ಐಪಿಎಲ್ ಬೆಟ್ಟಿಂಗ್ ಭೂತ: ಯುವಜನತೆ ಬಲಿ
ಕನ್ನಡಪ್ರಭ ವಾರ್ತೆ ಗುರುಮಠಕಲ್ ಮೇ 23
ಇಷ್ಟು ದಿನ ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸಿಮಿತವಾಗಿದ್ದ ಕ್ರಿಕೆಟ್ ಬೆಟ್ಟಿಂಗ್ ಭೂತ ಇದೀಗ ಗುರುಮಠಕಲ್ನಂತಹ ಪಟ್ಟಣಕ್ಕೂ ಕಾಲಿರಿಸಿದ್ದು, ಇಲ್ಲಿ ಪ್ರತಿ ದಿನ ಲಕ್ಷಾಂತರ ರೂಪಾಯಿಗಳ ಬೆಟ್ಟಿಂಗ್ ನಡೆಯುತ್ತಿದೆ. ಪಟ್ಟಣದ ಯುವಜನತೆ ಈ ಬೆಟ್ಟಿಂಗ್ ಭೂತಕ್ಕೆ ಬಲಿಯಾಗುತ್ತಿದ್ದಾರೆ.
ಹಿಂದೆ ಐಪಿಲ್ ಕ್ರಿಕೆಟ್ ಬೆಟ್ಟಿಂಗ್ ಮಹಾನಗರಗಳಿಗೆ ಮಾತ್ರ ಸೀಮಿತವಾಗಿತ್ತು. ಅದರೆ ಕ್ರಿಕೆಟ್ನ ಜನಪ್ರಿಯತೆಯಿಂದಾಗಿ ಪಟ್ಟಣ ಹಾಗೂ ಗ್ರಾಮೀಣ ಭಾಗಕ್ಕೆ ವಿಸ್ತರಿಸಿದ ಬೆಟ್ಟಿಂಗ್ ಭೂತಕ್ಕೆ ಇಲ್ಲಿನ ಯುವಕರು ಮಾರು ಹೋಗಿದ್ದು ಕ್ರಿಕೆಟನ ಗುಲಾಮರಾಗಿ ಪ್ರತಿದಿನ ಲಕ್ಷಾಂತರ ರೂ. ಬೆಟ್ಟಿಂಗ್ ವ್ಯವಹಾರದಲ್ಲಿ ತೊಡಗಿದ್ದಾರೆ.
ಇಲ್ಲಿ ನಡೆಯುತ್ತಿರುವ ಬೆಟ್ಟಿಂಗ್ ದಂಧೆಯಲ್ಲಿ ಕೇವಲ ವಿದ್ಯಾವಂತರಷ್ಟೆ ಅಲ್ಲದೆ ಕೂಲಿ ಕೆಲಸ ಮಾಡುವ ಹಮಾಲರ ಮಕ್ಕಳು ಹಾಗೂ ಹೊಟೆಲ್, ಅಂಗಡಿಗಳಲ್ಲಿ ಕೆಲಸ ಮಾಡುವ ಯುವಕರು ಕೂಡ ಬಲಿಯಾಗುತ್ತಿದ್ದು ಕಷ್ಟಪಟ್ಟು ದುಡಿದ ದುಡ್ಡನ್ನು ಬೆಟ್ಟಿಂಗ್ಗೆ ಸುರಿಯುತ್ತಿದ್ದಾರೆ.
ಮ್ಯಾಚ್ ಮುಗಿಯುವ ತನಕ: ಐಪಿಎಲ್ನಲ್ಲಿ ನಡೆಯುವ ಎರಡು ಪಂದ್ಯಗಳ ಪೈಕಿ ಪ್ರಥಮ ಪಂದ್ಯದೊಂದಿಗೆ ಪ್ರಾರಂಭವಾಗುವ ಬೆಟ್ಟಿಂಗ್ ರಾತ್ರಿ ನಡೆಯುವ ಎರಡನೇ ಮ್ಯಾಚ್ ಮುಗಿಯುವ ತನಕ ನಡೆಯುತ್ತದೆ. ಪ್ರತಿಯೊಂದು ಪಂದ್ಯಕ್ಕೆ ಮುನ್ನ ತಂಡದ ಮೇಲೆ ಕೆಲವರು ಬೆಟ್ಟಿಂಗ್ ಮಾಡಿದರೆ ಇನ್ನು ಕೆಲವರು ಪಂದ್ಯದ ಬ್ಯಾಟ್ಸ್ಮನ್ ಮೇಲೆ, ಆತ ಗಳಿಸುವ ರನ್, ಬೌಲರುಗಳು ಪಡೆಯುವ ವಿಕೆಟ್ ಇತ್ಯಾದಿ ಮೇಲೆ ಬೆಟ್ಟಿಂಗ್ ಕಟ್ಟುವ ಮೂಲಕ ಪ್ರತಿದಿನ ಕಷ್ಟಪಟ್ಟು ದುಡಿದ ದುಡ್ಡನ್ನು ಬೆಟ್ಟಿಂಗ್ ರೂಪದಲ್ಲಿ ಹಾಳು ಮಾಡುತ್ತಿದ್ದಾರೆ.
