ಯುವಕರೇ ಭ್ರಷ್ಟಾಚಾರ ತಡೆಗೆ ಮುಂದಾಗಿ...
ಕ.ಪ್ರ.ವಾರ್ತೆ ಮೈಸೂರು ಜು. 16
ಭ್ರಷ್ಟಚಾರವನ್ನು ತಡೆಯಲು ಯುವಕರು ಮುಂದೆ ಬರಬೇಕು ಹಾಗೂ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಸಿಕ್ರಂ ಮಾನವ ಹಕ್ಕುಗಳ ಸಂಸ್ಥೆಯ ಪ್ರಸನ್ನ ಕರೆ ನೀಡಿದರು.
ಸಿದ್ದಾರ್ಥನಗರದಲ್ಲಿರುವ ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್ ಸಂಸ್ಥೆಯ ಅಂಧ ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯದಲ್ಲಿ 67ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಯುವಶಕ್ತಿಯು ಮುಖ್ಯ ಸಂಪನ್ಮೂಲವಾಗಿದ್ದು, ದೇಶದ ಸ್ವಾಸ್ಥ್ಯ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸಬೇಕಾಗುತ್ತದೆ.
ಅದರಲ್ಲೂ ವಿಕಲ ಚೇತನ ವ್ಯಕ್ತಿಗಳು ತಮ್ಮ ಹಕ್ಕುಗಳು ಹೊಂದುವಲ್ಲಿ ಇನ್ನಷ್ಟು ಜಾಗೃತರಾಗಬೇಕಾಗುತ್ತದೆ ಎಂದು ಹೇಳಿದರು. ಎಂ.ಎನ್. ಪ್ರಶಾಂತ್ ಮಾತನಾಡಿ, ದೇಶದಲ್ಲಿ ಸ್ವಾತಂತ್ರ್ಯ ಸಿಕ್ಕಿ ದಶಕಗಳೇ ಕಳೆದಿದ್ದರೂ ಸಮಾಜದಲ್ಲಿ ತಾರತಮ್ಯ ಧೋರಣೆ, ಬಂಡವಾಳ ಶಾಹಿಗಳ ಸರ್ವಾಧಿಕಾರ ತಲೆದೋರಿದೆ. ಇದನ್ನು ಕಡಿವಾಣ ಹಾಕಲು ಮುಂದಾದರು ಎಲ್ಲರೂ ಶ್ರಮಿಸಬೇಕಿದೆ ಎಂದು ತಿಳಿಸಿದರು. ಸಂಸ್ಥೆಯ ಜಯಮ್ಮ ಧ್ವಜಾರೋಹಣ ಮಾಡಿದರು. ಎನ್ಎಫ್ಬಿ ವ್ಯವಸ್ಥಾಪಕ ಎಂ. ಪ್ರಭುಸ್ವಾಮಿ ನಿರೂಪಿಸಿದರು. ನಿಲಯದ ಅಂಧ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟದ ವಿಚಾರಗಳನ್ನು ಮೆಲುಕು ಹಾಕಿದರು. ಸಿಹಿ ಹಂಚಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

