ಹಾಸನ

ಕಾವೇರಿ ಟ್ರಿಬ್ಯೂನಲ್ ಪುನಾರಚನೆಯಾಗಲಿ: ಎಚ್.ಡಿ. ದೇವೇಗೌಡ

Published On :

ಕ.ಪ್ರ.ವಾರ್ತೆ  ಹಾಸನ  ಏ 2
ಕಾವೇರಿ ನ್ಯಾಯಧೀಕರಣ ಪುನರ್ ರಜನೆಯಾಗಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒತ್ತಾಯಿಸಿದರು.
ಮಂಗಳವಾರ ತಾಲೂಕಿನ ಗೊರೂರಿನ ಹೇಮಾವತಿ ಜಲಾಶಯದ ನೀರಿನ ಪ್ರಮಾಣ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಭಾರೀ ಅನ್ಯಾಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಸಹಾಯಕತೆಯಿಂದ ರಾಜ್ಯದ ಜನರು ಅನುಭವಿಸುವಂತಾಗಿದೆ. ತಮಿಳುನಾಡಿಗೆ ನೀರು ಹರಿಸಲು ಐ-ತೀರ್ಪು ಪ್ರಕಟಿಸಿದಾಗ ಅದನ್ನು ಮತ್ತೆ ಪುನರ್ ಪರಿಶೀಲಿಸಬೇಕೆಂದು ಹೇಳಿದ್ದೆ. ಈ ಬೇಡಿಕೆಗೆ ರಾಜ್ಯ ಸರ್ಕಾರದಿಂದ ಸೂಕ್ತ ಬೆಂಬಲ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 2007 ಫೆ.5ರಂದು ಕಾವೇರಿ ನ್ಯಾಯಾಧೀಕರಣದ ಅಂತಿಮ ಐ-ತೀರ್ಪು ಹೊರಬಂದಿದ್ದು, ರಾಜ್ಯಕ್ಕೆ ಅನ್ಯಾಯವಾಗಿರುವ ಬಗ್ಗೆ ಫೆ.8ರಂದು ನಾನು ಪ್ರಧಾನಿಗೆ ಮನವರಿಕೆ ಮಾಡಿಕೊಟ್ಟೆ ಎಂದರು.
ಯುಪಿಎ ಸರ್ಕಾರಕ್ಕೆ ಡಿಎಂಕೆ ಬೆಂಬಲ: 39 ಸದಸ್ಯರನ್ನು ಹೊಂದಿದ ಡಿಎಂಕೆ ಬೆಂಬಲದಿಂದ ಮೊದಲ ಯುಪಿಎ ಸರ್ಕಾರ ನಡೆಯುತ್ತಿತ್ತು. ನಾವು ಕೇವಲ ಮೂವರು ಮಾತ್ರ ಇದ್ದೆವು. ಆಗ ಈ ಐ-ತೀರ್ಪಿನ ವಿರುದ್ಧವಾಗಿ ಆಗ ರಾಜ್ಯದ ಜನರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಆಗ ರಾಜ್ಯದಲ್ಲಿ ಧರಂ ಸಿಂಗ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿತ್ತು. ಕೇಂದ್ರ ಸರ್ಕಾರದ ಸೂಚನೆಯೋ ಅಥವಾ ರಾಜ್ಯದ ಕಾಂಗ್ರೆಸ್ ಹಿರಿಯ ಮುಖಂಡರ ಆದೇಶವೋ ಗೊತ್ತಿಲ್ಲ, ಕಾವೇರಿ ಹೋರಾಟಕ್ಕೆ ಧರಂ ಸಿಂಗ್ರಿಂದ ಬೆಂಬಲ ಸಿಗಲಿಲ್ಲ ಎಂದರು.
ನಾನೇ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಿದಾಗ ತಡವಾಗಿತ್ತು. ಈಗ ಐತೀರ್ಪು ಹೊರಬಂದಿದೆ. ಈ ವಿಚಾರವಾಗಿ ನಾನು ಸಂಸತ್ನಲ್ಲಿ ಚರ್ಚಿಸಲು ಮುಂದಾದಾಗ ಡಿಎಂಕೆಯ 39 ಸದಸ್ಯರು ಅದಕ್ಕೆ ಅಡ್ಡಿಪಡಿಸಿದರು. ಐ-ತೀರ್ಪು ನೋಟಿಫಿಕೇಷನ್ ಆಗಿದ್ದನ್ನು ಜಯಲಲಿತಾ ಹುಟ್ಟು ಹಬ್ಬದ ಉಡುಗೊರೆ ಸಿಕ್ಕಿದೆ ಎಂದು ಸಂಭ್ರಮಿಸಿದರು. ಈ ವಿಚಾರವಾಗಿ ನಾನು 2 ಸಲ ರಾಜಾಮೆಯನ್ನು ನೀಡಿದರೂ ಪ್ರಯೋಜನವಾಗಲಿಲ್ಲ ಎಂದರು.
ಹಾಸನ, ತುಮಕೂರು, ತಿಪಟೂರು, ಅರಸೀಕೆರೆ, ಬೆಂಗಳೂರು ನಗರ ಸೇರಿದಂತೆ 9 ಜಿಲ್ಲೆ, 28 ತಾಲೂಕುಗಳಲ್ಲಿ ಕುಡಿಯುವುದಕ್ಕಾಗಿ 70 ಟಿಎಂಸಿ ನೀರಿನ ಅವಶ್ಯಕತೆ ಇದೆ. ಆದರೆ ತಮಿಳುನಾಡು ಮಾತ್ರ ತಮಗೆ ರಾಜ್ಯದಿಂದ ಬರಬೇಕಾದ ಪಾಲನ್ನು ಮಾತ್ರ ಪಡೆದುಕೊಳ್ಳುವುದನ್ನ ಮಾತ್ರ ನೋಡಿತು ಎಂದರು. ಧರಂ ಹಾಗೂ ಶೆಟ್ಟರ್ ಆಡಳಿತವನ್ನು ನೋಡುತ್ತಿದ್ದೇವೆ. ಎಸ್ಎಲ್ಪಿ (ಸ್ಪೆಷಲ್ ಲಿಟಿಗೇಷನ್ ಪಿಟಿಷನ್)ಯನ್ನು ಸುಪ್ರೀಂ ಕೋರ್ಟ್ಗೆ ಹಾಕಿದ್ದಾರೆ. ಅ.6ರಂದು ವಿಚಾರಣೆ ನಡೆಸಲಿದೆ. ಮೇ.8ರ ನಂತರ ಈ ಹೋರಾಟದ ಪರವಾಗಿರುವ ಸರ್ಕಾರ ಅಧಿಕಾರಕ್ಕೆ ಬರುತ್ತದೋ ಅಥವಾ ಬೇರೆ ಸರ್ಕಾರ ಅಧಿಕಾರಕ್ಕೆ ಬರುತ್ತದೋ ಎಂಬುದನ್ನು ನೋಡಬೇಕಿದೆ ಎಂದು ಸ್ಪಷ್ಟಪಡಿಪಿಸಿದರು.


