ಹಾಸನ

ಪಿಯು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ

Published On :

ಬೇಲೂರು: ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಪ್ರಮುಖ ಘಟ್ಟ ಎಂದು ಇಲ್ಲಿನ ಹೊಯ್ಸಳ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಅಂಬುಜಾಕ್ಷಿ ಹೇಳಿದರು. ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯು ವಿದ್ಯಾರ್ಥಿಗಳು ಏರ್ಪಡಿಸಿದ್ದ ಸ್ವಾಗತ ಕೋರುವ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿ ಜೀವನ ಗೋಲ್ಡ್ನ್ ಲೈಫ್ ಎಂದು ಹೇಳುತ್ತಾರೆ. ಆದರೆ ಅದನ್ನು ಹಾಗೆ ಮಾಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. ನಿಮ್ಮ ಚಿಂತನೆಗಳು ಉತ್ತಮವಾಗಿದ್ದರೆ, ವ್ಯಕ್ತಿತ್ವ ಶಿಸ್ತುಬದ್ಧವಾಗಿದ್ದರೆ ಆಗ ಅದು ಗೋಲ್ಡ್ಲೈಫ್ ಆಗಲಿದೆ ಎಂದು ತಿಳಿಸಿದರು. ಪಿಯು ಹಂತದಲ್ಲಿ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಕಷ್ಟವೆನ್ನುವುದು ಹಲವು ತಜ್ಞರ ವೈದ್ಯರ, ಪರಿಣಿತರ, ಮನೋಶಾಸ್ತ್ರಜ್ಞರ ಅಭಿಪ್ರಾಯವಾದರೂ ಮನಸ್ಸಿನ ಮುಂದೆ ಯಾವುದೂ ಇಲ್ಲ. ಎಲ್ಲವೂ ನಿಮ್ಮ ಮನಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದರು. ಅಧ್ಯಾಪಕ ಚಂದ್ರಶೇಖರಪ್ಪ ವಿದ್ಯಾರ್ಥಿಗಳಿಗೆ ಲೇಖನಿ ವಿತರಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಧರ್ಮೇಗೌಡ ಮಾತನಾಡಿ, ಸತತ ಪರಿಶ್ರಮದಿಂದ ವಿದ್ಯಾರ್ಥಿಗಳು ಎಂಥದ್ದೇ ಸಾಧನೆ ಮಾಡಬಹುದು ಎಂದು ಹೇಳೀದರು. ಉಪನ್ಯಾಸಕ ಸಿದ್ದರಾಮೇಗೌಡ ಮಾತನಾಡಿ, ಗುರಿ ಮುಟ್ಟಬೇಕಾದರೆ ಸತತ ಪರಿಶ್ರಮ, ಪ್ರಯತ್ನ ಬೇಕಿದೆ. ಕಾಲೇಜಿನ ಕಲಿಕೆ ಅವಧಿ ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಯೋಚನಾ ಲಹರಿ ಇದಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.