ಸುದ್ದಿ ಸಂಕ್ಷೇಪ
ರಸ್ತೆ ಅಪಘಾತ: ಗ್ರಾಪಂ ಸದಸ್ಯೆ ಪತಿ ಸಾವು
ಅರಸೀಕೆರೆ: ಇತ್ತೀಚಿಗಷ್ಟೇ ಬಸ್ -ಕಾರು ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಐವರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಅದೇ ಜಾಗದಲ್ಲಿ, ಮುಂದೆ ಹೋಗುತ್ತಿದ್ದ ಮೋಟಾರು ಬೈಕನ್ನು ಹಿಂದೆ ಹಾಕುವ ಭರದಲ್ಲಿ ಕ್ವಾಲಿಸ್ ಕಾರ್ ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಬೆಂಡೇಕೆರೆ ಸಮೀಪ ಶುಕ್ರವಾರ ಸಂಭವಿಸಿದೆ. ಚಲುವನಹಳ್ಳಿ ಗೊಲ್ಲರಹಟ್ಟಿಯ ನಿವಾಸಿ ಹಾಗೂ ಹಿರಿಯೂರು ಗ್ರಾಮ ಪಂಚಾಯ್ತಿ ಸದಸ್ಯೆ ಯಶೋಧಮ್ಮ ಅವರ ಪತಿ ವೆಂಕಟೇಶ್ (45) ಮೃತಪಟ್ಟವರು. ಈತ ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ ಅವರೊಂದಿಗೆ ಮಾತನಾಡಿ ಅರಸೀಕೆರೆಗೆ ವಾಪಸ್ ಮೋಟಾರು ಬೈಕಿನಲ್ಲಿ ಬರುತ್ತಿದ್ದಾಗ ಹಿಂಬದಿಯಿಂದ ಬರುತ್ತಿದ್ದ ಕ್ವಾಲಿಸ್ ಕಾರನ್ನು ಹಿಂದೆ ಹಾಕುವ ಸಮಯದಲ್ಲಿ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಷ್ಟ್ರೀಯ ಹೆದ್ದಾರಿ 206ರ ಅರಸೀಕೆರೆ-ಬಾಣಾವರ ರಸ್ತೆ ಮಧ್ಯೆದಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು ಪ್ರತಿನಿತ್ಯ ಅವಘಢಕ್ಕೆ ಕಾರಣವಾಗಿದೆ. ಕಿರುದಾದ ರಸ್ತೆ ಅಗಲೀಕರಣವಾಗದೆ ಸಂಚಾರದ ದಟ್ಟಣೆ ಹೆಚ್ಚಾಗಿರುವುದರಿಂದ ಇಂತಹ ಅವಘಡಗಳು ಮರುಕಳಿಸುತ್ತಿವೆ. ಇದಕ್ಕೆ ಸಂಬಂಧಪಟ್ಟವರು ಕೂಡಲೇ ಗಮನ ಹರಿಸಿ ಅವಘಡ ನಡೆಯದಂತೆ ಸರಿಯಾದ ರೀತಿಯಲ್ಲಿ ರಸ್ತೆ ಸಂಚಾರ ವ್ಯವಸ್ಥೆಗೆ ಅನುಕೂಲ ಮಾಡಿಕೊಡಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ದಯಾನಂದ್ಗೆ ಶ್ರದ್ಧಾಂಜಲಿ
ಸಕಲೇಶಪುರ: ತಮ್ಮನಿಂದಲೇ ಭೀಕರವಾಗಿ ಕೊಲೆಯಾದ ತಾಲೂಕಿನ ಭಾರತೀಯ ಜನತಾ ಪಕ್ಷದ ಮುಖಂಡ ಕೆಸಗಾನಗಳ್ಳಿ ದಯಾನಂದ್ ಅವರಿಗೆ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷ ಕ್ಯಾಮನಹಳ್ಳಿ ರಾಜ್ಕುಮಾರ್ ಮಾತನಾಡಿ, ನೇರನುಡಿಯ ದಯಾನಂದ್ ಅವರನ್ನು ಪಕ್ಷದ ಕಳೆದು ಕೊಂಡಿರುವುದು ತುಂಬಲಾರದ ನಷ್ಟ ಎಂದರು. ಪ್ರಧಾನ ಕಾರ್ಯದರ್ಶಿ ಹೆಬ್ಬನಹಳ್ಳಿ ಸಂದೇಶ್, ದಯಾನಂದ್, ಪಚ್ಚಿ ಇತರರು ಇದ್ದರು.
ಹಿಟಾಚಿಯಿಂದ ಹೂಳು ತೆಗೆದ ರೈತರು
ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ.): ಸಮೀಪದ ನವಿಲೆ ಏತನೀರಾವರಿಯ ಕಾಮನಾಯಕನಹಳ್ಳಿಯ ಎಡದಂಡೆ ಕಾಲುವೆಯಿಂದ ಸಂತೆಶಿವರ ಯಾಚನಘಟ್ಟ ಚಿಕೋನಹಳ್ಳಿಯ ರಾಂಪುರ ಕೆರೆಗಳಿಗೆ ನೀರು ಬರುತ್ತಿಲ್ಲವೆಂದು ರೈತರೆ ಹಿಟಾಚಿಯಿಂದ ಕಾಲುವೆ ಹೂಳನ್ನು ತೆಗೆಸುತ್ತಿದ್ದಾರೆ. ಸರಾಗವಾಗಿ ನೀರು ಹರಿಯುವಂತೆ ಮಾಡಬೇಕು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಗಂಗೇಗೌಡ ಆಗ್ರಹಿಸಿದರು. ಧನಪಾಲ್, ವಿಜಯ ಕುಮಾರ್, ಧನಂಜಯ, ಗವಿರಂಗಪ್ಪ, ಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

