ಹಾಸನ

ವೀರಶೈವ ಅಭ್ಯರ್ಥಿಗೆ ಟಿಕೆಟ್ ಕೊಡಿ

Published On :

ಬೇಲೂರು ಹಾಗೂ ಅರಸೀಕೆರೆ ವಿಧಾಸಭಾ ಕ್ಷೇತ್ರದಿಂದ ಯಾವುದೇ ರಾಜಕೀಯ ಪಕ್ಷದಲ್ಲಾಗಲಿ ವೀರಶೈವ ಸಮಾಜದ ಅಭ್ಯರ್ಥಿಗೆ ಟಿಕೆಟ್ ನೀಡಬೇಕು. ಇಲ್ಲವಾದಲ್ಲಿ ಸಮುದಾಯದಿಂದ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅವರನ್ನೇ ಬೆಂಬಲಿಸಲಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಯುವ ಘಟಕ ಅಧ್ಯಕ್ಷ ಜಿ.ಸಂಗಮ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವರಿರುವ ಬೇಲೂರು ಹಾಗೂ ಅರಸೀಕೆರೆ ಕ್ಷೇತ್ರಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ವೀರಶೈವ ಅಭ್ಯರ್ಥಿಗೆ ಟಿಕೆಟ್ ನೀಡಬೇಕು.
 ಈ ಹಿಂದೆ ಸಕಲೇಶಪುರ-ಅರಸೀಕೆರೆಯಲ್ಲಿ ವೀರಶೈವರಿಗೆ ಟಿಕೆಟ್ ನೀಡುವ ಮೂಲಕ ಆ ಕ್ಷೇತ್ರದಲ್ಲಿ ವೀರಶೈವದವರೇ ಶಾಸಕರಾಗುತ್ತಿದ್ದರು. ಇತ್ತೀಚೆಗೆ ಕೆಲವು ರಾಜಕೀಯ ಪಕ್ಷಗಳು ವೀರಶೈವರಿಗೆ ಟಿಕೆಟ್ ನೀಡದೇ ನಿರ್ಲಕ್ಷಿಸುತ್ತಿರುವುದು ಖಂಡನೀಯ ಎಂದರು.
ಜಿಲ್ಲೆಯಲ್ಲಿ ಮೂರು ಲಕ್ಷಕ್ಕೂ ಹೆಚ್ಚು ವೀರಶೈವರಿದ್ದಾರೆ. ಅರಸೀಕೆರೆಯಲ್ಲಿ 72 ಸಾವಿರ, ಬೇಲೂರಿನಲ್ಲಿ 58 ಸಾವಿರ, ಅರಕಲಗೂಡಿನಲ್ಲಿ 32 ಸಾವಿರ, ಸಕಲೇಶಪುರದಲ್ಲಿ 35 ಸಾವಿರ, ಚನ್ನರಾಯಪಟ್ಟಣದಲ್ಲಿ 11 ಸಾವಿರ, ಆಲೂರಿನಲ್ಲಿ 9 ಸಾವಿರ, ಹಾಸನದಲ್ಲಿ 20 ಸಾವಿರ ಹಾಗೂ ಹೊಳೆನರಸೀಪುರದಲ್ಲಿ 16 ಸಾವಿರ ವೀರಶೈವರಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿ ಈ ಎರಡು ಕ್ಷೇತ್ರದಿಂದ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು. ಸಮುದಾಯದ ವಿಕ್ರಂ, ಗುರುನಾಥ್, ರವಿಕುಮಾರ್, ಜಯಪ್ರಕಾಶ್, ಬಸವರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.