ಹಾಸನ

ದಿಡಗ ಗ್ರಾಪಂ ಮಟ್ಟದಲ್ಲಿ ಪ್ರಥಮವಾಗಿ ಆಧಾರ್ಕಾರ್ಡ್ಗೆ ಚಾಲನೆ

Published On :

ಹಿರೀಸಾವೆ (ಚನ್ನರಾಯಪಟ್ಟಣ ತಾ.): ಹಿರಿಸಾವೆ ಹೋಬಳಿ ದಿಡಗ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಆಧಾರ್ ಕಾರ್ಡ್ಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಶಾಸಕ ಸಿ.ಎನ್. ಬಾಲಕೃಷ್ಣ ಉದ್ಘಾಟಿಸಿದರು.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ಗ್ರಾಮಪಂಚಾಯ್ತಿ ಮಟ್ಟದಲ್ಲಿಯೇ ಒಂದು ವಿಭಾಗ ಪ್ರಾರಂಬಿಸಿ ಒಂದು ದಿನದಲ್ಲಿ 50 ರಿಂದ 60 ಅರ್ಜಿದಾರರ ಗುರುತಿನ ಪತ್ರಕ್ಕೆ ಭಾವಚಿತ್ರವನ್ನು ತೆಗೆಯುವ ಸಾಧ್ಯತೆ ಇದೆ. ಅದ್ದರಿಂದ ಇನ್ನು 2 ತಿಂಗಳ ಒಳಗೆ ಹೋಬಳಿಯಲ್ಲಿ ಎಲ್ಲರ ಗುರುತಿನ ಪತ್ರದ ಭಾವಚಿತ್ರ ತೆಗೆಯಲಾಗುವುದು ಎಂದು ಶಾಸಕರು ಹೇಳಿದರು.
ನಿವೃತ್ತ ರಾಜಸ್ವನಿರೀಕ್ಷಕ ಹಾಗೂ ತಾಲೂಕು ಆಧಾರ್ಕಾರ್ಡ್ ನೋಡಲ್ ಅಧಿಕಾರಿ ಆರ್.ಐ.ರಾಮಶೆಟ್ಟಿ ಮಾತನಾಡಿ, ಈ ಕಾರ್ಯಕ್ರಮವನ್ನು ಬ್ಲೂಮ್ಸುಲ್ಯುಶನ್ ಟೆಕ್ನಾಲಜಿಸ್ ಹೈದ್ರಾಬಾದ್ ಕಂಪನಿಯವರು ವಹಿಸಿ ಕೊಂಡಿರುತ್ತಾರೆ ಎಂದು ಹೇಳಿದರು.
ಸಾಂಕೇತಿಕವಾಗಿ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷ ಎನ್.ಎನ್. ನಾಗರಾಜು ಅವರಿಗೆ ಆಧಾರ್ಕಾರ್ಡ್ ವಿತರಿಸಲಾಯಿತು. ತಾಪಂ ಪಂಚಾಯಿತಿ ಸದಸ್ಯ ಬಿ. ಪುಟ್ಟರಾಜು, ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಬಿ.ರಘುರಾಮ್, ಸದಸ್ಯರಾದ ರಾಗವೇಂದ್ರ, ಕೆ.ಟಿ.ನಾಗರಾಜು, ನಾಡಕಚೇರಿ ಉಪ ತಹಸೀಲ್ದಾರ್ ಮೋಹನನಕುಮಾರ್, ಆಧಾರ್ಕಾರ್ಡ್ ಕಾರ್ಯಕ್ರಮದ ಸಂಚಾಲಕ ಹುಳ್ಳಾವಳ್ಳಿ ಯೋಗೇಶ, ಎಚ್.ಎನ್. ಶ್ರೀಕಂಠಯ್ಯ, ಗ್ರಾಮ ಲೆಕ್ಕಾಧಿಕಾರಿ ಶಿವಲಿಂಗಯ್ಯ, ಡಿ.ಕೆ.ಶಿವಪ್ಪ ಹಾಗೂ ಗ್ರಾಮ ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.