ಹದಗೆಟ್ಟ ಪಾಳ್ಯ ಹೋಬಳಿ ರಸ್ತೆ ದುರಸ್ತಿಗೆ ಆಗ್ರಹ
ಕನ್ನಡಪ್ರಭ ವಾರ್ತೆ ಹಾಸನ ಏ.8
ಆಲೂರು ತಾಲೂಕು ಪಾಳ್ಯ ಹೋಬಳಿ ವ್ಯಾಪ್ತಿಗೆ ಸೇರಿದ ಹಲವು ಪ್ರದೇಶಗಳ ರಸ್ತೆಗಳು ತೀವ್ರ ಹದಗೆಟ್ಟಿದ್ದು, ಶೀಘ್ರವೇ ದುರಸ್ತಿಪಡಿಸುವಂತೆ ಸಮಾಜ ಸೇವಕ ಕೆ.ಎಸ್.ತೀರ್ಥಪ್ಪ ಒತ್ತಾಯಿಸಿದ್ದಾರೆ.
ಹೋಬಳಿಯ ಪಾಳ್ಯ, ಸಿಂಗೋಡನಹಳ್ಳಿ, ಅಂಜೋಡನಹಳ್ಳಿ, ದಾಸಹಳ್ಳಿ, ಕಾಡನಹಳ್ಳಿ, ಕೊಟಗನಹಳ್ಳಿ, ಮಗ್ಗೇಹಳ್ಳಿ, ಸಿಂಗಟಗೆರೆ, ಕೋರೆಹಳ್ಳಿ, ಕಟ್ಟೆಗದ್ದೆ, ಮುದ್ದನಾಯಕನಹಳ್ಳಿ, ನಲ್ಲೂರು, ಸಿಂಧನಹಳ್ಳಿ, ಬೆಚಟ್ಟದಳ್ಳಿ, ದೈತಾಪುರ, ಬಲ್ಲೂರು, ನಿಡುಗರಹಳ್ಳಿ, ಮಗ್ಗೆಗೆ ಹೋಗುವ ರಸ್ತೆಗಳು ತೀವ್ರ ಹದೆಗೆಟ್ಟಿದೆ. ಈ ರಸ್ತೆ ಜನ, ಜಾನುವಾರುಗಳು ಸಂಚರಿಸಲು ಯೋಗ್ಯವಾಗಿಲ್ಲ. ಇನ್ನು ವಾಹನ ಸಂಚಾರವಂತೂ ಹೇಳ ತೀರದಾಗಿದೆ ಎಂದು ದೂರಿದ್ದಾರೆ.
ಈ ರಸ್ತೆಯನ್ನು ದುರಸ್ತಿ ಪಡಿಸುವಂತೆ ಹಲವು ಬಾರಿ ಸಕಲೇಶಪುರ ಲೋಕೋಪಯೋಗಿ ಕಾರ್ಯಪಾಲಕ ಎಂಜಿನಿಯರ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ರಸ್ತೆಯಲ್ಲಿ ಒಮ್ಮೆಯಾದರೂ ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಿ ಪರಿಸ್ಥಿತಿ ತಿಳಿಯಬೇಕಿದೆ ಎಂದಿದ್ದಾರೆ.
ಹಗಲಿನ ವೇಳೆಯಲ್ಲೇ ಈ ರಸ್ತೆಯಲ್ಲಿ ಸಂಚರಿಸಲು ಭಯವಾಗುತ್ತದೆ. ಇನ್ನು ರಾತ್ರಿ ಸಮಯದಲ್ಲಿ ಸಂಚರಿಸುವವರ ಪಾಡಂತೂ ಹೇಳತೀರದು. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಗಮನಹರಿಸಿ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

