ಹಾಸನ

'ಮಹಿಳೆಯರಿಗೆ ಗೌರವ ನೀಡುವ ಸಂಸ್ಕಾರ ಯುವಕರಲ್ಲಿ ಬೆಳೆಸಬೇಕು'

Published On :

ಕ.ಪ್ರ. ವಾರ್ತೆ ಸಕಲೇಶಪುರ ಏ.14
ಮಹಿಳೆಯರಿಗೆ ಗೌರವ ನೀಡುವ ಸಂಸ್ಕಾರವನ್ನು ಕುಟುಂಬಗಳು ಯುವಕರಲ್ಲಿ ಬೆಳೆಸಿದಾಗ ಮಾತ್ರ ಸ್ತ್ರೀದೌರ್ಜನ್ಯ ತಡೆಯಲು ಸಾಧ್ಯ ಎಂದು ಚಿಂತಕಿ ಶಾಂತ ಅತ್ನಿ ಹೇಳಿದರು. ಪಟ್ಟಣದ ಮಿನಿ ಸಮುದಾಯ ಭವನದಲ್ಲಿ ಮಹಿಳಾ ಜಾಗೃತಿ ಮಾರ್ಗದರ್ಶಿ ಅಸೋಸಿಯೇಟ್ಸ್ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚಾರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 ಕಾನೂನುಗಳಿಂದ ಮಾತ್ರ ಸ್ತ್ರೀದೌರ್ಜನ್ಯ ತಡೆಯಲು ಸಾಧ್ಯವಿಲ್ಲ. ಮನೆಯಲ್ಲಿ ಗಂಡು ಹೆಣ್ಣು ಬೇಧ ಎಣಿಸದೆ  ಸಮಾನತೆಯಿಂದ ಬೆಳೆಸಬೇಕು ಎಂದರು. ದೆಹಲಿ ಅತ್ಯಾಚಾರ ಪ್ರಕರಣ ಹಳ್ಳಿಹಳ್ಳಿಗಳಲ್ಲಿನ ಮಹಿಳೆಯರ ಮನಸ್ಸನ್ನು ನಾಟಿತ್ತು, ಪ್ರತಿ ಮಹಿಳೆಯು ತನಗಾದ ಅವಮಾನ ಎಂದು ಭಾವಿಸಿ ಪ್ರತಿಕ್ರಿಯಿಸಿದರು. ಪ್ರತಿದಿನ ಇಂಥ ಪ್ರಕರಣಗಳು ವರದಿಯಾಗುತ್ತಲೇ ಇವೆ ಎಂದು ವಿಷಾದಿಸಿದರು.
 ಶಿಕ್ಷಕಿ ಸೌಭಾಗ್ಯ ಮಾತನಾಡಿ, ಸಮಾನತೆಯ ಕಾನೂನು ಪುಸ್ತಕಕ್ಕೆ ಸೀಮಿತವಾಗಿವೆ, ಎಲ್ಲೂ ಕಾರ್ಯಗತವಾಗುತ್ತಿಲ್ಲ. ಈ ನಮ್ಮ ಹಕ್ಕುಗಳಿಗಾಗಿ ನಾವು ಹೋರಾಡ ಬೇಕಾದ ಪರಿಸ್ಥಿತಿ ಒದಗಿದೆ ಎಂದು ಹೇಳಿದರು.
 ಸಂಸ್ಥೆ ಅಧ್ಯಕ್ಷೆ ಕಲ್ಪನಾ ಕೀರ್ತಿ ಮಾತನಾಡಿ, ಮಹಿಳಾ ಜಾಗೃತಿ ಮಾರ್ಗದರ್ಶಿ ಅಸೋಸಿಯೇಟ್ಸ್ ಪ್ರಾರಂಭವಾದ ನಂತರ ಈ ವ್ಯಾಪ್ತಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳ ಸಂಖ್ಯೆ ಇಳಿಮುಖವಾಗಿದೆ ಇದಕ್ಕೆ ಅರಿವು ಮುಖ್ಯ ಕಾರಣ ಎಂದು ಹೇಳಿದರು. ಸುವರ್ಣ ಕ್ಲಬ್ ಅಧ್ಯಕ್ಷೆ ಎಂ ಸುಮ, ಶಿಕ್ಷಕಿ ಚಿತ್ರಲೇಖ, ಪವಿತ್ರ ಉದೇವಾರ, ಅಶ್ರಫ್ ರೆಹಮಾನ್ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.