ಉತ್ತಮ ಮತಗಟ್ಟೆ ಅಧಿಕಾರಿಗೆ ಬಹುಮಾನ
ಹಾಸನ: ಚುನಾವಣಾ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಿದ ಬಿಎಲ್ಓಗಳನ್ನು ಗುರುತಿಸಿ ಗೌರವಿಸಲು ಜಿಲ್ಲಾಡಳಿತ ಬಹುಮಾನ ಯೋಜನೆಯೊಂದನ್ನು ರೂಪಿಸಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ತಿಳಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸುವಿಕೆಯಿಂದ ಮತದಾನದ ದಿನ ಮತದಾರರನ್ನು ಮತದಾನಕ್ಕಾಗಿ ಪ್ರೇರೇಪಿಸುವ ಕಾರ್ಯದ ನಿರ್ವಹಣೆವರೆಗೂ ಮತಗಟ್ಟೆ ಮಟ್ಟದ ಅಧಿಕಾರಿಗಳ (ಬಿಎಲ್ಒ) ಪಾತ್ರ ಗಣನೀಯವಾದುದು ಎಂದು ಹೇಳಿದ್ದಾರೆ.
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 1882 ಮತಗಟ್ಟೆ ಮಟ್ಟದ ಅಧಿಕಾರಿಗಳ ಕಾರ್ಯ ನಿರ್ವಹಣೆಯನ್ನು ನಾನಾ ಮಾನದಂಡಗಳಿಂದ ಅಳೆದು ಪ್ರತಿ ತಾಲೂಕಿನ ಪಟ್ಟಣ ಪ್ರದೇಶ ಮತ್ತು ಗ್ರಾಮಾಂತರ ಪ್ರದೇಶಗಳ ತಲಾ ಅತ್ಯುತ್ತಮ ಮೂವರು ಬಿಎಲ್ಓಗಳನ್ನು ಆಯ್ಕೆ ಮಾಡಿ ಗೌರವಿಸಲಾಗುವುದು. ಮೊದಲ ಬಹುಮಾನ ಐದು ಸಾವಿರ, ಎರಡನೇ ಬಹುಮಾನ ಮೂರು ಸಾವಿರ ಹಾಗೂ ಮೂರನೇ ಬಹುಮಾನವಾಗಿ ಎರಡು ಸಾವಿರ ರು. ನೀಡಲಾಗುವುದು. ಬಹುಮಾನಗಳನ್ನು ನೀಡಲು ಇಂದಿನಿಂದಲೇ ಬಿಎಲ್ಓಗಳ ಕಾರ್ಯನಿರ್ವಹಣೆಯನ್ನು ಉಪವಿಭಾಗಾಧಿಕಾರಿ ನೇತೃತ್ವದ ತಾಲೂಕು ಸಮಿತಿ ಪರಿಶೀಲಿಸುವುದು. ಸಮಿತಿಯು ವಿಜೇತರನ್ನು ಗುರುತಿಸುವಾಗ ಅತೀ ಹೆಚ್ಚು ಮತದಾನವಾಗುವ ಮತಗಟ್ಟೆಗಳು ಮತದಾನದಲ್ಲಿ ಭಾಗವಹಿಸಲು ಮತದಾರರನ್ನು ಪ್ರೇರೇಪಿಸುವುದು ಹಾಗೂ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯ, ಲೋಪದೋಷಗಳಿಲ್ಲದ ಶುದ್ಧವಾದ ಮತದಾರರ ಪಟ್ಟಿ ಸಿದ್ಧಪಡಿಸುವುದು ಇತ್ಯಾದಿ ಅಂಶಗಳನ್ನು ಪರಿಗಣಿಸಬೇಕು ಎಂದು ಡಾ. ಗೋಪಾಲಕೃಷ್ಣ ತಿಳಿಸಿದ್ದಾರೆ.
ಕೆಮ್ ಕ್ವಿಜ್ ಸ್ಪರ್ಧೆ ಉದ್ಘಾಟನೆ
ಹಾಸನ: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ತಮ್ಮ ತಿಳಿವಳಿಕೆಯ ಮಟ್ಟವನ್ನು ಹೆಚ್ಚಿಸಿ ಕೊಳ್ಳಬೇಕು ಎಂದು ಮೈಸೂರು ವಿಶ್ವ ವಿದ್ಯಾನಿಲಯ ರಾಸಾಯನಶಾಸ್ತ್ರ ಪ್ರಾಧ್ಯಾಪಕ ಡಾ.ಪಿ. ನಾಗರಾಜು ಹೇಳಿದರು. ಅವರು ನಗರದ ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದಿಂದ ಮೈಸೂರು ವಿವಿ ವ್ಯಾಪ್ತಿಯ ಬಿಎಸ್ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕೆಮ್ ಕ್ವಿಜ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಪ್ರಾಂಶುಪಾಲ ಡಾ. ಎ.ಎಲ್. ಮುರಳೀಧರ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆಯಲ್ಲಿ ಮೈಸೂರಿನ ಶಾರದಾ ವಿಲಾಸ ಕಾಲೇಜು ತಂಡ ಪ್ರಥಮ, ಚನ್ನರಾಯಪಟ್ಟಣದ ಆದಿಚುಂಚನಗಿರಿ ಕಾಲೇಜು ತಂಡ ದ್ವಿತೀಯ, ಮಂಡ್ಯದ ಪಿಇಎಸ್ ಕಾಲೇಜು ತೃತೀಯ, ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜು ತಂಡ ಸಮಾಧಾನಕರ ಬಹುಮಾನ ಪಡೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

