ಜಿಲ್ಲಾದ್ಯಂತ ನಾಮಪತ್ರ ಸಲ್ಲಿಕೆ ಭರಾಟೆ
ಕ.ಪ್ರ. ವಾರ್ತೆ , ಹಾಸನ , ಏ 15
ಜಿಲ್ಲಾದ್ಯಂತ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರಗಳನ್ನು ಸಲ್ಲಿಸಲಾಯಿತು. ಜೆಡಿಎಲ್ಪಿ ನಾಯಕ ಎಚ್.ಡಿ.ರೇವಣ್ಣ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ರುದ್ರೇಶ್ ,ಗೌಡ, ಬಿ. ಶಿವರಾಂ, ಅನುಪಮ ಸೇರಿದಂತೆ ಹತ್ತಾರು ಮಂದಿ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.
ಹಠಾತ್ ಬೆಳವಣಿಗೆಯಯಲ್ಲಿ ಶ್ರವಣಬೆಳಗೊಳದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅಂತಿಮ ಕ್ಷಣದವರೆಗೂ ಪೈಪೋಟಿ ನಡೆಸಿದ ಎಂ.ಎ. ಗೋಪಾಲಸ್ವಾಮಿ ಕಡೇ ಗಳಿಗೆಯಲ್ಲಿ ಕೆಜೆಪಿಯಿಂದ ನಾಮಪತ್ರ ಸಲ್ಲಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಅಚ್ಚರಿ ಮೂಡಿಸಿದೆ.
ಜೆಡಿಎಸ್ನಿಂದ ಕಾಂಗ್ರೆಸ್ಗೆ ಹಾರಿ ಟಿಕೆಟ್ ಪಡೆದ ಸಿ.ಎಸ್. ಪುಟ್ಟೇಗೌಡ ಬುಧವಾರ ನಾಮಪತ್ರ ಸಲ್ಲಿಸುವರು. ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಎಸ್. ಪ್ರಕಾಶ್ ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ಬಂದರಾದರೂ ಬಿ ಫಾರಂ ಸಿಗದ ಕಾರಣ ಹಿಂತಿರುಗಿದರು. ಹೊಳೆನರಸೀಪುರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಎಚ್.ಡಿ.ರೇವಣ್ಣ, ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಜಿ. ಅನುಪಮ, ಬಿಜೆಪಿಯಿಂದ ಹೇಮಂತ್ಕುಮಾರ್, ಎಂ.ಎನ್. ಕುಮಾರ್, ಅರಸೀಕೆರೆಯಲ್ಲಿ ಜೆಡಿಎಸ್ನ ಕೆ.ಎಂ.ಶಿವಲಿಂಗೇಗೌಡ, ಕಾಂಗ್ರೆಸ್ನಿಂದ ಮಾಜಿ ಸಚಿವ ಬಿ. ಶಿವರಾಂ, ಬಿಜೆಪಿಯಿಂದ ಡಿ.ಬಿ.ಗಂಗಾಧರ್, ಜೆಡಿಯುನಿಂದ ಸೋಮಶೇಖರ್, ಬೇಲೂರಿನಿಂದ ಕಾಂಗ್ರೆಸ್ನ ವೈ.ಎನ್. ರುದ್ರೇಶ್ಗೌಡ, ಬಿಜೆಪಿಯಿಂದ ಲಕ್ಷಣ್, ಪಕ್ಷೇತರರಾಗಿ ಬಿ.ಶಿವರುದ್ರಪ್ಪ, ಅರಕಲಗೂಡಿನಿಂದ ಜೆಡಿಎಸ್ನ ಎ.ಟಿ.ರಾಮಸ್ವಾಮಿ, ಕಾಂಗ್ರೆಸ್ನಿಂದ ಎ.ಮಂಜು, ಕೆಜೆಪಿಯಿಂದ ಎಸ್. ಪುಟ್ಟಸ್ವಾಮಿ, ಪಕ್ಷೇತರರಾಗಿ ಯೋಗಾರವುಶ್,
ಶ್ರವಣಬೆಳಗೊಳದಿಂದ ಜೆಡಿಎಸ್ನ ಸಿ.ಎನ್. ಬಾಲಕೃಷ್ಣ, ಕೆಜೆಪಿಯಿಂದ ಎ.ಎಂ. ಗೋಪಾಲಸ್ವಾಮಿ, ಬಿಜೆಪಿಯಿಂದ ಪಟೇಲ್ ಮಂಜುನಾಥ್ ನಾಮಪತ್ರ ಸಲ್ಲಿಸಿದರು.
