ಹಾಸನ

ಕೊಲೆ ಪ್ರಕರಣದಲ್ಲಿ ಭಾಗಿಯಾಗಿಲ್ಲ: ಬೆಳಗೋಡು ಉಮೇಶ್

Published On :

ಕನ್ನಡಪ್ರಭ ವಾರ್ತೆ೤ ಹಾಸನ೤ ಏ. 4
ಕೆಜೆಪಿ ಅಧಿಕೃತ ಅಭ್ಯರ್ಥಿ ಆಗಿರುವ ನನ್ನ ವಿರುದ್ಧ ಇದೀಗ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದುದು ಎಂದು ಸಕಲೇಶಪುರ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಬೆಳಗೋಡು ಉಮೇಶ್ ಹೇಳಿದರು.
  ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಆರೋಪ ಮಾಡಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದ್ದಾಗಿದೆ. ಟಿಕೆಟ್ ವಂಚಿತರು ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಈ ರೀತಿ ನನ್ನ ವಿರುದ್ಧ ಕೆಲವರನ್ನು ಎತ್ತಿ ಕಟ್ಟಿ ಸುಳ್ಳು ಹಾಗೂ ಕೀಳುಮಟ್ಟದ ಅಪಪ್ರಚಾರ ಮಾಡುತ್ತಿದ್ದು, ಕಾರ್ಯಕರ್ತರಲ್ಲಿ ಗೊಂದಲ ಹುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ.
  ಇದು ಹೀಗೆ ಮುಂದುವರಿದರೆ ಆರೋಪ ಮಾಡಿರುವವರ ವಿರುದ್ಧ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
  ಕಳೆದ 2 ದಶಕಗಳಿಂದ ದಸಂಸ ಸಕ್ರಿಯ ಕಾರ್ಯಕರ್ತನಾಗಿ ಕೆಲಸ ಮಾಡಿರುವ ನನ್ನನ್ನು ಗುರುತಿಸಿ ಕೆಜೆಪಿ  ಮುಖಂಡರು ಟಿಕೆಟ್ ನೀಡಿದ್ದಾರೆ. ಈವರೆಗೆ ನಾನು ಯಾವುದೇ ಸಮಾಜ ವಿರೋಧಿ ಅಥವಾ ಕ್ರಿಮಿನಲ್‌ಪ್ರಕರಣ ಹಾಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದರು.
  ಅಲ್ಲದೇ ನನ್ನ ವಿರುದ್ಧ ಆರೋಪಿಸಿರುವ ಪ್ರಕರಣ 2006ರಲ್ಲೇ ಮುಗಿದು ಹೋಗಿದೆ. ಅದಕ್ಕೂ ನನಗೂ ಯಾವುದೆ ಸಂಬಂಧವಿಲ್ಲ ಎಂದು ನ್ಯಾಯಾಲಯ ಹೇಳಿದೆ ಎಂದು ತಿಳಿಸಿದರು. ನನ್ನ ವಿರುದ್ಧ ಮಾಡಿರುವ ಆರೋಪಗಳು ನಿರಾಧಾರವಾಗಿವೆ. ಮುಗಿದು ಹೋದ ಪ್ರಕರಣವನ್ನು ಕೆದಕಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಇವೆಲ್ಲವೂ ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟಪಡಿಸಿದರು.
ಶಿವನಂಜಪ್ಪ ಒತ್ತಾಯ: ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಕೊಲೆ ಪ್ರಕರಣದಲ್ಲಿ ಭಾಗಿಯಾದವರಿಗೆ ಕೆಜೆಪಿಯಿಂದ ಟಿಕೆಟ್ ನೀಡದೆ ಒಳ್ಳೆಯ ನಡತೆಯುಳ್ಳ ಮುಕಂದೂರು ತಿಮ್ಮಯ್ಯರಿಗೆ ಟಿಕೆಟ್ ನೀಡುವಂತೆ ಸಮಾಜ ಸೇವಕ ಎಂ.ಬಿ.ಶಿವನಂಜಪ್ಪ ಒತ್ತಾಯಿಸಿದ್ದಾರೆ.
  ಒಳ್ಳೆಯ ನಡತೆಯುಳ್ಳವರು, ಸಭ್ಯರಿಗೆ ಕೆಜೆಪಿ ಪಕ್ಷ ಟಿಕೆಟ್ ನೀಡಬೇಕು. ಅದನ್ನು ಬಿಟ್ಟು ಬಾಳ್ಳುಪೇಟೆ ಗುರುದೇವ್ ಒತ್ತಡಕ್ಕೆ ಮಣಿದ ಕೆಜೆಪಿ ಅಧ್ಯಕ್ಷರು, ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತು ಭ್ರಷ್ಟದಲ್ಲಿ ಮುಳುಗಿರುವ ಬೆಳಗೊಡು ಉಮೇಶ್ ಅವರಿಗೆ ಟಿಕೆಟ್ ನೀಡುವುದು ಸರಿಯಲ್ಲ ಎಂದು ಅವರು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.