ಹಾಸನ

ಕಾಲೇಜಿನ ವಾರ್ಷಿಕ ಸಂಚಿಕೆ ಶೃಂಗ ಬಿಡುಗಡೆ

Published On :

ಹಾಸನ: ಭ್ರಷ್ಟ ಸಮಾಜವನ್ನು ನಿರ್ಮೂಲನ ಮಾಡಬೇಕಾದರೆ, ವಿದ್ಯಾರ್ಥಿಗಳು ಜ್ಞಾನಾರ್ಜನೆ ಜೊತೆಯಲ್ಲಿ ಸಮಾಜದ ಬಗ್ಗೆ ಸ್ಪಂದಿಸುವ ಮನಸ್ಸು ಬೆಳೆಸಿಕೊಳ್ಳಬೇಕು ಎಂದು ಜನಪದ ವಿದ್ವಾಂಸ ಡಾ. ಚಂದ್ರು ಕಾಳೇನಹಳ್ಳಿ  ತಿಳಿಸಿದರು. ನಗರದ ಎನ್ಡಿಆರ್ಕೆ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ವಾರ್ಷಿಕ ಸಂಚಿಕೆ ಶೃಂಗವನ್ನು ಬಿಡುಗಡೆ  ಮಾಡಿ ಮಾತನಾಡಿದ ಅವರು, ಜೀವಾನುಭವ ದೊಡ್ಡದು. ಜಗತ್ತೆಂಬ ಶಾಲೆಯಲ್ಲಿ ಬದುಕು ಕಲಿತುಕೊಳ್ಳಬೇಕು. ಉನ್ನತ ಶಿಕ್ಷಣ ಪಡೆದ ಒಬ್ಬ ವ್ಯಕ್ತಿ ಜೀವನಾನುಭವ ಪಡೆದ ಒಬ್ಬ ಸಾಮಾನ್ಯನ ಹಾಗೆ, ಬದುಕನ್ನು ರೂಪಿಸಿಕೊಳ್ಳುವಲ್ಲಿ ವಿಫಲನಾಗುತ್ತಿದ್ದಾನೆ. ಏಕೆಂದರೆ, ಕಾಲ ಬದಲಾದ ಹಾಗೆ ಶಿಕ್ಷಣ ವ್ಯಾಪಾರೀಕರಣವಾಗುತ್ತಿದೆ ಎಂದರು.ಬಿಸಿಕೆಎಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ಪಿ. ವಿಜಯಕುಮಾರ್, ಪ್ರೊ. ಕೆ. ಶಾಮಭಟ್ ಮಾತನಾಡಿದರು.  ಸಂಚಿಕೆ ಸಂಪಾದಕ ಡಾ. ನೀಲಕಂಠ ಮನ್ವಾಚಾರ್ ಮತ್ತು ಸಂಪಾದಕ ಮಂಡಳಿ ಸದಸ್ಯರು, ಅಧ್ಯಾಪಕರು, ವಿದ್ಯಾರ್ಥಿಗಳು, ಬಾಲಾಜಿ ಪ್ರಿಂಟರ್ಸ್ ಮಾಲಿಕ ಪಾಂಡುರಂಗ ಸ್ವಾಮಿ ಉಪಸ್ಥಿತರಿದ್ದರು. ಪೂರ್ಣಿಮ ಪ್ರಾರ್ಥಿಸಿದರು. ಕೆ.ಯು. ಬಸಪ್ಪ, ಸ್ವಾಗತಿಸಿದರು. ಎ.ಜಿ. ಶಾಂತೇಗೌಡ ವಂದಿಸಿದರು. ಡಿ.ಎಸ್. ವೀಣಾ ನಿರೂಪಿಸಿದರು.


ತಾಳೂರು ಸರ್ಕಾರಿ ಶಾಲೆಯಲ್ಲಿ ಮಕ್ಕಳ ಬ್ಯಾಂಕ್ ಉದ್ಘಾಟನೆ
ಆಲೂರು:  ಉಳಿತಾಯ ಮನೋಭಾವನೆ ಚಿಕ್ಕಂದಿನಿಂದಲೇ ಬೆಳೆಯಬೇಕು. ಹಾಗಾದಾಗ ಮಾತ್ರ ಮಕ್ಕಳಿಗೆ ಸ್ಪಷ್ಟ ವ್ಯವಹಾರ ಜ್ಞಾನ ದೊರೆಯಲು ಸಹಕಾರಿಯಾಗುತ್ತದೆ. ಆದ್ದರಿಂದ ಬ್ಯಾಂಕ್ಗಳು ಪ್ರತಿ ಶಾಲೆಗೆ ಅತ್ಯಗತ್ಯ ಎಂದು ಮಂಜುನಾಥಾಚಾರ್ಯ ಹೇಳಿದರು.
  ಅವರು ತಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಹಕರ ಕ್ಲಬ್ನಿಂದ ಪ್ರಾರಂಭವಾದ ಶಾಲಾ ಮಕ್ಕಳ ಬ್ಯಾಂಕ್ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಬ್ಯಾಂಕ್ಗಳು ವ್ಯವಹಾರ ಜ್ಞಾನಾಭಿವೃದ್ಧಿಗೆ ಪೂರಕವಾಗಲಿವೆ ಎಂದರು. ಗ್ರಾಹಕರ ಕ್ಲಬ್ ಅಧ್ಯಕ್ಷೆ ರಕ್ಷಿತಾ, ಶಾಲಾ ಮುಖ್ಯಸ್ಥ ಪರಾಶರಮೂರ್ತಿ, ಸಹ ಶಿಕ್ಷಕ ಕೊಟ್ರೇಶ್ ಎಸ್. ಉಪ್ಪಾರ್, ದೀಪಿಕ, ಶಿಕ್ಷಣ ಮಂತ್ರಿ ರಮೇಶ್, ಸಹಶಿಕ್ಷಕ ನಿಂಗರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.