ಕಾನೂನಿನ ಮಾಹಿತಿ ಎಲ್ಲರಿಗೂ ಬೇಕು
ಕ.ಪ್ರ. ವಾರ್ತೆ ಆಲೂರು ಏ.13
ಯಾವ ವ್ಯಕ್ತಿಗೆ ಕಾನೂನಿನ ಹಕ್ಕನ್ನು ಪ್ರತಿಪಾದಿಸುವ ಅರಿವಿಲ್ಲವೋ ಅಂತಹವರಿಗೆ ಅರಿವು ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ತಾ. ಕಾನೂನು ಸೇವಾ ಸಮಿತಿ ಸದಸ್ಯ, ಕಾರ್ಯದರ್ಶಿ ಮತ್ತು ಸಿವಿಲ್ ಜಡ್ಜ್ ಪಿ. ಹನುಮಂತಪ್ಪ ತಿಳಿಸಿದರು.
ಅವರು ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಆಯೋಜಿಸಿದ್ದ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಹಾಗೂ ನಾನಾ ಇಲಾಖೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ಮೂಡಿಸುವ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಿಳೆಯರ ಹಕ್ಕು, ಸಂರಕ್ಷಣೆ, ಮಹಿಳಾ ಶೋಷಣೆ ಬಗ್ಗೆ ತಿಳಿಸುತ್ತಾ, ಕೆಲಸ ಮಾಡುವ ಮಹಿಳೆಯರಿಗೆ ಸಹೋದ್ಯೋಗಿಗಳಿಂದ, ವಿದ್ಯಾರ್ಥಿನಿಯರಿಗೆ ಶಾಲಾ ಕಾಲೇಜುಗಳಲ್ಲಿ ಛೇಡಿಸುವಿಕೆ, ದ್ವಂದ್ವಾರ್ಥ ಮಾತುಗಳು, ಅಶ್ಲೀಲ ಸಂಜ್ಞೆ ಮುಂತಾದವುಗಳ ಕುರಿತು ದೂರು ನೀಡಿದಲ್ಲಿ ಇವು ಜಾಮೀನು ರಹಿತ ಅಪರಾಧಗಳಾಗಿದ್ದು, ಸಾರ್ವಜನಿಕರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಿಳಿವಳಿಕೆ ಪಡೆಯದಿರುವುದು ವಿಷಾದಕರ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಎನ್.ಕೆ. ಶಾರದಾಂಬ, ಮನೆ ಮನೆ ಬಾಗಿಲಿಗೆ ಕಾನೂನಿನ ಅರಿವನ್ನು ತಲುಪಿಸುವ ಸಲುವಾಗಿ ಪ್ರಾರಂಭಿಸಲಾಗಿರುವ ಕಾನೂನು ಅರಿವು ಸಾಕ್ಷರತಾ ರಥದ ಸದುಪಯೋಗ ಪಡೆಯುವಂತೆ ತಿಳಿಸಿದರು. ವಿಶೇಷ ಉಪನ್ಯಾಸ ನೀಡಿದ ವಕೀಲ ಕೆ. ನಾಗರಾಜ್ ಮಾತನಾಡಿ, ಸಿವಿಲ್ ದಾವೆಯನ್ನು ಉದಾಹರಣೆಯಾಗಿ ನೀಡಿ, ತಾತ್ಕಾಲಿಕ ತಡೆಯಾಜ್ಞೆ ಕುರಿತು, ಸ್ವಾಧೀನ ಹಕ್ಕು ಇರುವವನ ಜಮೀನನ್ನು ಅತಿಕ್ರಮ ಪ್ರವೇಶ ಮಾಡಿದರೆ, ಈತನ ಎದುರು ಪಾರ್ಟಿಯ ಮೇಲೆ ಪೊಲೀಸ್ ದೂರು ನೀಡಿದಲ್ಲಿ ಪೊಲೀಸರು ರಕ್ಷಣೆ ನೀಡಲು ಬರುವುದಿಲ್ಲ. ಪ್ರಕರಣ ಸಿವಿಲ್ ಆಗಿರುವುದರಿಂದ ಸಿವಿಲ್ ನ್ಯಾಯಾಲಯಕ್ಕೆ ಹೋಗಲು ಸೂಚಿಸಬೇಕು ಎಂದು ನುಡಿದರು. ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್. ಮಹೇಶ್, ಕಾರ್ಯದರ್ಶಿ ಕೆ.ಜಿ. ನಾಗರಾಜ್, ಖಜಾಂಚಿ ಬಿ.ಡಿ. ಸಂದೀಪ್, ಪಿಎಸ್ಐ ಜಯಲಕ್ಷ್ಮಿ, ಜೀವನ್ ಇನ್ನಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

