ಹಾಸನ

ರಾಷ್ಟ್ರ ಮಟ್ಟದ ಪ್ರಶಸ್ತಿಗಾಗಿ ಅರ್ಜಿ

Published On :

ಹಾಸನ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅಂಗವಿಕಲರ ಕಲ್ಯಾಣಕ್ಕಾಗಿ ವಿಶೇಷ ಸೇವೆ ಸಲ್ಲಿಸಿದವರಿಗೆ ರಾಷ್ಟ್ರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದೆ.
 ವಿಕಲಚೇತನತೆ ಹೊಂದಿದ ಶೇಷ್ಠ ನೌಕರರು (ಸ್ವಯಂ ಉದ್ಯೋಗಿಗಳು ಸೇರಿ), ವಿಕಲಚೇತನತೆ ಹೊಂದಿದ ವ್ಯಕ್ತಿಗಳ ಶ್ರೇಷ್ಠ ಉದ್ಯೋಗದಾತರು ಮತ್ತು ಉದ್ಯೋಗ ನೀಡಿಕೆ ಅಧಿಕಾರಿ, ಏಜೆನ್ಸಿ (ಸರ್ಕಾರಿ ನೌಕರರು ಮತ್ತು ಪಿಎಸ್ಯು ಎರಡೂ ಸೇರಿ), ವಿಕಲಚೇತನತೆ ಹೊಂದಿದ ವ್ಯಕ್ತಿಗಳಿಗಾಗಿ ಕೆಲಸ ಮಾಡುತ್ತಿರುವ ಶ್ರೇಷ್ಠ ವ್ಯಕ್ತಿ ಮತ್ತು ಸಂಸ್ಥೆ, ರೋಲಮಾಡಲ್,  ವಿಕಲಚೇತನತೆಗೆ ಪರಿಹಾರ ಒದಗಿಸಲು ಅತ್ಯುತ್ತಮ ತಂತ್ರಜ್ಞಾನ ನಾವೀನ್ಯತೆ ಮತ್ತು ಉಳಿತಾಯ ತಂತ್ರಜ್ಞತೆ ಒದಗಿಸಲು ನಾವಿನ್ಯತೆ ಅಳವಡಿಕೆ.
 ವಿಕಲಚೇತನತೆಯುಳ್ಳ ಪ್ರತಿಭಾವಂತ ರಚನಾತ್ಮಕ ವ್ಯಕ್ತಿ, ವಿಕಲಚೇತನತೆ ಹೊಂದಿದ ಜನರಿಗಾಗಿ ಆಡಚಣೆ ರಹಿತ ಪರಿಸರ ರೂಪಿಸುವಿಕೆಯಲ್ಲಿನ ಪ್ರತಿಭಾವಂತ ಕಾರ್ಯ, ಪುನರ್ವಸತಿ ಸೇವೆ ಒದಗಿಸುವಲ್ಲಿನ ಕಾರ್ಯದಲ್ಲಿ ಶ್ರೇಷ್ಠ ಸಾಧನೆ ಮಾಡಿರುವ ಜಿಲ್ಲೆ, ರಾಷ್ಟ್ರೀಯ ದತ್ತಿಯ ಶ್ರೇಷ್ಠ ಸ್ಥಳೀಯ ಮಟ್ಟದ ಸಮಿತಿ, ವಿಕಲ ಚೇತನತೆಯುಳ್ಳ ಪ್ರತಿಭಾವಂತ ರಚನಾತ್ಮಕ ವಯಸ್ಕ ಅರ್ಜಿ ಸಲ್ಲಿಸಬಹುದು. ವೆಬ್ಸೈಟ್ (ಇಜಡಡಿ ಆ್ಛ್ಛಜಡಡಛಛಿಟಜ ಗಿಜಛಿಡ್ಝಡಿಜ)  ಅರ್ಜಿ ನಮೂನೆಗಳನ್ನು ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ನೆಲಮಹಡಿ, ಪೋಡಿಯಂ ಬ್ಲಾಕ್, ವಿ.ವಿ. ಕೇಂದ್ರ, ಡಾ. ಅಂಬೇಡ್ಕರ್ ಬೀದಿ, ಬೆಂಗಳೂರು - 1 ಅಥವಾ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ಉಪ ನಿರ್ದೇಶಕರ ಕಚೇರಿ, ಅಥವಾ ಡಿಡಿಠಣಣಣಡ್ಟ್ಛ್ಝಛಟ ಞ್ಡಡಡ್ಝ್ಛಿಜ.ಟ್ಝ್ಛಿ.್ಝಟಿ ವೆಬ್ಸೈಟ್ನಿಂದ ಅರ್ಜಿ ಪಡೆಯಬಹುದು.   ಭರ್ತಿ ಮಾಡಿದ ಅರ್ಜಿಗಳನ್ನು ಸಂಬಂಧಿಸಿದ ಜಿಲ್ಲೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ಉಪ ನಿರ್ದ್ದೇಶಕರ ಕಚೇರಿ, ಮಹಿಳಾ ಅಭಿವೃದ್ಧಿ ಇಲಾಖಾ ಕಚೇರಿಗೆ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆಗಸ್ಟ್ 15 ಕೊನೆ ದಿನ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.