ಸಮಗ್ರ ಅಭಿವೃದ್ಧಿಯ ಗುರಿ: ಶಾಸಕ ಎ.ಮಂಜು
ಕ.ಪ್ರ.ವಾರ್ತೆ ಅರಕಲಗೂಡು ಆ.9
ಪತ್ರಿಕೆಯಲ್ಲಿ ಕಳೆದ ಕೆಲವು ದಿನಗಳಿಂದ ಪ್ರಕಟವಾದ ಕ್ಯಾಂಪೇನ್ ಸುದ್ದಿಗೆ ಸಂಬಂಧಿಸಿದಂತೆ ಮುಖಂಡರು ಅಭಿಪ್ರಾಯ ತಿಳಿಸಿದ್ದಾರೆ.
ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ. ತಾಲೂಕಿನ ಅಭಿವೃದ್ಧಿ ಕುರಿತಂತೆ ನಾವು ಹಲವು ಕನಸುಗಳನ್ನು ಹೊತ್ತಿದ್ದು ಅವುಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಪಟ್ಟಣದ ಒಳ ಚರಂಡಿ ವ್ಯವಸ್ಥೆ ಕುರಿತಂತೆ ಈಗಾಗಲೇ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ, ಹಣಕಾಸು ಬಿಡುಗಡೆಯ ಪತ್ರ ವ್ಯವಹಾರ ನಡೆದಿದ್ದು, ಶೀಘ್ರದಲ್ಲೇ ಕಾರ್ಯಾರಂಭ ಆಗಲಿದೆ.ಇತರೆ ಸಮಸ್ಯೆಗಳಿಗೂ ಹಂತಹಂತವಾಗಿ ಪರಿಹಾರ ಕಂಡುಕೊಳ್ಳಲಾಗುವುದು.
- ಎ. ಮಂಜು, ಶಾಸಕ
ಪಟ್ಟಣದ ಯುಜಿಡಿ ಯೋಜನೆಯ ಕಾರ್ಯಾರಂಭಕ್ಕೆ ಸರ್ಕಾರದ ಮಂಜೂರಾತಿಯನ್ನು ನಿರೀಕ್ಷಿಸಲಾಗುತ್ತಿದೆ. ಈ ಸಂಬಂಧ ಸ್ಥಳ ಗುರುತಿಸಲಾಗಿದ್ದು, ಸರ್ಕಾರದ ಮಂಜೂರಾತಿ ನಂತರ ಕೆಲಸ ಆರಂಭಿಸಲಾಗುವುದು.
- ಕವಿತ, ಕಿರಿಯ ಎಂಜಿನಿಯರ್, ಪಟ್ಟಣ ಪಂಚಾಯಿತಿ
ಪಟ್ಟಣ ಸೇರಿದಂತೆ ಹಾಸನದಿಂದ ಕೊಣನೂರಿಗೆ ಹೋಗುವ ರಸ್ತೆಗಳು ಸಂಪೂರ್ಣ ಹಾಳಾಗಿದೆ.ರಸ್ತೆಗಳ ದುರಸ್ಥಿಗಾಗಿ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡುವ ಅಗತ್ಯವಿದೆ.ತಾತ್ಕಾಲಿಕವಾಗಿ ತೇಪೆ ಹಾಕುವ ಕೆಲಸ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ.
-ಭಾಸ್ಕರ್, ಅಧ್ಯಕ್ಷ, ಕರವೇ, ಅರಕಲಗೂಡು ತಾಲೂಕು
ಅರಕಲಗೂಡು ಸರ್ಕಾರಿ ಆಸ್ಪತ್ರೆಗೆ ಕಾಯಕಲ್ಪ ರೂಪಿಸಬೇಕಾದ ಅವಶ್ಯಕತೆ ಇದೆ.ತಾಲೂಕಿನ ದೂರದೂರುಗಳಿಂದ ಬರುವ ರೋಗಿಗಳಿಗೆ ಅಗತ್ಯ ಸೌಲಭ್ಯಗಳು ದೊರಕುವಂತಾಗಬೇಕು ಮತ್ತು ತಾಲೂಕಿನಲ್ಲಿ ತಡೆಗೋಡೆ ಇಲ್ಲದ ಎಲ್ಲಾ ಕೆರೆಗಳಿಗೂ ತಡೆಗೋಡಿ ನಿರ್ಮಿಸುವುದಕ್ಕೆ ಆದ್ಯತೆ ನೀಡಬೇಕು.
ಟಿ ಎನ್.ರವಿಕುಮಾರ್, ಕೆಜೆಪಿ ಮುಖಂಡ
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿರುವ ಜನರೇಟರ್ 15 ಕೆ.ವಿ. ಸಾಮರ್ಥ್ಯದ್ದು. ಅದು ಕೆಟ್ಟು ನಾಲ್ಕು ವರ್ಷಗಳಾಗಿದ್ದು, ಬಳಕೆ ಮಾಡುವ ಸ್ಥಿತಿಯಲ್ಲಿ ಇರಲಿಲ್ಲವಾದ್ದರಿಂದ 30 ಕೆ.ವಿ.ಗೂ ಅಧಿಕ ಸಾಮರ್ಥ್ಯದ ಜನರೇಟರ್ಗಳು ಅಗತ್ಯವಿದ್ದು, ಅವುಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ಅದೇ ರೀತಿ ಕೊಣನೂರು ಆಸ್ಪತ್ರೆಗೂ ಒದಗಿಸುವಂತೆ ಬೇಡಿಕೆ ಸಲ್ಲಿಸಲಾಗಿದೆ. ಇಡೀ ರಾಜ್ಯದ ಆಸ್ಪತ್ರೆಗಳಿಗೆ ಟೆಂಡರ್ ಆಗಿದ್ದು, ಗುತ್ತಿಗೆದಾರರು ಹಂತಹಂತವಾಗಿ ಸರಭರಾಜು ಮಾಡುತ್ತಿದ್ದು, ಶೀಘ್ರದಲ್ಲೇ ಜನರೇಟರ್ ಒದಗಿಸುವ ಸಾಧ್ಯತೆ ಇದೆ. ತಾತ್ಕಾಲಿಕವಾಗಿ ಪ್ರಮುಖ ಸ್ಥಳಗಳಿಗೆ ಯುಪಿಎಸ್ ಅಳವಡಿಸಲಾಗಿದೆ.
ಕುಡಿಯುವ ನೀರಿನ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ಕೊಣನೂರಿನಿಂದ ವೈದ್ಯರನ್ನು ನಿಯೋಜನೆ ಮಾಡಿಲ್ಲ. ಕೇರಳಾಪುರ ಮತ್ತು ದೊಡ್ಡಮಗ್ಗೆಯಿಂದ ಬರುವ ವೈದ್ಯರು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಪತ್ರಿಕೆಗಳಲ್ಲಿ ನೀವು ಈ ರೀತಿ ಬರೆಯಬಾರದು.ಇದರಿಂದ ಇಲ್ಲಿಗೆ ಬರಲು ವೈದ್ಯರು ಹಿಂಜರಿಯುತ್ತಾರೆ. ನಮ್ಮನ್ನು ಕೇಳಿ,ನಾವೇ ವಾಸ್ತವ ಮಾಹಿತಿ ಕೊಡುತ್ತೇವೆ.
-ಡಾ.ಸ್ವಾಮಿಗೌಡ, ತಾಲೂಕು ಆರೋಗ್ಯಾಧಿಕಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

