ಹಾಸನ

ನಾಳೆ ಹಿಂದುಳಿದ ವರ್ಗಗಳ ಅಧಿವೇಶನ

Published On :

ಮೈಸೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಏ. 8 ರಿಂದ 10 ರವರೆಗೆ ಕಲಾಮಂದಿರದಲ್ಲಿ ಹಿಂದುಳಿದ ವರ್ಗಗಳ ಅಧಿವೇಶನ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 11ಕ್ಕೆ ನಿವೃತ್ತ ಎಡಿಜಿಪಿ ಕೆಂಪಯ್ಯ ಉದ್ಘಾಟಿಸಲಿದ್ದು, ಎಫ್ಪಿಎಐ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸುವರು. ಸಾಹಿತಿ ಬಂಜಗೆರೆ ಜಯಪ್ರಕಾಶ್ ವಿಷಯ ಮಂಡಿಸಲಿದ್ದು, ಕೆ.ಎಸ್. ಶಿವರಾಮು ಆಶಯ ಭಾಷಣ ಮಾಡುವರು. ಏ. 10ರ ಮಧ್ಯಾಹ್ನ 12.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಡಾ. ಮುಜಾಫರ್ ಅಸಾದಿ ಪ್ರಧಾನ ಭಾಷಣ ಮಾಡುವರು.
ಸಹಿ ಸಂಗ್ರಹ ಜನಜಾಗೃತಿ
ಬಹುಜನ ವಿದ್ಯಾರ್ಥಿ ಸಂಘದಿಂದ ಏ. 8ರ ಬೆಳಗ್ಗೆ 10ಕ್ಕೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾದ ಮುಂಭಾಗ ಓಟನ್ನು ಹಣ- ಹೆಂಡಕ್ಕೆ ಮಾರುವುದಿಲ್ಲ ಸಹಿ ಸಂಗ್ರಹ ಜನಜಾಗೃತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜಿಪಂ ಮುಖ್ಯ ಯೋಜನಾಧಿಕಾರಿ ಸಿ.ಎಚ್. ವಸುಂಧರಾದೇವಿ ಚಾಲನೆ ನೀಡುವರು.
ಸಂಗೀತ ಕಾರ್ಯಕ್ರಮ
ಮೈಸೂರು ವಿಪ್ರ ಪರಿವಾರದಿಂದ ಏ. 8ರ ಸಂಜೆ 5ಕ್ಕೆ ಜೆಎಲ್ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ಈಟಿವಿ ಎದೆ ತುಂಬಿ ಹಾಡುವೆನು ಬಾಲ ಪ್ರತಿಭೆಗಳಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ವಿನಯ್ ಕಣಗಾಲ್ ತಿಳಿಸಿದ್ದಾರೆ. ಮೊ. 9845133927 ಸಂಪರ್ಕಿಸಬಹುದು.
ಟಿಡಿಪಿ ಕೇಂದ್ರ ಉದ್ಘಾಟನೆ
ಮಾನಸಗಂಗೋತ್ರಿ ರೌಂಡ್ ಕ್ಯಾಂಟೀನ್ ಹಿಂಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ಭಾಗ್ಯರಾಜ್ ಸಿಂಪ್ಲಿಸಿಟಿ.ಕಾಂ ಡಿಟಿಪಿ ಕೇಂದ್ರದ ಉದ್ಘಾಟನಾ ಸಮಾರಂಭವು ಏ. 8ರ ಬೆಳಗ್ಗೆ 10.30ಕ್ಕೆ ನಡೆಯಲಿದ್ದು, ಸಂಸದ ಆರ್. ಧ್ರುವನಾರಾಯಣ್, ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಉದ್ಘಾಟಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.