ಸಮುದಾಯ ಸಂಘಟಿತರಾದರೆ ಮಾತ್ರ ಸವಲತ್ತು ಲಭ್ಯ
ಕ.ಪ್ರ.ವಾರ್ತೆ ಅರಸೀಕೆರೆ ಆ.12
ಸಣ್ಣ ಪುಟ್ಟ ಸಮುದಾಯ ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಸರ್ಕಾರದ ಎಲ್ಲ ರೀತಿಯ ಸವಲತ್ತು ಪಡೆಯಲು ಸಾಧ್ಯ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಕಿವಿಮಾತು ಹೇಳಿದರು.
ಪಟ್ಟಣದ ರೋಟರಿ ಭವನದಲ್ಲಿ ಏರ್ಪಡಿಸಿದ್ದ ಯಾದವರ ನೌಕರರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಣ್ಣ ಪುಟ್ಟ ಸಮುದಾಯವಾದರೂ, ಯಾವುದೇ ನಿರ್ಲಕ್ಷಿಸುವುದು ಸರಿಯಲ್ಲ. ಆದರೆ, ಚುನಾವ ಣಾ ಸಮಯದಲ್ಲಿ ಮಾತ್ರ ಅಂತಹ ಸಮುದಾಯಗಳ ಮನವೊಲಿಸಲು ರಾಜಕೀಯ ಮುಖಂಡರು ಇನ್ನಿಲ್ಲದ ಆಮಿಷವೊಡ್ಡಿ, ಅವರ ಮತಗಳನ್ನು ಪಡೆಯಲು ನಿರಂತರವಾಗಿ ಪ್ರಯತ್ನಿಸುತ್ತಾರೆ ಎಂದು ವಿಷಾದಿಸಿದರು.
ಮುಖ್ಯವಾಹಿನಿಗೆ ಬನ್ನಿ: ಚಿಕ್ಕ ಪುಟ್ಟ ಸಮುದಾಯಗಳು ಕೂಡ ಚುನಾವಣೆಯ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಂಡರೆ ಮಾತ್ರ ತಮ್ಮ ಶಕ್ತಿ ಏನೆಂಬುದನ್ನು ತೋರಿಸಲು ಸಾಧ್ಯ ಎಂದರು.
ಹಿತ ಕಾಯ್ದುಕೊಳ್ಳಲು ಸಂಘದ ಆಗತ್ಯ: ನೌಕರರ ಸಂಘ ಸಮಾಜದ ದೀನ, ದಲಿತರ ಸೇವೆ ಮಾಡುವ ಮೂಲಕ ಸಂಘದ ಧ್ಯೇಯೋದ್ದೇಶಗಳನ್ನು ಈಡೇರಿಸಿಕೊಳ್ಳಬೇಕು. ತಮ್ಮ ಹಿತ ಕಾಯ್ದುಕೊಳ್ಳಲು ಸಂಘದ ಆಗತ್ಯವಿದೆ. ಸಂಘದ ನ್ಯಾಯಯುತ ಬೇಡಿಕೆಗಳಿಗೆ ಎಂದಿಗೂ ನಮ್ಮ ಸಹಕಾರ ಇರುವುದಾಗಿ ಭರವಸೆ ನೀಡಿದರು.
ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ತಾಲೂಕು ಯಾದವ ಸಮಾಜದ ಅಧ್ಯಕ್ಷ ಬಂಡೀಗೌಡ್ರು ರಾಜಣ್ಣ, ಜಿಪಂ ಸದಸ್ಯ ಹುಚ್ಚೇಗೌಡ, ಎಪಿಎಂಸಿ ಸದಸ್ಯ ಅಜ್ಜಪ್ಪ ಮತ್ತಿತರರು ಮಾತನಾಡಿದರು.
ಯಾದವ ಸಮಾಜದ ಮುಖಂಡರಾದ ಜವನಪ್ಪ, ಜಯಣ್ಣ, ನಾರಾಯಣ, ಮೋಕ್ಷರಾಜ್, ಬಸವಲಿಂಗಪ್ಪ, ಸುಬ್ರಹ್ಮಣ್ಯ ಬಾಬು ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

