ಹಾಸನ

ಹಾರನಹಳ್ಳಿ ಕಾಲೇಜಿನಲ್ಲಿ ವನ ಮಹೋತ್ಸವ

Published On :

ಕ.ಪ್ರ. ವಾರ್ತೆ೤ ಹಾರನಹಳ್ಳಿ೤ ಆ. 9
ಸರ್ಕಾರಿ ಕಾಲೇಜು ಹಾಗೂ ಪ್ರೌಢಶಾಲಾ ಸಹಯೋಗದೊಂದಿಗೆ ಸಾಂಸ್ಕೃತಿಕ ಸಂಘದ ಉದ್ಘಾಟನೆ ಹಾಗೂ ಶಾಲಾ ಕಾಲೇಜು ಆವರಣದಲ್ಲಿ ವನಮಹೋತ್ಸವ ನಡೆಯಿತು.
  ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ ಹಾರನಹಳ್ಳಿ ನಾಗೇಂದ್ರ ಮಾತನಾಡಿ, ನಗರ ಪ್ರದೇಶದ ಶಾಲಾ, ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶಗಳು ಸಿಗುತ್ತಿತ್ತು. ಎಲ್ಲಾ ಕ್ಷೇತ್ರದಲ್ಲೂ ನಗರ ಪ್ರದೇಶದ ವಿದ್ಯಾರ್ಥಿಗಳು ಮುಂದೆ ಬರುವ ಕಾಲವಿತ್ತು. ಈಗ ಗ್ರಾಮಾಂತರ ಪ್ರದೇಶದಲ್ಲಿ ಓದಿದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಹೇಳಿದರು.
 ಹಾರನಹಳ್ಳಿ ಪ್ರೌಢಶಾಲಾ, ಕಾಲೇಜಿನಲ್ಲಿ ಉತ್ತಮ ತರಬೇತಿ ಪಡೆದ ಶಿಕ್ಷಕ ಉಪನ್ಯಾಸಕರಿದ್ದು, ಅವರ ಮಾರ್ಗದರ್ಶನದಲ್ಲಿ ಹಾರನಹಳ್ಳಿ ಪ್ರೌಢಶಾಲಾ ಹಾಗೂ ಕಾಲೇಜಿಗೆ ಹೆಚ್ಚು ಫಲಿತಾಂಶಗಳು ಬರುತ್ತಿವೆ ಎಂದು
 ಹಿಂದಿ ಶಿಕ್ಷಕ  ಮೋತಿಲಾಲ್‌ನಾಯ್ಕ್ ಹೇಳಿದರು. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸರ್ಕಾರಿ ಪ್ರಾಯೋಜಿತ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯುತ್ತಿದ್ದು ವಿದ್ಯಾರ್ಥಿಗಳ ವಿಕಸನಕ್ಕೆ ದಾರಿಯಾದರೂ ಖಾಸಗಿ ಶಾಲೆಗಳ ಹಾಗೆ ವೈಭವೀಕರಿಸಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಗ್ರಾಮಾಂತರ ಶಾಲಾ ವಿದ್ಯಾರ್ಥ್ಥಿಗಳಿಗೆ ಕಷ್ಟಕರವಾಗಿದೆ. ನಮ್ಮ ಶಾಲಾ ಕಾಲೇಜಿನಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಲಬ್ ರಚನೆ ಮಾಡಿ ವಿದ್ಯಾರ್ಥಿಗಳಿಗೆ ವೇದಿಕೆ ನೀಡಿ ಅವರುವ ಪ್ರತಿಭೆಯನ್ನು ಗುರುತಿಸಲು ಇಂತಹ ಸಂಘಗಳು ಸಹಕಾರಿಯಾಗಲಿವೆ ಎಂದು ನುಡಿದರು.
 ಇತಿಹಾಸ ಉಪನ್ಯಾಸಕ ಲಿಂಗರಾಜು ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ವಿಚಾರಕೊಂಡು ಪರಿಶ್ರಮದಿಂದ ಉತ್ತಮ ಸಾಧನೆ ಮಾಡಬೇಕೆಂದರು. ಪ್ರಾಂಶುಪಾಲ ನಾಮದೇವ್ ಮಾತನಾಡಿ, ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಕ್ರೀಡೆ, ಸಾಂಸ್ಕತಿಕ ಕಾರ್ಯಕ್ರಮ ದಿನಪತ್ರಿಕೆ ಓದುವುದು ಇಂತಹ ಉತ್ತಮ ಹವ್ಯಾಸಗಳನ್ನು ಅಭಿರುಚಿ ಬೆಳೆಸಿಕೊಳ್ಳ ಬೇಕೆಂದರು.
 ಶಾಲಾ ಕಾಲೇಜು ಆವರಣದಲ್ಲಿ ಬರಿ ಸಸಿಗಳನ್ನು ನೆಟ್ಟರೆ ಸಾಲದು ವಿದ್ಯಾರ್ಥಿಗಳು ಬಿಡುವಿನ ಸಂದರ್ಭದಲ್ಲಿ ಪೋಷಣೆ ಮಾಡಿ ಕಾಲೇಜು ಆವರಣವನ್ನು ವನದ ಮಾದರಿಯಲ್ಲಿ ಕಂಗೊಳಿಸುವಂತೆ ಬೆಳೆಸಬೇಕೆಂದರು.
 ಈ ಸಂದರ್ಭದಲ್ಲಿ ಕಳೆದ ವರ್ಷ ದ್ವಿತೀಯ  ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಭೈರೇಶ್, ಸಂತೋಷ್ ಅವರಿಗೆ  ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.  
 ಪ್ರೌಢಶಾಲಾ ಶಿಕ್ಷಕರು, ಕಾಲೇಜು ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಇದ್ದರು. ಕ್ರೀಡಾಕೂಟಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.