ಹಾಸನ

ಮಠಗಳು ಸನಾತನ ಸಂಸ್ಕೃತಿ ಕೇಂದ್ರದ ಪ್ರತೀಕ

Published On :

ಕ.ಪ್ರ.  ವಾರ್ತೆ ಅರಸೀಕೆರೆ ಏ.1
ನಾಡಿನ ಮಠಮಾನ್ಯಗಳು ಜನರಲ್ಲಿ ಜಾಗೃತಿ ಉಂಟು ಮಾಡುವ ಮೂಲಕ ಸನ್ಮಾರ್ಗದಲ್ಲಿ ಕೊಂಡೊಯ್ಯುವ ಕಾರ್ಯ ಮಾಡುತ್ತಿವೆ ಎಂದು ಹಾವೇರಿ ಜಿಲ್ಲೆ ಹುಕ್ಕೇರಿ ಮಠದ ನಿರಂಜನ ಜಗದ್ಗುರು ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ತಾಲೂಕಿನ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದಲ್ಲಿ  ಇತ್ತೀಚೆಗೆ ನಡೆದ ಮಹದೇಶ್ವರ ಜಾತ್ರಾ ಮಹೋತ್ಸವ ಧಾರ್ಮಿಕ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಭಕ್ತರ ನೋವು ನಲಿವುಗಳಿಗೆ ಸ್ಪಂದಿಸಿ ಪರಿಹಾರ ಸೂಚಿಸುವ ಮೂಲಕ ಭವಿಷ್ಯತ್ತಿನ ಮಠವಾಗಿದೆ ಎಂದರು.
ಸನಾತನ ಸಂಸ್ಕೃತಿ ಕೇಂದ್ರಗಳಾದ ಮಠ ಮಾನ್ಯಗಳು ಜನರಲ್ಲಿ ಅಂಧಕಾರ ದೂರ ಮಾಡಿ ಅವರಲ್ಲಿ ಸುಜ್ಞಾನದ ಬೆಳಕಿನ ಜ್ಯೋತಿ ಬೆಳಗಿಸುವ ಕಾರ್ಯಗಳನ್ನು ಮಾಡಬೇಕಾಗಿದೆ. ಸಮಾಜದಲ್ಲಿ ಅನ್ಯಾಯ ಅತ್ಯಾಚಾರ ಆಕ್ರಮ ಚಟುವಟಿಕೆ ಪ್ರಕರಣ ಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ವಿಷಯ ಎಂದು ವಿಷಾದಿಸಿದರು.  
ಭಾರತೀಯರಲ್ಲಿರುವ ಸಹನೆ, ತಾಳ್ಮೆ ಹಾಗೂ ಇತರರನ್ನು ಗೌರವಿಸುವ ಗುಣವನ್ನು ಜಗತ್ತಿನಾದ್ಯಂತ  ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಶಿವಶರಣರು ಹುಟ್ಟಿ ಬೆಳೆದ ಈ ನಾಡಿನಲ್ಲಿ ಭಕ್ತಿ ಪರಂಪರೆಯಿಂದಾಗಿಯೇ ಇತರರು ನಮ್ಮನ್ನು ಗೌರವಿಸುವಂತಾಗಿದೆ ಎಂದರು.
ಮನಸ್ಸೇ ಅಫ್ಸೆಟ್: ಮೊಬೈಲ್ ಬಳಕೆ ಮನುಷ್ಯನ ನೆಮ್ಮದಿಯನ್ನು ಹಾಳು ಮಾಡತೊಡಗಿದೆ. ಎಲ್ಲರ ಮನೆಯಲ್ಲೂ ವಿವಿಧ ನಮೂನೆಯ ಸೆಟ್ಳಿವೆ. ಆದರೆ, ಅವುಗಳಿಂದಾಗಿ ವ್ಯಕ್ತಿಗಳ ಮನಸ್ಸೇ ಅಫ್ಸೆಟ್ ಆಗಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಕುಪ್ಪೂರು ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೋಡಿಮಠ ಭವಿಷ್ಯ  ಹೇಳುವ ಜೊತೆಗೆ ಸಾಮಾಜಿಕ ಧಾರ್ಮಿಕ ಮತ್ತು ಶೈಕ್ಷಣಿಕವಾಗಿ ಮುಂದಿನ ಯುವಜನಾಂಗದ ಭವಿಷ್ಯ ರೂಪಿಸುವ ಕಾರ್ಯ ಮಾಡುತ್ತಿದೆ ಎಂದರು.
ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು. ಸನ್ಮಾನಿತರಾದ ಚಲನಚಿತ್ರ ನಟ ರಮೇಶ್ಭಟ್ ಮಾತನಾಡಿ. ನಾವು ಬದುಕಿದ್ದು ಮುಖ್ಯವಲ್ಲ, ಹೇಗೆ ಬದುಕಿದ್ದೇವೆ ಎಂಬುದು ಮುಖ್ಯ. ಸಮಾಜದಲ್ಲಿ ಸಜ್ಜನರಾಗಿ ಬದುಕುವ ಮೂಲಕ ಜೀವನದ ಸಾರ್ಥಕತೆ ಕಂಡುಕೊಳ್ಳಬೇಕು ಎಂದರು.
ಕೋಡಿಮಠದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸೇರಿದಂತೆ ರಾಜ್ಯದ ಅನೇಕ ಸ್ವಾಮೀಜಿಗಳು ಉಪಸ್ಥಿತರಿದ್ದರು. ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾಜಿ ಪುರಸಭಾಧ್ಯಕ್ಷ ಎನ್.ಎಸ್.ಸಿದ್ದರಾಮಶೆಟ್ಟಿ, ಕೆ.ಜೆ.ಪಿ.ಮುಖಂಡ ಡಾ.ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.        

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.