ಹಾಸನ

ಸಂಚಾರಿ ನ್ಯಾಯಾಲಯದಿಂದ ಪ್ರಕರಣಗಳ ಇತ್ಯರ್ಥ

Published On :

ಕ.ಪ್ರ. ವಾರ್ತೆ೤ ಸಕಲೇಶಪುರ೤ ಏ.6
ತಾಲೂಕು ಕಾನೂನು ಸಮಿತಿಯಿಂದ ಸುಬ್ಬೇಗೌಡ ಪುರಭವನದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಮಾಹಿತಿ ಶಿಬಿರ, ಕಾರ್ಯಾಗಾರವನ್ನು ನ್ಯಾಯಾಧೀಶ ರಾಘವೇಂದ್ರ ಶೆಟ್ಟಿಗಾರ್ ಹಾಗೂ ಲೋಕಪ್ಪ ಉದ್ಘಾಟಿಸಿದರು.
ಹಿರಿಯ ನ್ಯಾಯಾಧೀಶ ಲೋಕಪ್ಪ ಮಾತನಾಡಿ, ಈ ದೇಶದ ಪ್ರಜೆಗಳಾಗಿ ನಾವು ಇಲ್ಲಿಯ ಕಾನೂನನ್ನು ತಿಳಿಯಬೇಕು. ನಮಗೆ ಕಾನೂನಿನ ಅರಿವಿರಲಿಲ್ಲ ಎಂದು ತಪ್ಪು ಮಾಡಿದರೆ ಶಿಕ್ಷೆಯಿಂದ ಜಾರಿಕೊಳ್ಳಲು ಸಾಧ್ಯವಿಲ್ಲ ಎಂದರು.
ಇತ್ತೀಚೆಗೆ ಮಧ್ಯವರ್ತಿಗಳ ಶೋಷಣೆಯಿಂದ ಬಡಜನರಿಗೆ ವ್ಯಾಪಕ ತೊಂದರೆಯಾಗುತ್ತಿದೆ. ಆದ್ದರಿಂದ ಸರ್ವರಿಗೂ ನ್ಯಾಯ ಎಂಬ ನಿಟ್ಟಿನಲ್ಲಿ ಕಾನೂನು ಸೇವಾ ಸಮಿತಿಯಿಂದ ಉಚಿತ ಕಾನೂನು ಅರಿವು ಶಿಬಿರ ಏರ್ಪಡಿಸಲಾಗುತ್ತಿದೆ. ಸಾರ್ವಜನಿಕರು ಇಂತಹ ಶಿಬಿರಗಳ ಉಪಯೋಗ ಪಡೆಯಬೇಕೆಂದರು. ತಾಲೂಕಿನಲ್ಲಿ ಇನ್ನು 3 ದಿನ 9 ಕಾನೂನು ಅರಿವು ಶಿಬಿರ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆಯೆಂದು ಹೇಳಿದರು.
ಹಿರಿಯ ವಕೀಲ  ಪರಮೇಶ್ ಕಂದಾಯ ದಾಖಲಾತಿ ಬಗ್ಗೆ ಮಾಹಿತಿ ನೀಡಿದರು. ನಮ್ಮ ಆಸ್ತಿಯ ಒಡೆತನ ತೋರಿಸ ಬೇಕಾದರೆ ಕಂದಾಯ ದಾಖಲಾತಿ ಅಗತ್ಯವಾಗಿ ಬೇಕು. ಆದ್ದರಿಂದ ಪ್ರತಿಯೊಬ್ಬರು ಇದರ ಬಗ್ಗೆ ಗಮನ ಇರಿಸಬೇಕೆಂದು ತಿಳಿಸಿದರು.
ಪಹಣಿಯಲ್ಲಿ ಏನಾದರೂ ತಪ್ಪುಗಳಾದರೆ ನಮಗೆ ಅದು ಗೊತ್ತಾಗುವುದಿಲ್ಲ. ನಂತರ ನಾವು ಅದನ್ನು ಸರಿಪಡಿಸಲು ಹೋರಾಡ ಬೇಕಾಗುತ್ತದೆ. ಆದ್ದರಿಂದ ಪ್ರತಿವರ್ಷ ಪಹಣಿ ಪಡೆಯಬೇಕು. ಇದೇ ರೀತಿ ಪುರಸಭೆಗೆ ಆಸ್ತಿ ವಿವರ ಸರಿಯಾಗಿ ನೀಡಬೇಕು ಇಲ್ಲದಿದ್ದಲ್ಲಿ ನಾವೇ ತೊಂದರೆ ಅನುಭವಿಸ ಬೇಕಾಗುತ್ತದೆ ಎಂದು ಹೇಳಿದರು.
ವಕೀಲ ಷಣ್ಮುಖ ಮಹಿಳೆಯರಿಗೆ ಕಾನೂನು ನೆರವು ಕುರಿತು ಮಾಹಿತಿ ನೀಡಿದರು. ದೇಶದಲ್ಲಿ ಪುರುಷ ಮತ್ತು ಸ್ತ್ರೀಯರಿಗೆ ಸಮಾನ ಹಕ್ಕುಗಳಿದ್ದು ಕಾನೂನಿನ ಮುಂದೆ ಪ್ರತಿಯೊಬ್ಬರೂ ಸಮಾನರು. 1937ರಲ್ಲಿ ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ವಿಶೇಷ ಕಾನೂನು ಜಾರಿಗೆ ಬಂದಿತು. 1948ರಲ್ಲಿ ಅಂಬೇಡ್ಕರ್ ಈ ಕಾನೂನಿಗೆ ತಿದ್ದುಪಡಿ ತಂದರು. ಇದರಿಂದ ಮಹಿಳೆಯರಿಗೆ ಇನ್ನೂ ಹೆಚ್ಚಿನ ನೆರವು ದೊರೆಯಿತು ಎಂದರು.
ವಕೀಲ ಪೀತಾಂಬರ್ ಮೋಟಾರು ವಾಹನ ಕಾಯ್ದೆಯ ಬಗ್ಗೆ ಮಾಹಿತಿ ನೀಡಿ, ಕಾನೂನು ಅರಿವು ಪ್ರತಿಯೊಬ್ಬ ಮನುಷ್ಯನಿಗೂ ಅವಶ್ಯಕ. ಮೋಟಾರು ವಾಹನ ಕಾಯಿದೆಯಲ್ಲಿ 4 ಭಾಗಗಳಿದ್ದು ಮೊದಲನೆಯದಾಗಿ ಮೋಟಾರು ವಾಹನ ತರಬೇತಿ, ಎರಡನೆಯದಾಗಿ ವಾಹನ ನೊಂದಣಿ, ಮೂರನೇಯದಾಗಿ ವಾಹನ ಅವಧಿ, ಕೊನೆಯದಾಗಿ ವಾಹನದ ವಿಮೆ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳ ಬೇಕೆಂದರು.
ವಕೀಲರ ಸಂಘದ ಅಧ್ಯಕ್ಷ ಆರ್.ಎನ್. ಕೃಷ್ಣಮೂರ್ತಿ, ಸಿಡಿಪಿಓ ಚಂದ್ರರಾಜು, ಪುರಸಭೆ ಮುಖ್ಯಾಧಿಕಾರಿ ಬಸವರಾಜು, ಶಾರದಾ ಗುರುಮೂರ್ತಿ, ಕಲ್ಪನಾ ಕೀರ್ತಿ, ಪಿ.ಪಿ. ಅಶ್ವಿನಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.