ಎಲ್ಲವೂ ಗುಪ್ತ್, ಗುಪ್ತ್ : ಈ ವ್ಯವಹಾರ ಸದ್ಯ ಕಣ್ಣಿಗೆ ಕಾಣದೆ ನಡೆದಿದೆ. ಐಪಿಎಲ್ ಬೆಟ್ಟಿಂಗ್ ಸಂಪೂರ್ಣ ಗುಪ್ತವಾಗಿ ನಡೆಯುತ್ತಿದ್ದು ಎಲ್ಲಿ ನಡೆಯುತ್ತದೆ ಎಂದು ಹೇಳಲು ಆಗದಂತಹ ರೀತಿಯಲ್ಲಿ ನಡೆದು ಸಂಪೂರ್ಣವಾಗಿ ಮೊಬೈಲ್ಗಳ ಮೂಲಕ ಬುಕಿಂಗ್ ಮಾಡುವುದು, ಪಂದ್ಯ ಮುಗಿದ ಕೂಡಲೇ ಹಣ ಪಡೆಯುವ ಪದ್ಧತಿ ನಡೆದಿದೆ. ಈ ಬಗ್ಗೆ ಎಲ್ಲಿಯೂ ಸುಳಿವು ದೊರೆಯದಂತೆ ನಡೆದಿದೆ ಈ ದಂಧೆ.
ಇನ್ನಷ್ಟು ವಿಸ್ತರಿಸುವ ಸಾಧ್ಯತೆ: ಒಟ್ಟಾರೆಯಾಗಿ ಇಲ್ಲಿ ನಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗ್ ಭೂತಕ್ಕೆ ಬಲಿಯಾಗುತ್ತಿರುವ ಯುವಕರನ್ನು ರಕ್ಷಿಸುವುದು ಅನಿವಾರ್ಯ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಬೆಟ್ಟಿಂಗ್ ಭೂತ ಇನ್ನಷ್ಟು ವಿಸ್ತರಿಸಿ ಮತ್ತಷ್ಟು ಯುವಕರು ಇದರ ಕಬಂಧಬಾಹುಗಳಲ್ಲಿ ಸಿಲುಕಿ ಒದ್ದಾಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಪೊಲೀಸರು ಮತ್ತು ಆಧಿಕಾರಿಗಳು ತ್ವರಿತವಾಗಿ ಇತ್ತ ಗಮನಹರಿಸಬೇಕಿದೆ.
ದೇವದಾಸಿಯಾದ ಸುರಪುರ ಯುವತಿ
ಕೊಪ್ಪಳ: ಕೊಪ್ಪಳದಲ್ಲಿ ದೇವದಾಸಿ ಪದ್ಧತಿ ಜೀವಂತವಾಗಿರುವುದು ಮತ್ತೆ ಬೆಳಕಿಗೆ ಬಂದಿದೆ. ತಾಲೂಕಿನ ಹುಲಿಗೆಮ್ಮ ಜಾತ್ರೆಯಲ್ಲಿ ಯುವತಿಯೊಬ್ಬಳಿಗೆ ಮುತ್ತು ಕಟ್ಟಿ ದೇವದಾಸಿ ಪದ್ಧತಿಗೆ ನೂಕಿರುವುದು ಪತ್ತೆಯಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೊರಟ್ಟಿ ಗ್ರಾಮದ ಭೀಮನಗೌಡರ ಕುಟುಂಬಕ್ಕೆ ಸೇರಿದ ಯುವತಿಯನ್ನು ದೇವದಾಸಿ ಪದ್ಧತಿಗೆ ನೂಕುವ ಸಿದ್ಧತೆ ನಡೆದಿತ್ತು. ಆಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸ್ವಯಂ ಸೇವಕರು ಇದನ್ನು ತಡೆಯಲು ಯತ್ನಿಸಿದ್ದಾರೆ. ಆದರೆ ಅಪಾರ ಸಂಖ್ಯೆಯಲ್ಲಿದ್ದ ಕುಟುಂಬದ ಸದಸ್ಯರು ಕಾರ್ಯಕರ್ತರ ಮಾತಿಗೆ ಕಿವಿಗೊಡಲೇ ಇಲ್ಲ. ಸ್ವಯಂ ಸೇವಕರು ಪೊಲೀಸರನ್ನು ಕರೆದುಕೊಂಡು ಬರುವುದರೊಳಗೆ ಸ್ಥಳ ಖಾಲಿ ಮಾಡಿದ್ದರು. ಆದರೆ, ಆ ವೇಳೆಗಾಗಲೇ ಮುತ್ತುಕಟ್ಟುವ ಕಾರ್ಯ ಮುಗಿದು ಹೋಗಿತ್ತು ಎಂದು ಅಲ್ಲಿದ್ದ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

