15ಕ್ಕೆ ಗೀತಗಾಯನ ವಿಶಿಷ್ಟ ಕಾರ್ಯಕ್ರಮ
ಅರಸೀಕೆರೆ: ಬೆಳ್ಳಿಮಂಡಲ ಜಿಲ್ಲಾ ಸಮಿತಿ ಹಾಸನ ಹಾಗೂ ಅರಸೀ ಸಾಂಸ್ಕತಿಕ ವೇದಿಕೆ ಅರಸೀಕೆರೆ ಇವರ ಸಂಯುಕ್ತಾಶ್ರಯದಲ್ಲಿ ಆ.15ರಂದು ಸಂಜೆ 5 ಗಂಟೆಗೆ ವಿಶ್ವ ಭಾರತಿಗೆ ಕನ್ನಡದಾರತಿ ಎಂಬ ನಾಡು ನುಡಿ ಕುರಿತಾದ ವಿಶೇಷ ಗೀತಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ವ್ಯವಸ್ಥಾಪಕ ಜಾವಗಲ್ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಖ್ಯಾತ ಜನಪ್ರಿಯ ಗಾಯಕರು ಹಾಗೂ ರಾಗ ಸಂಯೋಜಕ ಎಂ.ಸುಧೀರ್, ಮಲ್ಲಿಗೆ ಸುಧೀರ್ ಅವರನ್ನೊಳಗೊಂಡ ತಂಡ ಸಮೂಹ ಗಾಯನದಲ್ಲಿ ಹಾಡಲಿಚ್ಚಿಸುವ ವಿದ್ಯಾರ್ಥಿಗಳಿಗೆ ಆ.9 ಮತ್ತು 10ರಂದು ರೋಟರಿ ಭವನದಲ್ಲಿ ವಿಶೇಷ ತರಬೇತಿ ಹಮ್ಮಿಕೊಂಡಿದ್ದಾರೆ. ಆಸಕ್ತರು ದೂ 9964548264 ಸಂಪರ್ಕಿಸಬಹುದು.
ನೇಮಕಾತಿಗೆ ಅರ್ಜಿ
ಹಾಸನ: ಸ್ಟಾಫ್ ಸೆಲೆಕ್ಷನ್ ಕಮಿಷನ್ ವತಿಯಿಂದ ಡಾಟಾ ಎಂಟ್ರಿ ಆಪರೇಟರ್ ಹಾಗೂ ಲೋಯರ್ ಡಿವಿಷನ್ ಕ್ಲರ್ಕ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು 12ನೇ ತರಗತಿ ಅಥವಾ ತತ್ಸಮಾನ ಅಥವಾ ಉನ್ನತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವಯೋವುತಿ 1-8-2013ಕ್ಕೆ 27 ವರ್ಷದೊಳಗಿರಬೇಕು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಆಗಸ್ಟ್ 16 ಕೊನೆಯ ದಿನ. ಆ.14 ಹಾಗೂ 16ರ ಸಂಜೆ 5 ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. http//ssconline.nic.in, http//ssconline2.gov.in ಹೆಚ್ಚಿನ ಮಾಹಿತಿಗೆ ದೂ 080-25502520, 9483862020 ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