ಸಕಲೇಶಪುರ ಮೀಸಲು ಕ್ಷೇತ್ರದಿಂದ ಜೆಡಿಎಸ್ನ ಎಚ್.ಕೆ. ಕುಮಾರಸ್ವಾಮಿ, ಕಾಂಗ್ರೆಸ್ನಿಂದ ಡಿ. ಮಲ್ಲೇಶ್, ಜೆಡಿಯುನಿಂದ ವೆಂಕಟೇಶ್, ಪಕ್ಷೇತರರಾಗಿ ನಿರಗುಂದ ಪುಟ್ಟಯ್ಯ, ಬಿಜೆಪಿಯಿಂದ ಡಾ. ನಾರಾಯಣಸ್ವಾಮಿ ಹಾಗೂ ಪಕ್ಷೇತರರಾಗಿ ಮುಕಂದೂರು ತಿಮ್ಮಯ್ಯ ನಾಮಪತ್ರ ಸಲ್ಲಿಸಿದ್ದಾರೆ.
ಹಾಸನಾಂಬ ದೇವಿಗೆ ವಿಶೇಷ ಪೂಜೆ: ಕಾಂಗ್ರೆಸ್ನಿಂದ ಎಚ್.ಕೆ.ಮಹೇಶ್ ಹಾಸನ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಅವರು ನಗರದ ಅದಿ ದೇವತೆ ಹಾಸನಾಂಬ ದೇವಾಲಯದಲ್ಲಿ ದೇವಿಗೆ ಪೂಜೆ ಸಲ್ಲಿಸಿದರು. ನಂತರ ಅಲ್ಲಿಂದ ಮೆರವಣಿಗೆಯಲ್ಲಿ ಹೊರಟು ನಗರದ ಹಳೇ ಅಂಚೆ ಕಚೇರಿ ರಸ್ತೆಯ ಮೂಲಕ ಸಾಲಗಾಮೆ ರಸ್ತೆ, ಸೀತರಾಮಾಂಜನೇಯ ಸ್ವಾಮಿ ದೇವಾಲಯ ರಸ್ತೆ, ಬಸಟ್ಟಿಕೊಟ್ಟಲು ಮೂಲಕ ಶಂಕರಮಠ ರಸ್ತೆಯ ಮೂಲಕ ಜಿಲ್ಲಾ ಮಹಿಳಾ ಮತ್ತು ಕಲ್ಯಾಣ ಇಲಾಖೆಗೆ ತೆರಳಿ ಅಲ್ಲಿ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಮಹಿಳಾ ಮತ್ತು ಕಲ್ಯಾಣ ಇಲಾಖೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಿಂದ ನಾನಾ ರಾಜಕೀಯ ಪಕ್ಷಗಳ, ಪಕ್ಷೇತರ ಹಾಗೂ ಬಂಡಾಯ ಅಭ್ಯರ್ಥಿಗಳು ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ವ್ಯವಸ್ಥೆ ಮಾಡಲಾಗಿತ್ತು.ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್.ಕೆ.ಮಹೇಶ್ ಮೊದಲನೆಯವರಾಗಿ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ.ಮಹೇಶ್ ಅವರು ಪಕ್ಷದ ಮುಖಂಡ ಎಸ್.ಎಂ.ಆನಂದ್, ಡಾ.ನಾಗರಾಜು, ಡಾ.ಲೋಕೇಶ್, ಆಡುವಳ್ಳಿ ರವಿ, ನಗರಸಭೆ ಸದಸ್ಯ ಆರಿಫ್ಖಾನ್, ಯಶ್ವಂತ್, ಬಾಬಿ ಸೇರಿದಂತೆ ಸಾವಿರಾರು ಸಂಖ್ಯೆಯ ಕಾರ್ಯಕರ್ತರೊಂದಿಗೆ ನಗರದಲ್ಲಿ ಮೆರವಣಿಗೆ ನಡೆಸಿ ದಾರಿ ಉದ್ದಕ್ಕೂ ಮೈಕ್ ಮೂಲಕ ಮತದಾರರರಲ್ಲಿ ತಮಗೆ ಮತ ನೀಡುವಂತೆ ಮನವಿ ಮಾಡಿದರು. ನಾಮಪತ್ರ ಸಲ್ಲಿಸಲು ಚುನಾವಣೆ ಕಚೇರಿಗೆ ತೆರಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಎಚ್.ಕೆ.ಮಹೇಶ್, ತಾವು ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಈ ಕ್ಷೇತ್ರದ ಅಭಿವೃದ್ಧಿಗೆ ತಮಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.
