ಹಾಸನ

ಮನಸ್ಸಿನ ನಿರ್ವಹಣೆ ಕುರಿತು ಉಪನ್ಯಾಸ

Published On :

ಕ.ಪ್ರ. ವಾರ್ತೆ  ಹೊಳೆನರಸೀಪುರ  ಏ.14
ಆಲೋಚನೆಯಂತೆ ಮಾತು, ಮಾತಿನಂತೆ ಕರ್ಮವಾದಾಗ ಮನಸ್ಸಿನ ಸಾಮರಸ್ಯ ಸಾಧ್ಯವಾಗುತ್ತದೆ. ಇದು ಜೀವನದಲ್ಲಿ ಸಂಬಂಧ ಮತ್ತು ಸಾಮರಸ್ಯಗಳಿಗೂ ಪೂರಕ. ಇದನ್ನು ಮನುಷ್ಯ ಅಪಾರದರ್ಶಕತೆ, ದಾಸ್ಯ ಮತ್ತು ಅಪನಂಬಿಕೆಯ ತಡೆಗೋಡೆಗಳ ಮೂಲಕ ಕೆಡಿಸಿಕೊಂಡು ಬಸವಳಿಯುತ್ತಿದ್ದು ಇದಕ್ಕೆ ಪರಿಹಾರವೆಂದರೆ ಮನಸ್ಸಿನ ನಿರ್ವಹಣೆ ಎಂದು ಚಿಂತಕ, ಆಧ್ಯಾತ್ಮಿಕ ಸಾಧಕ ಬಿ.ಕೆ.ರಂಗನಾಥ್ ತಿಳಿಸಿದರು.
 ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಇಲ್ಲಿನ ಶಾಂತಿ ಅರಮನೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮನಸ್ಸಿನ ನಿರ್ವಹಣೆ ಕುರಿತು ಅವರು ಉಪನ್ಯಾಸ ನೀಡಿದರು.
    ವಿಜ್ಞಾನ ಮತ್ತು ಅಧ್ಯಾತ್ಮ ಇವುಗಳನ್ನು ಮನುಷ್ಯ ಬದುಕಿನಲ್ಲಿ ಸರಿದೂಗಿಸಿಕೊಂಡು ಹೋಗಲು ಅಸಮರ್ಥನಾಗುತ್ತಿರುವುದರಿಂದ ಮತ್ತು ಭೋಗಲಾಲಸೆಯ ಇಚ್ಛೆಯಿಂದಾಗಿ ಜೀವನದಲ್ಲಿ ಜಂಜಾಟ, ಒತ್ತಡ, ಖಿನ್ನತೆ ಇತ್ಯಾದಿಗಳಿಂದ ಮನಸ್ಸಿನ ನೆಮ್ಮದಿ, ಶಾಂತಿ ಕಳೆದುಕೊಳ್ಳುತ್ತಿದ್ದಾನೆ ಎಂದರು.
ಇಂತಹ ಸನ್ನಿವೇಶಗಳಿಂದ ಮುಕ್ತನಾಗಲು ಮನಸ್ಸಿನ ಮೇಲಿನ ನಿಯಂತ್ರಣ ಅತ್ಯಗತ್ಯವಾಗಿದ್ದು, ಮನಸ್ಸಿನ ನಿರ್ವಹಣೆ ಇಂದಿನ ವಿದ್ಯಮಾನಕ್ಕೆ ಪ್ರಸ್ತುತವು, ಅಗತ್ಯವೂ ಮತ್ತು ಅನಿವಾರ್ಯವೂ ಆಗಿದೆ. ಮನಸ್ಸು ಪ್ರತಿ ವ್ಯಕ್ತಿಯಲ್ಲಿನ ವಿವಿಧ ಆಯಾಮಗಳ ಅಂತರ್ಗತ ಕೇಂದ್ರ ಬಿಂದುವಾಗಿದ್ದು, ಮನಸ್ಸು ಸಂಕಲ್ಪಗಳ ಮತ್ತು ಆಲೋಚನೆಗಳ ಜನಕ, ಮನಸ್ಸು ತನ್ನ ವಾತಾವರಣ, ಪರಿಸರ, ಸಂಬಂಧ ಹಾಗೂ ಸುತ್ತಲಿನ ಆಗು ಹೋಗುಗಳನ್ನು ಇಂದ್ರಿಯಗಳ ಮೂಲಕ ನೋಡುವುದನ್ನು, ಕೇಳುವುದನ್ನು ಮತ್ತು ಅನುಭವಿಸುವುದನ್ನು ನಿಯಂತ್ರಿಸುತ್ತದೆ ಎಂದು ಹೇಳಿದರು.
  ಸಕಾರಾತ್ಮಕ ಆಲೋಚನೆಯಿಂದ ಶಕ್ತಿಯ ಶೇಖರಣೆಯಾಗುತ್ತದೆ, ನಕಾರಾತ್ನಕ ಆಲೋಚನೆಗಳನ್ನು ನಿಯಂತ್ರಿಸುವುದರಿಂದ ಮನೋಶಕ್ತಿಯು ಉಳಿಯುತ್ತದೆ ಎಂದರು.
  ವಿದ್ಯಾಲಯದ ಸಂಚಾಲಕಿ ಬಿ.ಕೆ.ಸರೋಜ ಭಗವಂತನ ಪರಿಚಯ ಹಾಗೂ ಸದ್ಗುಣಗಳ ಬಗ್ಗೆ ಅರಿತು ಅಧ್ಯಾತ್ಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಉಜ್ವಲ ಭವಿಷ್ಯವನ್ನು ಹೊಂದಬಹುದಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.