ ಸ್ಥಾನಕ್ಕೆ ಯಾದ'ಗರಿ'
ಯಾದಗಿರಿ: ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಜಿಲ್ಲೆಯ ಸಾಧನೆ ಬಹಳಷ್ಟು ಸುಧಾರಣೆ ಕಂಡಿದ್ದು, 28 ಸ್ಥಾನದಿಂದ ಈ ಬಾರಿ 11ನೇ ಸ್ಥಾನಕ್ಕೆ ಜಿಗಿದಿದ್ದು, ಪಿಯುಸಿ ಫಲಿತಾಂಶದ ನಂತರ ಎಸ್ಎಸ್ಎಲ್ಸಿಯಲ್ಲಿ ಅದೇ ಸಾಧನೆ ಮರುಕಳಿಸಿದೆ.
ಹೌದು. 2010ರಲ್ಲಿ ಜಿಲ್ಲೆಯಾದ ನಂತರ ಮೊದಲು 32 ಸ್ಥಾನದಲ್ಲಿದ್ದ ಯಾದಗಿರಿ ನಂತರ ಶೈಕ್ಷಣಿಕವಾಗಿ ಬಳೆಯುತ್ತಾ 2013ರಲ್ಲಿ 28ನೇ ಸ್ಥಾನಕ್ಕೆ ಬಂದಿತ್ತು. ಆದರೆ ಈ ಬಾರಿ 28 ಸ್ಥಾನದಿಂದ 11ಸ್ಥಾನಕ್ಕೆ ಜಿಗಿಯುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದೆ.
ಜಿಲ್ಲೆಯಲ್ಲಿ ಒಟ್ಟು 9,971 ವಿದ್ಯಾರ್ಥಿಗಳಲ್ಲಿ 8,630 ವಿದ್ಯಾರ್ಥಿಗಳು ತೇರ್ಗೆಡೆ ಹೊಂದುವ ಮೂಲಕ ಶೇ. 86.50 ರಷ್ಟು ಫಲಿತಾಂಶ ದಾಖಲಿಸಿದೆ.
13 ಅಂಶಗಳ ಕಾರ್ಯಕ್ರಮಗಳು ಯಶಸ್ವಿ: ಹಲವಾರು ಕೊರತೆಗಳನ್ನು ಎದುರಿಸುತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯು ಒಂದು ಸವಾಲಾಗಿ ಪರಿಣಮಿಸಿತ್ತು. ಕೊರೆತೆಗಳ ಮಧ್ಯೆಯೂ ಫಲಿತಾಂಶವನ್ನು ಸುಧಾರಿಸಲು ಶಿಕ್ಷಣ ಇಲಾಖೆ ಕೈಗೊಂಡ 13 ಅಂಶಗಳ ಕಾರ್ಯಕ್ರಮಗಳು ಯಶಸ್ವಿಯಾಗಿವೆ ಎಂಬುದಕ್ಕೆ ಫಲಿತಾಂಶ ಸಾಕ್ಷಿಯಾಗಿದೆ.
28ನೇ ಸ್ಥಾನದಿಂದ 11ನೇ ಸ್ಥಾನಕ್ಕೆ ಜಿಗಿತ: ಪ್ರತಿ ಬಾರಿಯೂ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾದ ಜಿಲ್ಲೆಯ ಜನರು ನಿರಾಸೆ ಅನುಭವಿಸುವುದು ಸಾಮಾನ್ಯ ಎನ್ನುವಂತಾಗಿತ್ತು. ಜಿಲ್ಲೆಯು ಕೊನೆಯ ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಿತ್ತು. ಈ ಬಾರಿಯಾದರೂ ಮೊದಲ 10 ಸ್ಥಾನಗಳಲ್ಲಿ ಜಿಲ್ಲೆಯ ಹೆಸರು ಇರಲಿದೆಯೇ ಎನ್ನುವ ಪ್ರಶ್ನೆಗೆ ಇಂದು ಉತ್ತರ ದೊರಕಿದೆ. ಏಕೆಂದರೆ 2014ರ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಜಿಲ್ಲೆ, ಕಳೆದ ಬಾರಿಯ 28ನೇ ಸ್ಥಾನದಿಂದ 11ನೇ ಸ್ಥಾನಕ್ಕೆ ಜಿಗಿದಿದೆ. ಈ ಭಾರಿಯ ಫಲಿತಾಂಶ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಶೇ. 8.5 ಹೆಚ್ಚಳ: ಕಳೆದ ವರ್ಷ ಜಿಲ್ಲೆಯ ಸಾಧನೆ ಶೇ.78 ಆಗಿತ್ತು. ಆದರೆ ಈ ಬಾರಿ ಅದು ಶೇ.86.50ಕ್ಕೆ ತಲುಪಿದೆ. ಒಟ್ಟಾರೆ ಫಲಿತಾಂಶದಲ್ಲಿ ಶೇ. 8.5 ಹೆಚ್ಚಳ ಕಂಡು ಬಂದಿದೆ.
ಪ್ರಾರಂಭದಿಂದಲೇ ಕಾರ್ಯಪ್ರವೃತ್ತ: ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸುಧಾರಣೆ ತರಲೇಬೇಕು ಎನ್ನುವ ಉದ್ದೇಶದಿಂದ ಶಿಕ್ಷಣ ಇಲಾಖೆ ಪ್ರಾರಂಭದಿಂದಲೇ ಕಾರ್ಯಪ್ರವೃತ್ತವಾಗಿತ್ತು. ಹಲವಾರು ಸಂಸ್ಥೆಗಳ ಸಹಯೋಗದಲ್ಲಿ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮಹಮ್ಮಿಕೊಳ್ಳಲಾಗಿತ್ತು. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಮೊದಲಿನಿಂದಲೇ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದರ ಜತೆಗೆ ಸಂಘ-ಸಂಸ್ಥೆಗಳ ಸಹಯೋಗದಲ್ಲಿಯೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದೆಲ್ಲದರ ಮಧ್ಯೆ ಜಿಲ್ಲೆಯ ಶಿಕ್ಷಕರೂ ಸಾಕಷ್ಟು ಮುತುವರ್ಜಿ ವಹಿಸಿದ ಪರಿಣಾಮವಾಗಿಯೇ ಈ ಬಾರಿ ಶೇ. 86.50 ಫಲಿತಾಂಶ ಪಡೆಯಲು ಸಾಧ್ಯವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಿ.ಎಂ. ಹೊಸಮನಿ ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

