ಸುದ್ದಿ ಸಂಕ್ಷೇಪ
ಅರಸೀಕೆರೆ: ಆರು ನಾಮಪತ್ರ ಹಿಂದಕ್ಕೆ
ಅರಸೀಕೆರೆ: ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಶನಿವಾರ ಒಟ್ಟು 6 ಮಂದಿ ತಮ್ಮ ನಾಮಪತ್ರ ಹಿಂಪಡೆದಿದ್ದರಿಂದ 11 ಮಂದಿ ಕಣದಲ್ಲಿ ಉಳಿದಂತಾಗಿದೆ. ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ವಕೀಲ ಎನ್.ಎಂ.ಚಂದ್ರಶೇಖರ್ ಹಾಗೂ ದೇವರಾಜೇಗೌಡ, ವೈ.ಎಂ.ಬಾಲಚಂದ್ರ, ವೆಂಕಟೇಶ್, ನಾಗತಿಹಳ್ಳಿ ಸಂಜಯ್ ತಮ್ಮ ನಾಮಪತ್ರ ವಾಪಸ್ ಪಡೆದರೆ ಲಲಿತಾ ಜಯಣ್ಣ ಶುಕ್ರವಾರವೇ ಉಮೇದುವಾರಿಕೆ ಹಿಂಪಡೆದಿದ್ದರು. ಇದೀಗ ಕಣದಲ್ಲಿ ಜೆಡಿಎಸ್ ನಿಂದ ಕೆ.ಎಂ.ಶಿವಲಿಂಗೇಗೌಡ, ಕಾಂಗ್ರೆಸ್ ನಿಂದ ಬಿ ಶಿವರಾಂ, ಕೆಜೆಪಿಯಿಂದ ಡಾ.ಲೋಕೇಶ್, ಬಿಜೆಪಿಯಿಂದ ಡಿ.ಬಿ.ಗಂಗಾಧರ್, ಬಿಎಸ್ ಆರ್ ಕಾಂಗ್ರೆಸ್ ನಿಂದ ಜೆ.ಪಿ.ಜಯಣ್ಣ, ಬಿಎಸ್ಪಿಯಿಂದ ಚಂದ್ರಶೇಖರಯ್ಯ, ಸಂಯುಕ್ತ ಜನತಾದಳದಿಂದ ಒಕ್ಕಲಿಗ ಸಮಾಜದ ಮುಖಂಡ ಬೋರೆಹಳ್ಳಿ ಸೋಮಶೇಖರ್, ಹಾಗೂ ಎಜೆಪಿಯಿಂದ ಕುಮಾರಸ್ವಾಮಿ, ಪಕ್ಷೇತರ ಅಭ್ಯರ್ಥಿಗಳಾದ ರಾಜೇಂದ್ರಕುಮಾರ್, ಗಂಗಾಧರ್ ಸೇರಿದಂತೆ ಒಟ್ಟು 11 ಮಂದಿ ಕಣದಲ್ಲಿ ಉಳಿದಿದ್ದಾರೆ.
ಇಂದು ಜಿಲ್ಲೆಯಲ್ಲಿ ಗೌಡರ ಪ್ರಚಾರ
ಹಾಸನ: ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಏ.21 ರಂದು ಜಿಲ್ಲೆಯ ಹಲವೆಡೆ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಬೆಳಗ್ಗೆ 10.30ಕ್ಕೆ ಹಾಸನ ತಾಲೂಕಿನ ಶಾಂತಿಗ್ರಾಮ, 11.30ಕ್ಕೆ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಕತ್ತರಿಘಟ್ಟ ಗೇಟ್, ಮಧ್ಯಾಹ್ನ 12.30ಕ್ಕೆ ಬಾಗೂರು, 1.30ಕ್ಕೆ ನುಗ್ಗೇಹಳ್ಳಿ, 2.30ಕ್ಕೆ ಹಿರೀಸಾವೆಯಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಜೆಡಿಎಲ್ ಪಿ ನಾಯಕ ಎಚ್.ಡಿ.ರೇವಣ್ಣ, ಮುಖಂಡ ಪಟೇಲ್ ಶಿವರಾಂ, ಬಿ.ವಿ.ಕರಿಗೌಡ, ಕೆ.ಎಂ.ರಾಜೇಗೌಡ, ಜಿಪಂ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಉಪಾಧ್ಯಕ್ಷ ಬಿಳಿಚೌಡಯ್ಯ, ಜಿಪಂ, ತಾಪಂ, ಗ್ರಾಪಂ ಅಧ್ಯಕ್ಷ, ಸದಸ್ಯರು, ಚುನಾಯಿತ ಪ್ರತಿನಿಧಿಗಳು ಭಾಗವಹಿಸುವರು.
ಮೇ 5ರಂದು ಸಂತೆ ರದ್ದು
ಹಾಸನ: ಮೇ 5ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಶಾಂತಿಯುತವಾಗಿ ನಡೆಸುವ ಸಲುವಾಗಿ ಅಂದು ಜಿಲ್ಲೆಯಲ್ಲಿ ನಡೆಯಬೇಕಿದ್ದ ಸಂತೆಗಳನ್ನು ರದ್ದುಪಡಿಸಲಾಗಿದೆ. ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ, ಕಾರೇಹಳ್ಳಿ, ಅಕ್ಕನಹಳ್ಳಿ ಕ್ರಾಸ್, ಅರಸೀಕೆರೆ ತಾಲೂಕಿನ ಜಾವಗಲ್, ಕಲ್ಲುಸಾದರಹಳ್ಳಿ, ಬೇಲೂರು ತಾಲೂಕಿನ ಹನಿಕೆ, ಹೊಳೆನರಸೀಪುರ ತಾಲೂಕಿನ ಹಡವನಹಳ್ಳಿ, ಹಾಸನ ತಾಲೂಕಿನ ಗೊರೂರು, ಸಾಲಗಾಮೆಯಲ್ಲಿ ನಡೆಯುವ ಸಂತೆಯನ್ನು ರದ್ದುಗೊಳಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ, ಸಹಾಯಕ ಜಿಲ್ಲಾ ಚುನಾವಣಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

