ನಾಳೆ ದಿಡಗ ದೇಗುಲ ವಿಮಾನಗೋಪುರ ಕಲಶ ಪ್ರತಿಷ್ಠಾಪನೆ
ಹಿರೀಸಾವೆ (ಚನ್ನರಾಯಪಟ್ಟಣ ತಾ.): ಹೋಬಳಿಯ ದಿಡಗ ಹಳೇ ಗ್ರಾಮದಲ್ಲಿ ಶ್ರೀ ಪ್ರಸನ್ನ ಬಾಣೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರ ಹಾಗೂ ವಿಮಾನಗೋಪುರ ಕಲಶ ಮತ್ತು ಹೆಬ್ಬಾಗಿಲು ಶ್ರೀ ಬಸವೇಶ್ವರಸ್ವಾಮಿ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ಆ.12 ರಿಂದ ಆ. 14 ರವರೆಗೆ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಹೋಮ, ಹವನಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಗಮಶಾಸ್ತ್ರ ವಿಶಾರದ, ವೇದರತ್ನ, ಶೃಂಗೇರಿ ಶ್ರೀಮಠ ಮುದ್ರಾದಿಕಾರಿ, ವೇದಬ್ರಹ್ಮ, ಯಜ್ಯ, ಶ್ರೀಕಾಂತಶರ್ಮ ಮುತ್ತೂರು, ಚಿಕ್ಕಬಳ್ಳಾಪುರ ಜಿಲ್ಲೆ ಇವರ ಪ್ರಧಾನಾಚಾರ್ಯತ್ವದಲ್ಲಿ ನೆರವೇರಿಸಲಿದ್ದಾರೆ.
ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದದೊಂದಿಗೆ ಆದಿಚುಂಚನಗಿರಿ ಶಾಖಾ ಮಠದ ಶಿವಕುಮಾರನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ಶಂಭುನಾಥ ಸ್ವಾಮೀಜಿ, ಶಿವಪುತ್ರ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಸಿ.ಎನ್.ಬಾಲಕೃಷ್ಣ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡ ಎಚ್.ಎಸ್. ವಿಜಯಕುಮಾರ್, ಜಿಪಂ ಅಧ್ಯಕ್ಷೆ ಅಂಬಿಕಾರಾಮಕೃಷ್ಣ, ಗೋಪಾಲಸ್ವಾಮಿ ಇತರರು ಭಾಗವಹಿಸುವರು. ಆ.13ರ ಸಂಜೆ ರಂಗಕಲಾ ದಿಗ್ಗಜರಿಂದ ರಂಗ ಸಂಗೀತ ಏರ್ಪಡಿಸಲಾಗಿದೆ. ಆ.14 ರಂದು ಅನ್ನ ಸಂತರ್ಪಣೆ ನಡೆಯುವುದು.
'ಶಾಂತಿ ಕಾಪಾಡುವುದು
ಎಲ್ಲರ ಜವಾಬ್ದಾರಿ'
ಹಾಸನ: ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಕೇವಲ ಆರಕ್ಷಕರ ಕೆಲಸ ಮಾತ್ರವಲ್ಲ ಪ್ರತಿ ಪ್ರಜೆಯೂ ಈ ಕಾರ್ಯದಲ್ಲಿ ಭಾಗಿಯಾಗಬೇಕು. ಆಗ ಮಾತ್ರ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಎಎಸ್ಪಿ ಜೆ.ಕೆ.ರಶ್ಮಿ ಅಭಿಪ್ರಾಯಪಟ್ಟರು.
ನಗರದ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಪೆನ್ಷನ್ ಮೊಹಲ್ಲಾ ಠಾಣೆಯಿಂದ ಆಯೋಜಿಸಿದ್ದ ತೆರೆದ ಮನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೂತನ ಎಸ್ಪಿ ರವಿ.ಡಿ. ಚನ್ನಣ್ಣನವರ್ ನೇತೃತ್ವದಲ್ಲಿ ಶಾಲಾ ಕಾಲೇಜುಗಳಲ್ಲಿ ಅಪರಾಧಗಳ ಬಗ್ಗೆ ಹಾಗೂ ಕಾನೂನಿನ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ತೆರೆದ ಮನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಶ್ನೋತ್ತರ ವೇಳೆಯಲ್ಲಿ ಮೊಬೈಲ್ ಚಿನ್ನ, ಹಣದ ಕಳ್ಳತನ, ವೈದ್ಯರ ಮೇಲೆ ನಡೆಯುವ ಹಲ್ಲೆ, ಹಲ್ಲೆಗೆ ಒಳಗಾದ ರೋಗಿಯ ಚಿಕಿತ್ಸೆ ಸಮಯದಲ್ಲಿ ಇರುವ ಕಾನೂನುಗಳು, ಅತ್ಯಾಚಾರ ಹೀಗೆ ಅನೇಕ ವಿಷಯಗಳ ಕುರಿತಾದ ಸಂದೇಹಗಳಿಗೆ ಅಧಿಕಾರಿಗಳು ಉತ್ತರಿಸಿದರು.
ವೃತ್ತ ನಿರೀಕ್ಷಕ ಸಂಜೀವ್ಗೌಡ ಹಾಗೂ ಎಸ್ಐ ಮೋಹನಮಾರ್ ಸಂವಾದದಲ್ಲಿ ಉತ್ಸಾಹದಿಂದ ಉತ್ತರಿಸಿದರು. ಆಡಳಿತ ವಿಭಾಗದ ಡೀನ್ ಡಾ. ಟಿ ಬಿ ತ್ರಿಪಾಠಿ ಶೈಕ್ಷಣಿಕ ವಿಭಾಗದ ಡೀನ್ ಡಾ.ಕೆ.ಜೆ. ಮಲ್ಲಿಕಾ ಇದ್ದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಡೀನ್ ಡಾ. ಹೇಮಂತ್ಕುಮಾರ್ ಸ್ವಾಗತಿಸಿದರು. ಕು. ಮೇಧಾ ಭಟ್
ಪ್ರಾರ್ಥಿಸಿದರು. ಕು. ಪುಷ್ಯಾಂಬುಜ ನಿರೂಪಿಸಿದರು. ವಿದ್ಯಾರ್ಥಿ ಒಕ್ಕೂಟದ ಸಲಹೆಗಾರ ಡಾ. ಅಜಂತಾ ವಂದಿಸಿದರು.
ಸಾ.ರಾ. ಸಭಾಂಗಣ ಉದ್ಘಾಟನೆ ನಾಳೆ
ಮೈಸೂರು: ಇಲ್ಲಿನ ದಟ್ಟಗಳ್ಳಿಯಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಸಾ.ರಾ. ಸಭಾಂಗಣವನ್ನು ಆ.12ರ ಬೆಳಗ್ಗೆ 10ಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಚನ್ನಮ್ಮ ದೇವೇಗೌಡ ಉದ್ಘಾಟಿಸುವರು. ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸುವರು. ಸಚಿವ ವಿ.ಶ್ರೀನಿವಾಸಪ್ರಸಾದ್, ನಟ ಪುನೀತ್ ರಾಜ್ಕುಮಾರ್ ಭಾಗವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