ಡಾಕ್ಯುಮೆಂಟರಿ
ರಾಜ್ಯದಲ್ಲಿ ಇರುವಂಥ ಎಲ್ಲ ಜಲಾಶಯಗಳ ನೀರಿನ ಸ್ಥಿತಿಗತಿಗಳ ಬಗ್ಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಹತ್ತಿರ ಚಿತ್ರೀಕರಿಸಿಕೊಂಡರು. ಸೋಮವಾರ ಆಲಮಟ್ಟ ಜಲಾಶಯ, ತುಂಗಾಭದ್ರ ಜಲಾಶಯಗಳಿಗೆ ಭೇಟಿ ನೀಡಿ ಚಿತ್ರೀಕರಿಸಿಕೊಳ್ಳಲಾಗಿತ್ತು. ಮಂಗಳವಾರ ಕೊಡಗಿನ ಭಾಗಮಂಡಲ, ಹಾರಂಗಿಗೆ ಭೇಟಿ ನೀಡಿ, ಅಲ್ಲಿನ ನೀರಿನ ಪ್ರಮಾಣವನ್ನು ಚಿತ್ರೀಕರಿಸಿ ನಂತರ ಹಾಸನದ ಗೊರೂರಿನ ಜಲಾಶಯದ ನೀರಿನ ಸ್ಥಿತಿಗತಿಗಳನ್ನು ಪರಿಶೀಲಿಸಿ ಚಿತ್ರೀಕರಿಸಿ, ಕೆಆರ್ಎಸ್ ಡ್ಯಾಂನತ್ತ ಪ್ರಯಾಣ ಬೆಳೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.