ರಾಮನವಮಿ ಕಾರ್ಯಕ್ರಮ
ಮೈಸೂರು: ಇಲ್ಲಿನ ಕಾಂತರಾಜ ಅರಸ್ ರಸ್ತೆಯಲ್ಲಿರುವ ಕೃಷ್ಣಮೂರ್ತಿಪುರಂ ಶ್ರೀರಾಮಮಂದರಿದಲ್ಲಿ ಏ. 11ರ ಸಂಜೆ 5.15ಕ್ಕೆ 84ನೇ ವರ್ಷದ ಶ್ರೀರಾಮೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಿರಿಯ ಶಸ್ತ್ರತಜ್ಞರಾದ ಡಾ.ಸಿ.ಜಿ. ನರಸಿಂಹನ್ ಉದ್ಘಾಟಿಸುವರು. ಇಳೈ ಅಳ್ವಾರ್ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.
ಸೀತಾವಿಲಾಸ ರಸ್ತೆಯಲ್ಲಿರುವ ಮೂಲಾಮ್ನಾಯ ಕಂಚಿಕಾಮಕೋಟಿ ಸರ್ವಜ್ಞಪೀಠಂ ಸೀತಾರಾಮಸ್ವಾಮಿ ದೇವಸ್ಥಾನದಲ್ಲಿ ಏ. 11 ರಿಂದ 20 ರವರೆಗೆ ಶ್ರೀರಾಮನವಮಿ ಮಹೋತ್ಸವ ನಡೆಯಲಿದೆ.
ಹೆಬ್ಬಾಳು ಮತ್ತು ವಿಜಯನಗರ ಬ್ರಾಹ್ಮಣ ಸಂಘದ ವತಿಯಿಂದ ಹೆಬ್ಬಾಳ್ 2ನೇ ಹಂತದ ನಾರಾಯಣಾಮೃತ ಫೌಂಡೇಷನ್ ಸಾಧನ ಪ್ರಾಂಗಣದಲ್ಲಿ ಏ. 19 ರಿಂದ 27 ರವರೆಗೆ ಶ್ರೀರಾಮನವಮಿ ಕಾರ್ಯಕ್ರಮ ನಡೆಯಲಿದೆ.
ಪಂಚಾಂಗ ಶ್ರವಣ: ಬೋಗಾದಿಯ ಎರಡನೇ ಹಂತದ ಆಯಿಶ್ ಕಾಲೋನಿಯಲ್ಲಿರುವ ರ್ಯಾವಲ್ಕ್ಯ ಶುಕ್ಲ ಯಜುರ್ವೇದ ಮಹಾಸಭಾ ವತಿಯಿಂದ ಏ. 11ರ ಸಂಜೆ 6ಕ್ಕೆ ಚಂದ್ರಮಾನ ಯುಗಾದಿ ಮತ್ತು ಪಂಚಾಂಗ ಶ್ರವಣ ಆಚರಣೆ ಹಮ್ಮಿಕೊಳ್ಳಲಾಗಿದೆ.
'ಆರೋಗ್ಯಕರ ಜೀವನಶೈಲಿ'
ಮೈಸೂರು: ಅಲೋಪತಿ, ಆಯುರ್ವೇದ, ಹೋಮಿಯೋಪತಿ ಮುಂತಾದ ವೈದ್ಯಕೀಯ ಪದ್ಧತಿಗಳ ನಡುವಿನ ತೆರೆ ಸರಿಸಬೇಕು ಎಂದು ಮೈಸೂರು ವೈದ್ಯಕೀಯ ಕಾಲೇಜಿನ ಎಂಡೋಕ್ರೈನಾಲಜಿ ವಿಭಾಗದ ಮುಖ್ಯಸ್ಥ ಡಾ. ಎಂ.ಎ. ಶೇಖರ್ ಹೇಳಿದರು.
