ಹಾಸನ

ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ದುರ್ಬಲ

Published On :

ಕನ್ನಡಪ್ರಭ ವಾರ್ತೆ  ಹಾಸನ  ಏ 14
ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ದುರ್ಬಲ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೀಡುವ ಉಚಿತ ದಾಖಲಾತಿಯಲ್ಲಿ ಭಾರೀ ಪ್ರಮಾಣದ ಲೋಪ ಹಾಗೂ ವಂಚನೆಯಾಗುತ್ತಿದ್ದು, ಈ ವಿರುದ್ಧ ಸಂಬಂಧಪಟ್ಟವರ ವಿರುದ್ಧ ದೂರು ನೀಡುವುದಾಗಿ ನೊಂದ ಪೋಷಕ ಎಚ್.ಟಿ.ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.
  ರಾಜ್ಯ ಸರ್ಕಾರದಿಂದ ಆರ್‌ಟಿಇ ಅಡಿಯಲ್ಲಿ ದುರ್ಬಲ ಹಾಗೂ ಹಿಂದುಳಿದ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಸಲುವಾಗಿ ಮೀಸಲಿರಿಸಿದ್ದ ಸೀಟುಗಳು ಉಳ್ಳವರ ಹಾಗೂ ನಕಲಿ ದಾಖಲಾತಿ ನೀಡಿರುವವರ ಪಾಲಾಗಿದ್ದು, ಇದರ ಹಿಂದೆ ನೇರವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿ, ನಕಲಿ ದಾಖಲೆ ನೀಡಿದ ನಗರಸಭೆ ಅಧಿಕಾರಿಗಳ ಕೈವಾಡವಿದ್ದು, ಅವರ ವಿರುದ್ಧ ದೂರು ನೀಡಲಾಗುವುದು ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
  ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ದುರ್ಬಲ ವರ್ಗ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ದಾಖಲಾತಿಯಲ್ಲಿ ಆಗಿರುವ ಲೋಪ ಉದ್ದೇಶ ಪೂರಿತವಾಗಿ ವಂಚನೆ ಮಾಡಲಾಗಿದೆ. ಆರ್‌ಟಿಇ ಅಡಿಯಲ್ಲಿ ಉಚಿತ ಶಿಕ್ಷಣಕ್ಕಾಗಿ ಹಲವರು ಜನ ಸ್ಥಳವನ್ನೆ ಬದಲಾಯಿಸಿ ಬೋಗಸ್ ದಾಖಲೆ ನೀಡುವುದರ ಮೂಲಕ ತಮ್ಮ ಮಕ್ಕಳ ಸೀಟು ಪಡೆಯಲಾಗಿದೆ ಎಂದು ಆರೋಪಿಸಿದರು.
 ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ದೂರು ನೀಡಿದರೆ ಅವರು ಯಾವುದೇ ಕ್ರಮ ಕೈಗೊಳ್ಳಲು ನಿರಾಕರಿಸುತ್ತಾರೆ. ಯಾವುದಕ್ಕೂ ಸರಿಯಾದ ಮಾಹಿತಿ ನೀಡದೇ ದುರ್ಬಲ ವರ್ಗದ ಸೀಟುಗಳನ್ನು ಖಾಸಗಿ ಶಾಲೆಯವರು ಹಾಗೂ ಶಿಕ್ಷಣ ಇಲಾಖೆಯವರು ಶಾಮೀಲಾಗಿ ತಮಗೆ ಬೇಕಾದವರಿಗೆ ಮಂಜೂರು ಮಾಡುವ ಮೂಲಕ ಆರ್‌ಟಿಇ ನಲ್ಲಿ ಶೇ.100ಕ್ಕೆ ಶೇ.60 ರಷ್ಟು ಮೋಸ ನಡೆದಿದೆ ಎಂದು ಆಪಾದಿಸಿದರು.
ನಗರದ ಕೆಲ ಖಾಸಗಿ ಶಾಲೆಗಳಲ್ಲಿ ಅರ್ಜಿಯೇ ತೆಗೆದುಕೊಂಡಿಲ್ಲ. 50 ಸೀಟುಗಳು ಮಂಜೂರಾಗಿದ್ದರೇ ಈ ಪೈಕಿ 30ಕ್ಕೂ ಹೆಚ್ಚು ಅರ್ಜಿಗಳಲ್ಲಿ ಸುಳ್ಳು ವಿಳಾಸ ನೀಡಿ ಸೀಟುಗಳನ್ನು ಪಡೆಯಲಾಗಿದೆ ಎಂದು ದೂರಿದ ಅವರು, ಇಂತಹ ಅನ್ಯಾಯಗಳಿಗೆ ಡಿಡಿಪಿಐ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಶಾಮೀಲಾಗಿದ್ದಾರೆ.
  ಈ ವಿರುದ್ಧವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ಹೇಳಿದರು. ಪೋಷಕರಾದ ಬಸವರಾಜು, ಕುಮಾರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.