ಜೆಡಿಎ ಸ್ನ ಎಚ್.ಎಸ್.ಪ್ರಕಾಶ್ ಸಲ್ಲಿಸಲಿಲ್ಲ: ಜಿಲ್ಲೆಯ ಬೇಲೂರು ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಸಮಯ ನಿಗದಿ ಪಡಿಸಲಾಗಿತ್ತು. ಅದರಂತೆ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಎಚ್.ಡಿ.ರೇವಣ್ಣ, ಹಾಸನ ಕ್ಷೇತ್ರದಿಂದ ಎಚ್.ಎಸ್.ಪ್ರಕಾಶ್, ಸಕಲೇಶಪುರ-ಆಲೂರು-ಕಟ್ಟಾಯ ಕ್ಷೇತ್ರದಿಂದ ಎಚ್.ಕೆ.ಕುಮಾರಸ್ವಾಮಿ, ಚನ್ನರಾಯಪಟ್ಟಣ ಶ್ರವಣಬೆಳಗೊಳ ಕ್ಷೇತ್ರದಿಂದ ಸಿ.ಎನ್.ಬಾಲಕೃಷ್ಣ ಸೇರಿದಂತೆ ಇತರೆ ಕ್ಷೇತ್ರಗಳಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಸೂಚಿಸಲಾಗಿತ್ತು.
ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಎಚ್.ಎಸ್.ಪ್ರಕಾಶ್ ನಾಮಪತ್ರ ಸಲ್ಲಿಸಲು ಉತ್ಸುಕರಾಗಿದ್ದರು. ಅದಕ್ಕಾಗಿ ಬೆಳಗ್ಗೆ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ಶ್ರೀರಂಗನಾಥಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ ಅಲ್ಲಿಂದ ನೇರವಾಗಿ ನಾಮಪತ್ರ ಸಲ್ಲಿಸಲು ಚುನಾವಣಾ ಕಚೇರಿಗೆ ತೆರಳಲು ತೀರ್ಮಾನಿಸಿದ್ದರು. ಅದರಂತೆ ಅವರ ಅಭಿಮಾನಿಗಳು, ಕಾರ್ಯಕರ್ತರು ನಗರದಲ್ಲಿ ಅವರನ್ನು ಸ್ವಾಗತಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಆದರೆ ವಿನಾಕಾರಣ ಪ್ರಕಾಶ್ ಸೋಮವಾರ ನಾಮಪತ್ರ ಸಲ್ಲಿಸಲು ಸಾಧ್ಯವಾಗಲಿಲ್ಲ. ಇದರಿಂದ ನೆರೆದಿದ್ದ ಕಾರ್ಯರ್ಕತರಿಗೆ ನಿರಾಸೆ ಉಂಟಾಯಿತು. ಸೋಮವಾರ ಸಲ್ಲಿಸಬೇಕಾದ ನಾಮಪತ್ರವನ್ನು ಅವರು ಬುಧವಾರ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ನಾಮಪತ್ರ ಸಲ್ಲಿಕೆ ಪ್ರಾರಂಭ
ಏ.10ದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಕಾರ್ಯ ಆರಂಭವಾಗಿದೆ. ನಾಮಪತ್ರ ಸಲ್ಲಿಸಲು ಏ.17 ಬುಧವಾರ ಮಧ್ಯಾಹ್ನ 3 ಗಂಟೆವರೆಗೆ ಅವಕಾಶವಿದೆ. ನಾಮಪತ್ರಗಳ ಪರಿಶೀಲನೆ ಏ.18 ಬೆಳಿಗ್ಗೆ 10ರಿಂದ ಮ. 3ರವರೆಗೆ ನಡೆಯಲಿದೆ. ನಾಮಪತ್ರ ಹಿಂದೆಗೆಯಲು ಏ.20 ಮ. 3ರವರೆಗೆ ಅವಕಾಶವಿದೆ. ಮತದಾನ ಮೇ.5 ರಂದು ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ನಡೆಯಲಿದ್ದು, ಎಣಿಕೆಯು ಮೇ.8ರಂದು ಬೆಳಗ್ಗೆ 8ಕ್ಕೆ ಪ್ರಾರಂಭವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

