ಹಾಸನ

'ಲಿಂಗ ತಾರತಮ್ಯ ತೊಲಗಲಿ'

Published On :

ಕ.ಪ್ರ. ವಾರ್ತೆ   ಹಾಸನ    ಏ.1
ಎಲ್ಲಿಯವರೆಗೆ ಲಿಂಗ ತಾರತಮ್ಯ ಹಾಗೂ ಜಾತೀಯತೆ ತೊಡೆದು ಹಾಕುವುದಿಲ್ಲವೋ ಅಲ್ಲಿಯವರೆಗೆ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ತೊಡೆದು ಹಾಕಲು ಸಾಧ್ಯವಿಲ್ಲ ಎಂದು  ಪ್ರಗತಿಪರ ಚಿಂತಕ ಪ್ರೊ.ರವಿವರ್ಮಕುಮಾರ್  ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇತ್ತೀಚೆಗೆ  ಕಲಾಭವನದಲ್ಲಿ ಏರ್ಪಡಿಸಿದ್ದ ಲೈಂಗಿಕ ದೌರ್ಜನ್ಯ ಮತ್ತು ಸಾಮಾಜಿಕ ಹೊಣೆಗಾರಿಕೆ ಕುರಿತ ವಿಚಾರಸಂಕಿರಣ ಹಾಗೂ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಿಂಗ ತಾರತಮ್ಯ, ಮಹಿಳೆಯರ ಮೇಲಿನ ಶೋಷಣೆ ಕುರಿತು ಸಂಸತ್ನಲ್ಲಿ ಚರ್ಚೆಯಾಗದಿರುವುದು ವಿಷಾದದ ಸಂಗತಿ ಎಂದರು. ಸಾಮಾಜಿಕ, ಧಾರ್ಮಿಕ, ಪೌರಾಣಿಕವಾಗಿ ಕೊಟ್ಟಿರುವ ಸಾಮಾಜಿಕ ಪ್ರಜ್ಞೆ ಇಂದು ನರಸತ್ತ ಮನುಷ್ಯನನ್ನಾಗಿ ಮಾಡಿದೆ. ಲಕ್ವ ಹೊಡೆದ ಪ್ರಾಣಿ ಕೂಡ ಅದಕ್ಕೆ ಏನಾದರೂ ತೊಂದರೆಯಾದರೆ ಪ್ರತಿಭಟಿಸುತ್ತದೆ. ಆದರೆ, ರಾಷ್ಟ್ರದಲ್ಲಿ ಲಿಂಗ ತಾರತಮ್ಯ ಮತ್ತು ಜಾತೀಯತೆ ಪಾರ್ಶ್ವ ವಾಯು ಪೀಡಿತನನ್ನಾಗಿ ಮಾಡಿದೆ ಎಂದರು.  ಖ್ಯಾತ ಸಾಹಿತಿ ಬಾನುಮುಷ್ತಾಕ್ ಮಾತನಾಡಿ,  ಲೈಂಗಿಕ ದೌರ್ಜನ್ಯದ ವಿವಿಧ ಆಯಾಯಮಗಳು ಮತ್ತು ಪರಿಹಾರಗಳು ಕುರಿತು ವಿಷಯ ಮಂಡಿಸಿ, ಅತ್ಯಾಚಾರ ಪ್ರಕರಣದ ಬಗ್ಗೆ ಅತ್ಯಂತ ಗಂಭೀರವಾಗಿ ಆಲೋಚಿಸಬೇಕಾಗಿದೆ. ವರದಕ್ಷಿಣೆ ನಿಷೇಧ ಕಾಯಿದೆ ಜಾರಿಯಲ್ಲಿದ್ದರೂ ವರದಕ್ಷಿಣೆ ಇಲ್ಲದೆ ವಿವಾಹಗಳಾಗುತ್ತಿಲ್ಲ.
ವರದಕ್ಷಿಣೆ ಕಾನೂನಿನ ಮೂಲಕ ಹೇಗೆ ನಿಗ್ರಹಿಸಲು ಸಾಧ್ಯವಿಲ್ಲವೋ ಅದೇ ರೀತಿ ಅತ್ಯಾಚಾರವನ್ನು ಕಾನೂನಿನ ಮೂಲಕ ನಿಗ್ರಹಿಸಲು ಸಾಧ್ಯವಿಲ್ಲ. ಸಾಮಾಜಿಕ ನಡವಳಿಕೆಯಿಂದ ನಿಗ್ರಹಿಸಬೇಕಾಗಿದೆ ಎಂದು  ಅಭಿಪ್ರಾಯಪಟ್ಟರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.