ಕುಶಲಕರ್ಮಿಗಳಿಗೆ ಸನ್ಮಾನ ಇಂದು
ಕ.ಪ್ರ.ವಾರ್ತೆ ಮೈಸೂರು ಏ.6
ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಜನ್ಮದಿನೋತ್ಸವ ಹಾಗೂ ಹಿರಿಯ ಕರಕುಶಲಕರ್ಮಿಗಳಿಗೆ ಸನ್ಮಾನ ಕಾರ್ಯಕ್ರಮ ಏ. 7ರಂದು ಇಲ್ಲಿನ ಎಂಜಿನಿಯರಗಳ ಸಂಸ್ಥೆಯಲ್ಲಿ ನಡೆಯಲಿದೆ.
ಕರ್ನಾಟಕ ರಾಜ್ಯ ಕರಕುಶಲ ವಸ್ತುಗಳ ಉತ್ಪಾದಕರ ಸಂಘವು ಬೆಳಗ್ಗೆ 10ಕ್ಕೆ ಏರ್ಪಡಿಸಿರುವ ಈ ಕಾರ್ಯಕ್ರಮವನ್ನು ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಪಿ. ವಿಶ್ವನಾಥ್ ಉದ್ಘಾಟಿಸುವರು ಎಂದು ಸಂಘದ ಅಧ್ಯಕ್ಷ ಎಸ್. ರಾಮು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿರಿಯ ಕಲಾವಿದರಾದ ಕೆ. ಪುಟ್ಟಣ್ಣಚಾರ್, ಅಬ್ದುಲ್ಸತ್ತಾರ್, ಬಹದ್ದೂರ್ ಸಿಂಗ್, ಕೃಷ್ಣ, ಶೆಟ್ಟಿ ಅಣ್ಣಿ, ಅಕ್ಬರ್, ಸುಬ್ಬಣ್ಣ, ರಫೀಕ್ ಅಹಮದ್, ಜಯರಾಂ ಹಾಗೂ ಪಾರ್ವತಮ್ಮ ಅವರನ್ನು ಸನ್ಮಾನಿಸಲಿದ್ದು, ಈ ಹತ್ತು ಮಂದಿ ಕಲಾವಿದರಿಗೂ ತಲಾ 2,500 ನೀಡಿ ಗೌರವಿಸಲಾಗುವುದು ಎಂದರು.
ಕರಕುಶಲ ಅಭಿವೃದ್ಧಿ ಮತ್ತು ಮಾರಾಟ ಸೇವಾ ಕೇಂದ್ರದ ಸಹಾಯಕ ನಿರ್ದೇಶಕ ಶಶಿಧರ್, ನಗರ ಪಾಲಿಕೆ ಸದಸ್ಯರಾದ ಆರ್. ನಾಗರಾಜ್, ಎಂ.ಜೆ. ರವಿಕುಮಾರ್, ಸಿ. ರಮೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು. ಕಾರ್ಯದರ್ಶಿ ಎನ್. ಕುಮಾರ್ ಮಾತನಾಡಿ, 6 ಸಾವಿರ ಮಂದಿ ಕಲಾವಿದ್ದರು. ಇದೀಗ ಕೇವಲ 3 ಸಾವಿರಕ್ಕೆ ಇಳಿದಿದೆ. ಹೊಸ ಕಲಾವಿದರು ಬರುತ್ತಿಲ್ಲ. ರಾಜರ ಕಾಲದ ಕಲೆ ಉಳಿಸುವಲ್ಲಿ ಕಲಾವಿದರಿಗೆ ಅಗತ್ಯ ವಸ್ತುಗಳಿಗೆ ಅನುದಾನ ಹಾಗೂ ರಿಯಾಯತಿ ನೀಡಿ ಸಹಕರಿಸಬೇಕು ಎಂದು ತಿಳಿಸಿದರು. ಖಜಾಂಚಿ ಎ. ಸೋಮಶೇಖರ್, ಸದಸ್ಯರಾದ ಮುಕ್ತಾರ್ ಅಹಮದ್, ಮಧುಸೂದನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