ನಗರದ ತೇರಪಂಥ್ ಭವನದಲ್ಲಿ ಭಾನುವಾರ ಆರೋಗ್ಯ ಭಾರತಿ ಮತ್ತು ಆಯುಷ್ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಆರೋಗ್ಯ ಜೀವನ ಶೈಲಿ ಕುರಿತ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಚಿತ್ರಕಲಾ ಶಿಬಿರ
ಮೈಸೂರು: ಸಿದ್ದಾರ್ಥನಗರದ ಶಾಂತಿಮಾರ್ಗದ ಒಂದನೇ ಹಂತದಲ್ಲಿರುವ ತನುಶ್ರೀ ಚಿತ್ರಕಲಾ ಶಾಲೆಯಲ್ಲಿ ಏ. 12ರಿಂದ ಮೇ 10 ರವರೆಗೆ ಬೆಳಗ್ಗೆ 10.30 ರಿಂದ 12.30 ರವರೆಗೆ 16 ವರ್ಷದ ಮಕ್ಕಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಬೇಸಿಗೆ ಚಿತ್ರಕಲಾ ಶಿಬಿರ ಏರ್ಪಡಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9480476857 ಸಂಪರ್ಕಿಸಿರಿ.
ಕರಾಟೆ ಶಿಬಿರ
ಯುಶು ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ನಜರ್ಬಾದ್ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಕರಾಟೆ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9740028190 ಸಂಪರ್ಕಿಸಿರಿ
ಕಾರ್ಯಾಗಾರ
ನೇತಾಜಿ ಎಜುಕೇಷನ್ ಫೌಂಡೇಷನ್ ವತಿಯಿಂದ ಕರ್ನಾಟಕ ಸೇವಾ ಆಯೋಗವು ನಡೆಸುವ ಕೆಎಎಸ್ ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದಂತೆ ತರಬೇತಿ ನೀಡಲಿದೆ. ಆಸಕ್ತರು ಮಾಹಿತಿಗಾಗಿ ಮೊ. 9980639953 ಸಂಪರ್ಕಿಸಿರಿ
ಕಲಾ ಮೇಳ
ಜೆ.ಪಿ. ನಗರದ 2ನೇ ಹಂತದಲ್ಲಿರುವ ಕಲಾ ಪ್ರಪಂಚ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಕಲಾಮೇಳ ಹಮ್ಮಿಕೊಂಡಿದೆ. ಮಾಹಿತಿಗಾಗಿ ಮೊ. 9342049921 ಸಂಪರ್ಕಿಸಬಹುದು.
ನೇಮಕ
ಸಂಯುಕ್ತ ಜನತಾದಳದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರನ್ನಾಗಿ ಕುವೆಂಪುನಗರದ ನಿವಾಸಿ ಎನ್.ಆರ್. ರಘು, ಕೆಜೆಪಿ ಎಸ್ಟಿ ಘಟಕದ ಅಧ್ಯಕ್ಷ ಮಧುವನ ಚಂದ್ರ ಜೆಡಿಎಸ್ ಪ. ಜಾತಿ ವಿಭಾಗದ 31ನೇ ವಾರ್ಡ್ ಅಧ್ಯಕ್ಷರಾಗಿ ಆರ್. ಸಿದ್ದರಾಜು ಅವರನ್ನು ನೇಮಿಸಲಾಗಿದೆ.
ಚರ್ಚಾ ಸ್ಪರ್ಧೆ
ರಾಮಕೃಷ್ಣನಗರದ ದಿ ವಾಯ್ಸ್ ವತಿಯಿಂದ ಏ. 14 ಮತ್ತು 15 ರಂದು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಕುವೆಂಪುನಗರದ ಕಾವೇರಿ ಎಜುಕೇಷನ್ ಸಂಸ್ಥೆಯಲ್ಲಿ ಬ್ರಿಟಿಷ್ ಶೈಲಿಯ ಧ್ವನಿ ಚರ್ಚಾ ಸ್ಪರ್ಧೆ ಏರ್ಪಡಿಸಿದೆ. ಮಾಹಿತಿಗೆ ವರುಣ್ ವೆಂಕಟ್, ಮೊ. 9535614323 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

