ಶಿಥಿಲಾವಸ್ಥೆಯಲ್ಲಿ ಕೋಟೆ ಮಹಾದ್ವಾರ
ಕನ್ನಡಪ್ರಭ ವಾರ್ತೆ ಹಾರನಹಳ್ಳಿ ಏ.16
ಹಾರನಹಳ್ಳಿ ಗ್ರಾಮದಲ್ಲಿರುವ ಹೊಯ್ಸಳರ ಕಾಲದ ಕೋಟೆಯ ಬೃಹತ್ ದ್ವಾರಗಳು ಸಂಪೂರ್ಣ ಶಿಥಿಲಾವಸೆ ತಲುಪಿವೆ. ಹೊಯ್ಸಳರ ಕಾಲದಲ್ಲಿ ನಿರ್ಮಿತ ಈ ಕೋಟೆಯ ಕಲ್ಲುಗಳು ಬೀಳತೊಡಗಿವೆ.
ಈ ದ್ವಾರದ ಮೂಲಕವೇ ಸಾರ್ವಜನಿಕರು, ಗ್ರಾಮಸ್ಥರು ಓಡಾಡುವುದರಿಂದ ಕೋಟೆಯ ಕಲ್ಲುಗಳು ಯಾರ ಮೇಲಾದರೂ ಬಿದ್ದು ಪ್ರಾಣಾಪಾಯ ಆಗುವ ಮೊದಲು ಪ್ರಾಚ್ಯವಸ್ತು ಇಲಾಖೆ ಎಚ್ಚೆತ್ತು ಕೊಳ್ಳಬೇಕಾಗಿದೆ.
ಕೋಟೆಯ ಹೆಬ್ಬಾಗಿಲು ಸಮೀಪವಿರುವ ದೇವರಾಜು ಎಂಬುವರು ಹೇಳುವಂತೆ ಊರಿನಲ್ಲಿ ಪುರಾತನ ಎರಡು ಕೋಟೆಯ ಹೆಬ್ಬಾಗಿಲುಗಳು ಮಾತ್ರ ಉಳಿದಿದ್ದು, ಇವು ಗ್ರಾಮಕ್ಕೆ ಕಳಶಪ್ರಾಯವಾಗಿದ್ದು, ಪುರಾತನ ಪರಂಪರೆಯನ್ನು ಬಿಂಬಿಸುವ ಕೋಟೆಯ ದ್ವಾರಗಳು ಇಂದು ತೀವ್ರ ಶಿಥಿಲಾವಸ್ಥೆ ತಲುಪಿವೆ. ಈ ಹಿಂದೆ ಗ್ರಾಮಸ್ಥರು, ನಿರ್ದೇಶಕರು ಪ್ರಾಚ್ಯವಸ್ತು ಇಲಾಖೆ ಮೈಸೂರು ಇವರಿಗೆ ಕೋಟೆಯ ಸಂರಕ್ಷಣೆಯ ಬಗ್ಗೆ ಪತ್ರ ಬರೆದಿದ್ದು ಹಾಸನದ ಪ್ರಾಚ್ಯವಸ್ತು ಇಲಾಖೆಯ ಮ್ಯೂಸಿಯಂ ಕ್ಯುರೇಟರ್ ಪರಿಶೀಲಿಸಿ ಕೋಟೆ ಸಂರಕ್ಷಣೆ ಮಾಡುವಂತೆ ಇಲಾಖೆಗೆ ವರದಿ ನೀಡಿದ್ದರೂ ಇಲ್ಲಿಯವರೆಗೆ ಇಲಾಖೆ ಅಧಿಕಾರಿಗಳು ಗಮನ ಹರಿಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಾತನ ಕಾಲದ ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಉಳಿಸುವಂತಹ ಕೆಲಸವನ್ನು ಪ್ರಾಚ್ಯವಸ್ತು ಇಲಾಖೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೋಟೆಯ ಸಂರಕ್ಷಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

