ಸುದ್ದಿ ಸಂಕ್ಷೇಪ
ಇಂದು ಆರೋಗ್ಯ ತಪಾಸಣಾ ಶಿಬಿರ
ಹಾಸನ: ನಗರದ ರಾಜೀವ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳ ವಿಶೇಷ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಏ.17ರಂದು ಮೈಸೂರಿನ ಏಷ್ಯಾ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಲಾಗಿದೆ.
ಶಿಬಿರದಲ್ಲಿ ಮೂತ್ರಪಿಂಡ ತಜ್ಞ ಡಾ.ಎಂ.ಜಿ.ಅರುಣ್, ಶ್ವಾಸಕೋಶ ತಜ್ಞ ಡಾ.ಜಯಕುಮಾರ್ ಭಾಗವಹಿಸಲಿದ್ದಾರೆ. ಶಿಬಿರ ಏ.17 ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ. ಅಸ್ತಮಾ, ಉಸಿರಾಟದ ತೊಂದರೆ, ಬಹಳ ದಿನದ ಕೆಮ್ಮು, ಶೀತ, ಉರಿಮೂತ್ರ, ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಬಳುತ್ತಿರುವವರು ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು. ಮಾಹಿತಿ ಹಾಗೂ ನೋಂದಣಿಗಾಗಿ ದೂ. 08172-267550, 266260 ಸಂಪರ್ಕಿಸಲು ಕೋರಲಾಗಿದೆ.
ಒಕ್ಕಲಿಗ ಹಿತರಕ್ಷಣಾ ಮುಖಂಡರ ಸಭೆ
ಹೊಳೆನರಸೀಪುರ: ಯುಗಾದಿ ಹಬ್ಬದಂದು ತಾಲೂಕಿನ ಬಿದಿರಕ್ಕ ಗ್ರಾಮದ ಉತ್ಸವದಲ್ಲಿ ದಲಿತರು ಮತ್ತು ಸವರ್ಣೀಯರ ನಡುವೆ ನಡೆದ ಘರ್ಷಣೆ ಹಿನ್ನೆಲೆಯಲ್ಲಿ ಜಿಲ್ಲಾ ಒಕ್ಕಲಿಗ ಹಿತರಕ್ಷಣೆ ಮುಖಂಡರು ಸಭೆ ನಡೆಸಿ ಸಾಧಕ ಭಾದಕಗಳ ಬಗ್ಗೆ ಅವಲೋಕನ ನಡೆಸಿದರು.
ಯುಗಾದಿ ಹಬ್ಬದ ದಿನ ಸಂಜೆ ದೇವರ ಉತ್ಸವ ತರುವಾಗ ದೇವರ ಉತ್ಸವಕ್ಕೆ ದಲಿತರಿಂದ ಅಡ್ಡಿಯುಂಟಾಯಿತೆಂದು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕೆಲ ಸವರ್ಣೀಯರ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಗ್ರಾಮಾಂತರ ಠಾಣೆ ಮುಂದೆ ಧರಣಿ ನಡೆಸಿತ್ತು.
ಘಟನೆಗೆ ಕಾರಣರಾದವರ ಮೇಲೆ ಪೊಲೀಸರು ಕ್ರಮಕೈಗೊಂಡಿದ್ದರು. ಜಿಲ್ಲಾ ಒಕ್ಕಲಿಗರ ಹಿತರಕ್ಷಣಾ ವೇದಿಕೆ ಮುಖಂಡರು ಗ್ರಾಮಕ್ಕೆ ಭೇಟಿ ನೀಡಿ ದಲಿತ ಮುಖಂಡರೊಡನೆ ಚರ್ಚಿಸಿದರು.
ಎರಡು ಕಡೆಯ ಮುಖಂಡರು ದೂರು ನೀಡಿ ಮೊಕದ್ದಮೆ ದಾಖಲು ಮಾಡಿರುವುದರಿಂದ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಾದ ನಂತರ ಗ್ರಾಮದಲ್ಲಿ ಸಭೆ ಸೇರಿ ಒಮ್ಮತದ ತಿರ್ಮಾನ ಕೈಗೊಳ್ಳುವುದು ಸೂಕ್ತವೆಂದು ತೀರ್ಮಾನಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

